ಮೈಸೂರಿನಲ್ಲಿ ದಿನಕ್ಕೆ 5 ಸಾವು, 50 ಪಾಸಿಟಿವ್ ಕೇಸ್; ವಾರದಿಂದ ಕೊರೋನಾ ವೇಗಕ್ಕೆ ಕಡಿವಾಣವೇ ಇಲ್ಲ

ನಿನ್ನೆಯವರೆಗೆ ಮೈಸೂರಿನಲ್ಲಿ ಕೊರೋನಾಗೆ 28 ಮಂದಿ ಬಲಿಯಾಗಿದ್ದು, ನಿನ್ನೆ ಒಂದೇ ದಿನ 83 ಮಂದಿಗೆ ಪಾಸಿಟಿವ್ ದೃಢವಾಗಿತ್ತು. ಮೈಸೂರಿನಲ್ಲಿ 385 ಮಂದಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 775ಕ್ಕೆ ಏರಿಕೆಯಾಗಿತ್ತು.

news18-kannada
Updated:July 12, 2020, 3:43 PM IST
ಮೈಸೂರಿನಲ್ಲಿ ದಿನಕ್ಕೆ 5 ಸಾವು, 50 ಪಾಸಿಟಿವ್ ಕೇಸ್; ವಾರದಿಂದ ಕೊರೋನಾ ವೇಗಕ್ಕೆ ಕಡಿವಾಣವೇ ಇಲ್ಲ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಜು.12): ಅರಮನೆ ನಗರಿ ಮೈಸೂರಿನಲ್ಲಿ ಕೊರೋನಾ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವೇ ಆಗ್ತಿಲ್ಲ‌, ಅದರಲ್ಲೂ ಕಳೆದೊಂದು ವಾರದಿಂದ ಕೊರೋನಾ ತನ್ನ ವಿಕಾರ ರೂಪ ತೋರುತ್ತಿದ್ದು, ಮೈಸೂರಿನಲ್ಲಿ ಸೋಂಕಿತರ ಜೊತೆ ಸಾವಿನ ಸಂಖ್ಯೆಯೂ ರಾಕೇಟ್ ವೇಗದಲ್ಲಿ ಏರುತ್ತಿದೆ. ಇಂದು ಮೈಸೂರಿನಲ್ಲಿ ಕೊರೊನಾ ಸ್ಟೋಟಗೊಳ್ಳಲಿದ್ದು ಸಾವಿನ ಜೊತೆ ಸೋಂಕಿತರ ಸಂಖ್ಯೆಯೂ ಹೆಚ್ಚಲಿದೆ.

ಮೈಸೂರಿನಲ್ಲಿ ಇಂದು ಕೊರೋನಾ ರಣಕೇಕೆ ಹಾಕಿದ್ದು, ಜಿಲ್ಲೆಯಲ್ಲಿ ಇಂದು 5 ಕೊರೋನಾ ಸಾವು ಸಂಭವಿಸಿದೆ. ಇಂದು ಸಹ 70ರ ಗಡಿ ದಾಟಲಿರುವ ಪಾಸಿಟಿವ್ ಸಂಖ್ಯೆಗಳು ದಿನೇ ‌ದಿನೇ ಏರಿಕೆಯಾಗುತ್ತಿರುವುದನ್ನು ನೋಡಿದರೆ ಇನ್ನೆರಡು ದಿನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1000 ಗಡಿ ಮುಟ್ಟಲಿದೆ. ಸದ್ಯ 400ರ‌ ಗಡಿ ಮುಟ್ಟಿರುವ ಆಕ್ಟಿವ್ ಕೇಸ್‌ಗಳಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 800ಕ್ಕಿಂತ ಹೆಚ್ಚಾಗಿದೆ. ಇಂದು ಸೋಂಕು ಬಂದಿರುವುದಲ್ಲಿ ಟೋಲ್ ಸಿಬ್ಬಂದಿ, ಪೊಲೀಸರು, ಅವಳಿ ಮಕ್ಕಳಲ್ಲೂ ಕೊರೋನಾ ದೃಢವಾಗಿದೆ.

ನಿನ್ನೆಯವರೆಗೆ ಮೈಸೂರಿನಲ್ಲಿ ಕೊರೋನಾಗೆ 28 ಮಂದಿ ಬಲಿಯಾಗಿದ್ದು, ನಿನ್ನೆ ಒಂದೇ ದಿನ 83 ಮಂದಿಗೆ ಪಾಸಿಟಿವ್ ದೃಢವಾಗಿತ್ತು. ಮೈಸೂರಿನಲ್ಲಿ 385 ಮಂದಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 775ಕ್ಕೆ ಏರಿಕೆಯಾಗಿತ್ತು. ಹೀಗೆ ಸಾಂಸ್ಕೃತಿಕ ನಗರಿಯಲ್ಲಿ ಅಟ್ಟಹಾಸ ತೋರುತ್ತಿರುವ ಕೊರೊನಾಗೆ ಇಂದು ಸಹ ಸೋಂಕಿತರು ಬಲಿಯಾಗಿದ್ದಾರೆ. ಸಂಜೆಯ ಹೆಲ್ತ್ ಬುಲೆಟಿನ್‌ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಘೋಷಣೆಯಾಗಲಿದೆ.

ರಾಮನಗರದಲ್ಲಿ ಕೊರೋನಾ ನಿಗ್ರಹಕ್ಕೆ ಆಯುರ್ವೇದ ರಾಮಬಾಣ; ಆಯುಷ್ ಇಲಾಖೆಯಿಂದ ಸಿಗಲಿದೆ ಮಾತ್ರೆ, ಪೌಡರ್

ಬೆಂಗಳೂರು ಜೊತೆ ಮೈಸೂರು ಜಿಲ್ಲೆಯನ್ನು ಲಾಕ್‌ಡೌನ್ ಮಾಡಬೇಕು ಎನ್ನುವ ಅಭಿಪ್ರಾಯ ಕೇಳಿ ಬಂದಿದ್ದು,ಲಾಕ್‌ಡೌನ್ ಮಾಡಲಿಲ್ಲ ಅಂದರೂ ಬೆಂಗಳೂರು ಮೈಸೂರು ಸಂಚಾರ ನಿಲ್ಲಿಸಬೇಕು ಅಂತ ಮೈಸೂರು ಜನರ ಒಕ್ಕೊರಲ ಅಭಿಪ್ರಾಯ ಇದೆ.  ಜನರಿಗೆ ಅನುಕೂಲ ಆಗುವುದಾದರೆ ಲಾಕ್‌ಡೌನ್ ಮಾಡಲಿ ಬೇಕಿದ್ದರೆ ಎರಡು ವಾರ ಲಾಕ್‌ಡೌನ್ ಮಾಡಲಿ ಆದರೆ ಕೊರೋನಾವನ್ನು ನಿಯಂತ್ರಣ ಮಾಡಲಿ. ಮೈಸೂರಿನಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಬೇಕು ಅಂತ ಸ್ವತಃ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಕೊರೋನಾ ಎಷ್ಟರ ಮಟ್ಟಿಗೆ ಹಾವಳಿ ನೀಡಿದೆ ಎಂದರೆ ಶಾಸಕ ರಾಮದಾಸ್ ಆಪ್ತ ಸಹಾಯಕನಿಗೆ ಕೊರೋನಾ ತಗುಲಿದ್ದು, ಶಾಸಕ ರಾಮದಾಸ್‌ಗು ಕೊರೋನಾ ಭೀತಿ ಆರಂಭವಾಗಿದೆ. ಸೆಲ್ಪ್ ಕ್ವಾರಂಟೈನ್ ಆಗಿರುವ ಶಾಸಕ ರಾಮದಾಸ್‌ರಿಂದಾಗಿ, ಬಿಜೆಪಿ ಹಲವು ಮುಖಂಡರಲ್ಲಿ ಆತಂಕ ಸೃಷ್ಟಿ ಆಗಿದೆ.
ಮೊನ್ನೆ ಮೊನ್ನೆಯಷ್ಟೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಮಾಡಿದ್ದ ಶಾಸಕ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಲವರನ್ನು ಭೇಟಿ ಮಾಡಿದ್ದರು. ಅಲ್ಲದೇ ಸ್ವತಃ ಥರ್ಮಲ್ ಸ್ಕ್ರೀನಿಂಗ್ ಗನ್ ಮೆಷಿನ್ ಹಿಡಿದು ಬೀದಿ ಬದಿ ವ್ಯಾಪಾರಸ್ಥರ ಟೆಂಪರೇಚರ್ ಚೆಕ್ ಮಾಡಿದ್ದರು. ಶಾಸಕ ಮತ್ತು ಅವರ ಆಪ್ತ ಸಹಾಯಕರು ಸಾಮಾಜಿಕ ಅಂತರವಿಲ್ಲದೆ ಓಡಾಡಿದ್ದರು. ಇದರಿಂದಾಗಿ ಆಪ್ತ ಸಹಾಯಕನಿಗೆ ಕೊರೋನಾ ತಗುಲಿದ್ದು, ಇದರಿಂದಾಗಿ ವಿದ್ಯಾಣ್ಯಪುರಂ ಗೃಹ ಕಚೇರಿ, ಕಾಡಾ ಆವರಣದ ಶಾಸಕರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
Published by: Latha CG
First published: July 12, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading