ಹಾಸನ ಕೋವಿಡ್ ಆಸ್ಪತ್ರೆಯಲ್ಲಿ ಭಾರೀ ಅವ್ಯವಸ್ಥೆ; ವಿಡಿಯೋ ಮಾಡಿ ಸಂಕಷ್ಟ ತೋಡಿಕೊಂಡ ಸೋಂಕಿತರು

ಈ ವಿಡಿಯೋ ಒಂದು ವಾರದ ಹಿಂದೆ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿದೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಮಾತನಾಡಿರುವ ಕೆಲವರು ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ತಾವು ಆಸ್ಪತ್ರೆಯಲ್ಲಿ‌ ಇದ್ದಾಗ ತಾವು ಅನುಭವಿಸಿದ ಕಷ್ಟವನ್ನು ವಿಡಿಯೋ ಮಾಡಿ, ಈಗ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದಂತೆ ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹಾಸನ ಕೋವಿಡ್ ಕೇರ್ ಸೆಂಟರ್.

ಹಾಸನ ಕೋವಿಡ್ ಕೇರ್ ಸೆಂಟರ್.

  • Share this:
ಹಾಸನ; ಕೋವಿಡ್ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸಾ ವಿಧಾನ, ಅಸಮರ್ಪಕ ವ್ಯವಸ್ಥೆಯ ಬಗ್ಗೆ ಸೋಂಕಿತರು ದಿನ ನಿತ್ಯ ಒಂದಲ್ಲ ಒಂದು ಆರೋಪ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ಹಾಸನದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೂ ಕೂಡ ತಮಗೆ ಸರಿಯಾದ ಚಿಕಿತ್ಸೆ ಮತ್ತು ಊಟ ತಿಂಡಿ ಸಿಗುತ್ತಿಲ್ಲ ಎಂದು ಆರೋಪಿಸಿ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ದರೆ ನಾವು ಕೊರೋನಾದಿಂದ ಹೇಗೆ ಹುಷಾರಾಗುತ್ತೇವೆ. ಬರೀ ಅನ್ನ ಬಿಟ್ಟರೆ ನಮಗೆ ಬೇರೆ ಆಹಾರ ಕೊಡುತ್ತಿಲ್ಲ. ಹೀಗೆ ಆರೋಪ ಮಾಡುತ್ತಿರೋರು  ಬೇರೆ ಯಾರೂ ಅಲ್ಲ ಸ್ವತಃ ಕೊರೋನಾ ಸೋಂಕಿಗೆ ರೋಗಕ್ಕೆ ತುತ್ತಾಗಿ ಹಾಸನದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು.

ಹೌದು ಇವರು ಹಾಸನದ ಕೋವಿಡ್ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ನಮಗೆ ಆರಂಭದ ಐದು ದಿನ ಮಾತ್ರ ಮೆಡಿಸಿನ್ ಕೊಟ್ರು. ಈಗ ಮೆಡಿಸಿನ್ ಕೊಡ್ತಿಲ್ಲ. ಬರೀ ಅನ್ನ ಕೊಡ್ತಾರೆ. ಮೊಟ್ಟೆ ಮುದ್ದೆ ಕೊಡ್ತಿಲ್ಲ. ಪ್ರತಿ ಟೆಸ್ಟ್‌ನಲ್ಲೂ ಪಾಸಿಟಿವ್ ಬರ್ತಿದೆ ಅಂತಾ ಹೊರಗೆ ಕಳುಹಿಸುತ್ತಿಲ್ಲ. ನಮಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ರೆ ನಾವು ಹೇಗೆ ಹುಷಾರಾಗುತ್ತೇವೆ ಎಂದು ವಿಡಿಯೋದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಕೆಲವರು ಹುಷಾರಾಗಿ ಹೋದ್ರೆ ಮತ್ತೆ ಕೆಲವರು ಹೊಸ ರೋಗಿಗಳು ಬರ್ತಿದ್ದಾರೆ. ಹೀಗೆ ಬರುವ ಹೊಸ ರೋಗಿಗಳಿಗೆ ನಮ್ಮ ಜೊತೆ ಚಿಕಿತ್ಸೆ ಕೊಟ್ಟರೆ ನಮ್ಮ ಕಾಯಿಲೆ ಹೇಗೆ ಹುಷಾರಾಗುತ್ತೆ. ಸೋಂಕಿತರಲ್ಲಿ ನಾವು ಕೆಲವರು ರೈತರಿದ್ದೇವೆ. ಬೆಳೆದು ನಿಂತ ಬೆಳೆ ಕಟಾವಿಗೂ ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೆ ಸೂಕ್ತ ರೀತಿಯಲ್ಲಿ ಸಹಾಯ ಮಾಡಿ ಎಂದು ಕೊರೋನಾ ಸೋಂಕಿತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಇದನ್ನು ಓದಿ: Sunday lockdown: ಸಂಡೇ ಲಾಕ್‌ಡೌನ್, ನಿಯಮ ಮೀರಿ ವಾಹನಗಳು ರಸ್ತೆಗೆ ಇಳಿದರೆ ಮುಲಾಜಿಲ್ಲದೆ ಕೇಸ್‌; ಭಾಸ್ಕರ್‌ ರಾವ್

ಈ ವಿಡಿಯೋ ಒಂದು ವಾರದ ಹಿಂದೆ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿದೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಮಾತನಾಡಿರುವ ಕೆಲವರು ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ತಾವು ಆಸ್ಪತ್ರೆಯಲ್ಲಿ‌ ಇದ್ದಾಗ ತಾವು ಅನುಭವಿಸಿದ ಕಷ್ಟವನ್ನು ವಿಡಿಯೋ ಮಾಡಿ, ಈಗ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದಂತೆ ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಏನೇ ಆಗಲಿ ಇನ್ನು ಮುಂದಾದರೂ  ಸೋಂಕಿತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದ್ದು ಸರ್ಕಾರದ ಕರ್ತವ್ಯ ಆಗಿದೆ.
Published by:HR Ramesh
First published: