CoronaVirus: ತುಮಕೂರಿನಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ; ಭಯದಲ್ಲಿ ದಿನದೂಡುತ್ತಿದ್ದಾರೆ ಜನ

ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಲ್ಲಿ ಇಂದು ಒಂದೇ ದಿನ ಅತ್ಯಧಿಕ ಸೋಂಕಿತರು ಪತ್ತೆಯಾಗಿದ್ದು, 16 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ . ಕೊರಟಗೆರೆಯಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಕೊರೋನಾಗೆ ತಾಲ್ಲೂಕಿನಲ್ಲಿ ಮೊದಲ ಬಲಿಯಾಗಿದೆ.

news18-kannada
Updated:July 9, 2020, 3:54 PM IST
CoronaVirus: ತುಮಕೂರಿನಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ; ಭಯದಲ್ಲಿ ದಿನದೂಡುತ್ತಿದ್ದಾರೆ ಜನ
ಸಾಂದರ್ಭಿಕ ಚಿತ್ರ
  • Share this:
ತುಮಕೂರು : ಜಿಲ್ಲೆಯಲ್ಲಿ ಇಂದು ಒಂದೇ ದಿನ 27 ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಓರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ . ಈವರೆಗೆ ಸೊಂಕಿತರ ಸಂಖ್ಯೆ 319 ಕ್ಕೆ ಏರಿಯಾಗಿದ್ದು ಒಟ್ಟು 11 ಜನ ಸೋಂಕಿತರು ಕೊರೋನಾಗೆ ಬಲಿಯಾಗಿದ್ದಾರೆ. ಪರಿಣಾಮ ಜಿಲ್ಲೆಯ ಜನ ಭಯದೊಂದಿಗೆ ದಿನದೂಡುವಂತಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಲ್ಲಿ ಇಂದು ಒಂದೇ ದಿನ ಅತ್ಯಧಿಕ ಸೋಂಕಿತರು ಪತ್ತೆಯಾಗಿದ್ದು, 16 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ . ಕೊರಟಗೆರೆಯಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಕೊರೋನಾಗೆ ತಾಲ್ಲೂಕಿನಲ್ಲಿ ಮೊದಲ ಬಲಿಯಾಗಿದೆ. ಇಂದು ಸೋಂಕು ದೃಡಪಟ್ಟ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಈವರೆಗೆ 11 ಜನರು ಕೋವಿಡ್ ಗೆ ಬಲಿಯಾದಂತಾಗಿದೆ.

ಇದಲ್ಲದೆ, ಮದುಗಿರಿ ತಾಲ್ಲೂಕಿನಲ್ಲಿ ಇಂದು 5 ಜನರಿಗೆ ಸೋಂಕು ದೃಡಪಟ್ಟಿದೆ . ತಿಪಟೂರು ತಾಲ್ಲೂಕಿನಲ್ಲಿ 3 ಜನರಿಗೆ ಸೋಂಕು ದೃಢಪಟ್ಟಿದ್ದು, ನಗರ ಪೊಲೀಸ್ ಠಾಣೆಯ ಮುಖ್ಯ ಪೇದೆಗೂ ಮಾರಣಾಂತಿಕ ಖಾಯಿಲೆ ವಕ್ಕರಿಸಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅಲ್ಲದೆ, ಎಲ್ಲಾ ಪೊಲೀಸರನ್ನು ಗ್ರಾಮಾಂತರ ಠಾಣೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ : India Global Week 2020: ಜಾಗತಿಕ ಹೂಡಿಕೆದಾರರಿಗೆ ಭಾರತ ರೆಡ್ ಕಾರ್ಪೆಟ್ ಹಾಸಲು ಸಿದ್ದವಿದೆ; ಪ್ರಧಾನಿ ನರೇಂದ್ರ ಮೋದಿ

ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ನಗರ ಠಾಣೆಯನ್ನ ಸ್ಯಾನಿಟೈಸ್ ಮಾಡಿದ್ದು ದೊಡ್ಡಪೇಟೆ ಮುಖ್ಯರಸ್ತೆಯ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ಠಾಣೆ ಮುಂಬಾಗ ಸಂಚಾರವನ್ನು ನಿಷೇಧಿಸಲಾಗಿದೆ. ತುಮಕೂರು ತಾಲ್ಲೂಕಿನಲ್ಲಿ ಇಂದು ಇಬ್ಬರಿಗೆ ಸೊಂಕು ದೃಡಪಟ್ಟಿದೆ . ತುಮಕೂರು ಜಿಲ್ಲೆಯಾದ್ಯಂತ ಈವರೆಗೆ 319 ಪ್ರಕರಣಗಳು ವರದಿಯಾಗಿದ್ದು 11 ಜನ ಸೊಂಕಿತರು ಮೃತಪಟ್ಟಿದ್ದಾರೆ .68 ಜನರು ಗುಣಮುಖರಾಗಿದ್ದು 249 ಜನ ಸೊಂಕಿತರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published by: MAshok Kumar
First published: July 9, 2020, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading