HOME » NEWS » District » CORONAVIRUS NEGATIVE REPORT SHOULD COMPULSORY IN MYSURU FROM 10 TO 20TH SAYS DC ROHINI SINDHURI RHHSN PMTV

ಮೈಸೂರಿನಲ್ಲಿ ಏ.10ರಿಂದ 20ರತನಕ ಎಲ್ಲೋದ್ರು ಕೇಳ್ತಾರೆ ಕೊರೋನಾ ನೆಗೆಟಿವ್‌ ವರದಿ; ಕಠಿಣ‌ ನಿಯಮ ಜಾರಿ ಮಾಡಿದ ಡಿಸಿ ರೋಹಿಣಿ ಸಿಂಧೂರಿ

ಬೆಂಗಳೂರಿನಲ್ಲಿ ಪ್ರತಿನಿತ್ಯ 5 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರಿನಿಂದ ಸಾವಿರಾರು ಜನರು ಮೈಸೂರಿಗೆ ಬರುತ್ತಿದ್ದಾರೆ. ಮೈಸೂರಿನಿ ಹಿತದೃಷ್ಟಿಯಿಂದ ನೆಗೆಟಿವ್ ವರದಿ‌ ತಂದರೆ ಒಳ್ಳೆಯದು. ಜನರೆ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು ಅಂತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

news18-kannada
Updated:April 8, 2021, 6:06 PM IST
ಮೈಸೂರಿನಲ್ಲಿ ಏ.10ರಿಂದ 20ರತನಕ ಎಲ್ಲೋದ್ರು ಕೇಳ್ತಾರೆ ಕೊರೋನಾ ನೆಗೆಟಿವ್‌ ವರದಿ; ಕಠಿಣ‌ ನಿಯಮ ಜಾರಿ ಮಾಡಿದ ಡಿಸಿ ರೋಹಿಣಿ ಸಿಂಧೂರಿ
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ.
  • Share this:
ಮೈಸೂರು: ಮೈಸೂರಿನಲ್ಲಿ ಮುಂದಿನ 10 ದಿನಗಳ ಕೊರೋನಾ ಎಮರ್ಜೆನ್ಸಿ ಹೇರಲಾಗಿದ್ದು, ಏ.10ರಿಂದ ಏ.20ರವರೆಗೆ ಕೋವಿಡ್ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಮೈಸೂರಿನಲ್ಲಿ ಯಾವುದೇ ಜನಸಂದಣಿ ಜಾಗಕ್ಕೆ ಹೋಗೋಕೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವ ಜಿಲ್ಲಾಡಳಿತ, ಕೊರೋನಾ ನಿಯಂತ್ರಣಕ್ಕೆ ತೀಕ್ಷ್ಮ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇಂದು ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿ ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ದಿನೆ ದಿನೆ ಹೆಚ್ಚುತ್ತಿರುವ ಕೊರೋನಾ ಪ್ರರಕರಣಗಳ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಇದು ಲಾಕ್‌ಡೌನ್‌ ಅಲ್ಲ, ನಾವು ಯಾವುದೇ ಪ್ರವಾಸಿತಾಣವನ್ನು ಮುಚ್ಚೋದಿಲ್ಲ. ಆದರೆ ಎಲ್ಲಿಗೆ ಹೋಗಬೇಕು ಅಂದ್ರು ನೀವು ಕೊರೋನಾ ನೆಗೆಟಿವ್‌ ರಿಪೋರ್ಟ್ ಇಟ್ಕೊಂಡು ಓಡಾಡಬೇಕು ಎಂದ ಖಡಕ್ ಸೂಚನೆ ನೀಡಿದರು.

ಮೈಸೂರು ಅರಮನೆ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ, ಕೆಆರ್‌ಎಸ್, ಅಷ್ಟೇ ಯಾಕೇ ಮೈಸೂರಿನ ಯಾವುದೇ ಚಿತ್ರಮಂದಿರಕ್ಕೆ ಹೋಗುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನೀವು ಈಗಲೇ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಅದರ ನೆಗೆಟಿವ್‌ ರಿಪೋರ್ಟ್‌ ಅನ್ನು ನಿಮ್ಮ ಜೇಬಿನಲ್ಲಿಟ್ಟುಕೊಂಡಿರಬೇಕು. ಇಂತಹದೊಂದು ಅಚ್ಚರಿ ಅನಿಸುವಂತಹ ಆದೇಶವನ್ನು ಇಂದು ಮೈಸೂರು ಜಿಲ್ಲಾಡಳಿತ ಜಾರಿ ಮಾಡಿದೆ. ಮುಂದಿನ 10 ದಿನಗಳು ಅಂದ್ರೆ ಏಪ್ರಿಲ್‌ 10ರಿಂದ ಏಪ್ರಿಲ್‌ 20ರವರೆಗೆ ಸಾಲು ಸಾಲು ರಜೆ ಇದೆ. ಆ ರಜೆ ದಿನಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಮೈಸೂರಿನಲ್ಲಿ ಹೆಚ್ಚೆಚ್ಚು ಓಡಾಟ ಮಾಡ್ತಾರೆ. ಇದರಿಂದ ಕೊರೋನಾ ಎರಡನೆ ಅಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಅದರ ಕಡಿವಾಣಕ್ಕಾಗಿ ಜಿಲ್ಲಾಡಳಿತ ಮೂರು ನಿಯಮಗಳನ್ನು ಜಾರಿ ಮಾಡಿದೆ.

ಮೈಸೂರಿನ ಯಾವುದೇ ಪ್ರವಾಸಿತಾಣಕ್ಕೆ ಭೇಟಿ ನೀಡಬೇಕು ಅಂದ್ರೆ ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತೋರಿಸಬೇಕು. ಮೈಸೂರಿನ ಪಾರ್ಟಿ ಹಾಲ್‌ಗಳು, ರೆಸಾರ್ಟ್‌ಗಳು, ರೀಕ್ರೀಯೆಷನ್‌ ಕ್ಲಬ್‌ಗಳಿಗೂ ತೆರಳಬೇಕಾದ್ರೆ ನೆಗೆಟಿವ್‌ ರಿಪೋರ್ಟ್‌ ಇರಬೇಕು. ಇನ್ನು ಒಂದು ಹೆಜ್ಜೆ ಮುಂದೆ ಹೋದ ಜಿಲ್ಲಾಡಳಿತ ಮೈಸೂರಿನಲ್ಲಿ ಚಿತ್ರಮಂದಿರದಲ್ಲಿ ಚಿತ್ರ ವಿಕ್ಷಣೆಗೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಚಿತ್ರವಿಕ್ಷಣೆ ಮಾಡಬೇಕಾದರೆ ನೆಗೆಟಿವ್ ರಿಪೋರ್ಟ್‌ ಕಡ್ಡಾಯವಾಗಿ ತೋರಿಸಬೇಕು, ಇಲ್ಲವಾದಲ್ಲಿ ಅಂತಹವರನ್ನು ಅಲ್ಲಿಂದ ವಾಪಸ್ ಕಳುಹಿಸುತ್ತೇವೆ ಎಂದು ಡಿಸಿ ಸಿಂಧೂರಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕಾರ್ಯಚರಣೆ ನಡೆಸೋದಕ್ಕಾಗಿ, 300 ಜನ ಹೋಂಗಾರ್ಡ್ ನೇಮಕ ಮಾಡಿದ್ದು, ಅವರು ಪರಿಶೀಲನೆ ಮಾಡಿದ ನಂತರವಷ್ಟೇ ಚಿತ್ರಮಂದಿರಕ್ಕೆ‌ ತೆರಳಲು ಅನುಮತಿ ನೀಡುತ್ತಾರೆ. ಇದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಅನ್ವಯ ಆಗಲಿದೆ ಎಂದು ತಿಳಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಆದೇಶಕ್ಕೆ ಥಿಯೇಟರ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈಗಷ್ಟೇ ಥಿಯೇಟರ್ ಓಪನ್‌ ಆಗಿದೆ. ಈ ನಡುವೆ ಈ ಆದೇಶ ಥಿಯೇಟರ್ ಮಾಲೀಕರಿಗೆ ಸಂಕಷ್ಟ ತಂದಿದೆ. ಇಂದು ಒಂದು ರೀತಿಯಲ್ಲಿ ಲಾಕ್ ಡೌನ್ ಇದ್ದಂತೆ. ಯಾರು ಕೂಡ‌ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಥಿಯೇಟರ್ ಕಡೆ‌ ಬರಲ್ಲ. ಸಿನಿಮಾ ನೋಡಬೇಕು ಅಂತ ಯಾರು ಟೆಸ್ಟ್ ಮಾಡಿಸಲು ಮುಂದಾಗಲ್ಲ. ಈಗಾಗಲೇ ಶೇ. 50 ಸೀಟು ಭರ್ತಿ ಆದೇಶವೇ ದೊಡ್ಡ ಹೊಡೆತ ಕೊಟ್ಟಿದೆ. ಈ‌ ನಡುವೆ ಈ ಆದೇಶ ನಮಗೆ ಕಷ್ಟವಾಗುತ್ತೆ ಈ ಆದೇಶವನ್ನು ಮರುಪರಿಶೀಲನೆ ಮಾಡಿ ಅಂತ ಮೈಸೂರು ಥಿಯೇಟರ್ ಮಾಲೀಕರ ಸಂಘದ ಕಾರ್ಯದರ್ಶಿ ರಾಜಾರಾಮ್ ಮನವಿ ಮಾಡಿದ್ದಾರೆ.

ಇನ್ನು ನಗರ ಪ್ರದೇಶಗಳಲ್ಲಿ ಜಾತ್ರೆ, ಊರು ಹಬ್ಬಗಳನ್ನು ರದ್ದು ಮಾಡಲಾಗಿದೆ. ಒಳಾಂಗಣದಲ್ಲಿ 200 ಜನ, ಹೊರಾಂಗಣದಲ್ಲಿ 500 ಜನಕ್ಕೆ ಅವಕಾಶ ಇದೆ. ಆದರೆ ಅದಕ್ಕು ಎಸಿಪಿ ಇಂದ‌ ಅನುಮತಿ ಪಡೆಯಬೇಕು‌. ಅನುಮತಿ ಪಡೆಯುವವರು ಕೋವಿಡ್ ನಿಯಮ ಪಾಲನೆ ಕಡ್ಡಾಯ ಮಾಡಿದರೆ ಮಾತ್ರ ಕಾರ್ಯಕ್ರಮ ನಡೆಸೋದಕ್ಕೆ ಬಿಡ್ತಿವಿ. ಮದುವೆ ಮನೆಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ ಇಲ್ಲ. ಆದರೆ ಕೋವಿಡ್ ನಿಯಂತ್ರಣಕ್ಕೆ ಕೆಲ ನಿರ್ಬಂಧ ಹಾಕಿದ್ದೇವೆ ಅಷ್ಟೇ. ಪ್ರವಾಸಿತಾಣಗಳಿಗೆ ಬರುವವರು ಆರೋಗ್ಯ ದೃಷ್ಟಿಯಿಂದ ಕೋವಿಡ್ ಟೆಸ್ಟ್ ಮಾಡಿಸಿದರೆ ಒಳ್ಳೆಯದು‌. ಮಾರುಕಟ್ಟೆಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಸಭೆ ಸಮಾರಂಭಕ್ಕೆ ಅನುಮತಿ ಕಡ್ಡಾಯ ಅಂತ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಈ ಜೊತೆಗೆ ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೋವಿಡ್ ಟೆಸ್ಟ್ ವರದಿ ತಂದರೆ ಒಳ್ಳೆಯದು. ತರಲೇಬೇಕು ಎಂಬುದು ಕಡ್ಡಾಯವಲ್ಲ. ಆದರೆ ಬೆಂಗಳೂರಿನಲ್ಲಿ ಪ್ರತಿನಿತ್ಯ 5 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರಿನಿಂದ ಸಾವಿರಾರು ಜನರು ಮೈಸೂರಿಗೆ ಬರುತ್ತಿದ್ದಾರೆ. ಮೈಸೂರಿನಿ ಹಿತದೃಷ್ಟಿಯಿಂದ ನೆಗೆಟಿವ್ ವರದಿ‌ ತಂದರೆ ಒಳ್ಳೆಯದು. ಜನರೆ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕು ಅಂತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.
Published by: HR Ramesh
First published: April 8, 2021, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories