HOME » NEWS » District » CORONAVIRUS IS IN CONTROL IN DHARWAD DISTRICT AND NO NEED TO BE PANIC SAYS DC NITESH PATEL HK

ಧಾರವಾಡ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆ, ಅನಗತ್ಯ ಭಯ ಬೇಡ ; ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಕಿಮ್ಸ್ ಆಸ್ಪತ್ರೆಯಲ್ಲಿ 250 ಬೆಡ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ 500 ಬೆಡ್ ಗುರುತಿಸಲಾಗಿದೆ

news18-kannada
Updated:July 3, 2020, 4:42 PM IST
ಧಾರವಾಡ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆ, ಅನಗತ್ಯ ಭಯ ಬೇಡ ; ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
ಸ್ಟಾರ್ಸ್​ ನರ್ಸ್​ಗಳನ್ನು ಸನ್ಮಾನಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​​
  • Share this:
 ಹುಬ್ಬಳ್ಳಿ(ಜು.03): ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವುದು ನಿಯಂತ್ರಣದಲ್ಲಿದೆ. ಸಾರ್ವಜನಿಕರು ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ಹುಬ್ಬಳ್ಳಿಯ ಕಿಮ್ಸ್ ನಲ್ಲಿಂದು ಕೋವಿಡ್ ಕರ್ತವ್ಯ ನಿರ್ವಹಿಸಿ ರೋಗಿಗಳ ಆರೈಕೆ ಮಾಡಿದ ಸ್ಟಾಫ್ ನರ್ಸ್‍ಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಕಿಮ್ಸ್ ಆಸ್ಪತ್ರೆಯಲ್ಲಿ 250 ಬೆಡ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ 500 ಬೆಡ್ ಗುರುತಿಸಲಾಗಿದೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಕೈಗೊಳ್ಳಾಗಿದೆ. ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

ಸದ್ಯದ ಹವಾಮಾನ ಸ್ಥಿತಿಯಲ್ಲಿ ಕೊರೋನಾ ಸೊಂಕು ಹರಡುವ ಸಂಭವ ಹೆಚ್ಚಿದೆ. ಜನರು ಅನಗತ್ಯವಾಗಿ ಓಡಾಡುವುದನ್ನು ಕಡಿಮೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಕೋವಿಡ್ ತಪಾಸಣಾ ಪರೀಕ್ಷೆಗಳನ್ನು ಮಾಡುತ್ತಿರುವುದರಿಂದ ಹೆಚ್ಚು ಪ್ರಕರಣಗಳನ್ನು ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದರು.

ಸ್ಟಾಫ್ ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯ ಸೂಕ್ತ ಪಿ.ಪಿ.ಇ.ಕಿಟ್ ರಕ್ಷಣಾ ಸಲಕರಣೆಗಳೊಂದಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಸೇವೆ ಅನುಪಮವಾದು. ಸಾರ್ವಜನಿಕರು ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ನರ್ಸ್‍ಗಳಿಗೆ ಕೊರೋನಾ ಸೊಂಕು ತಲುಗುಲಿದೆ ಎಂದು ಭಾವಿಸಿ ತಾರತಮ್ಯದಿಂದ ನೋಡುವುದನ್ನು ನಿಲ್ಲಿಸಬೇಕು. ನರ್ಸ್‍ಗಳು ತಮ್ಮ ಕರ್ತವ್ಯ ನಿರ್ವಹಿಸಿದ ನಂತರ ಸಾಮಾನ್ಯರಂತೆ ಇರಬಹುದು. ಕೊರೋನಾ ವಾರಿಯರ್ಸ್‍ಗಳಾದ ಇವರನ್ನು ಗೌರವದಿಂದ ಕಾಣಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ವತಿಯಿಂದ ಕೊರೋನಾ ವಾರಿಯರ್ಸ್ ನರ್ಸ್‍ಗಳಿಗೆ ಸನ್ಮಾನಿಸಿ ಆತ್ಮಸ್ಥೈರ್ಯ ತುಂಬವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಸ್ಟಾಫ್ ನರ್ಸ್‍ಗಳಾದ ಮಂಜುಳಾ ಕೊತರೆ, ಕಮಲಾ, ಬಾಲಕೃಷ್ಣಾ, ಗಂಗಮ್ಮ ಬಳ್ಳಾರಿ, ಶ್ವೇತಾ ಬಣ್ಣಾ, ಆಶಾ ಎಸ್.ಬಿ, ಜ್ಯೊತಿ ಡಿ.ಸಿ, ರಾಜೇಶ್ವರಿ ಹೆಚ್ ಸೇರಿದಂತೆ ಒಟ್ಟು ಹನ್ನೊಂದು ಜನರಿಗೆ ಗೌರವ ಪೂರಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಠಾಣಿ, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಕಿಮ್ಸ್ ಮುಖ್ಯ ಆಡಳಿತಧಿಕಾರಿ ರಾಜಶ್ರೀ ಜೈನಾಪುರ, ಡಾ. ಅರುಣ ಕುಮಾರ್ ಚವ್ಹಾಣ, ಡಾ.ರಾಜಶೇಖರ ದ್ಯಾಬೇರಿ, ಡಾ.ಲಕ್ಷ್ಮೀಕಾಂತ, ಡಾ.ಎಸ್.ವೈ. ಮುಲ್ಕಿ ಪಾಟೀಲ, ವಾರ್ತಾ ಇಲಾಖೆ ಅಧೀಕ್ಷಕ ವಿನೋದ್ ಕುಮಾರ್ .ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಜ್ 18 ವರದಿಯ ಫಲಶೃತಿ  ; ಕೊರೋನಾ ವಾರಿಯರ್ ನರ್ಸ್‌ಗೆ ಸನ್ಮಾನನ್ಯೂಜ್ 18 ಕನ್ನಡ ವರದಿಯಿಂದ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿಯ ಕೊರೋನಾ ವಾರಿಯರ್ ನರ್ಸ್‌ಗೆ ಸನ್ಮಾನ ಮಾಡಿದೆ. ಕಿಮ್ಸ್ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೊಂದಿದ್ದ ನರ್ಸ್‌ಗೆ ಸನ್ಮಾನ ಮಾಡಿದ್ದಾರೆ. ಕಿಮ್ಸ್ ಆಸ್ಪತ್ರೆಯ ಕೊರೋನಾ ವಾರ್ಡ್‌ನಲ್ಲಿ ಸೇವೆ ಸಲ್ಲಿಸುವ ನರ್ಸ್ ಗಂಗಾ ಬಳ್ಳಾರಿ ಸ್ಥಳೀಯರು ತನ್ನನ್ನು ಅಸ್ಪ್ರಶ್ಯರಂತೆ ನೋಡುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದರು.

ಇದನ್ನೂಓದಿ : ಗುಮ್ಮಟನಗರಿ ವಿಜಯಪುರದಲ್ಲಿ ಕೊರೋನಾಘಾತ ; ರೈಲ್ವೆ ಪೊಲೀಸ್ ಠಾಣೆ ಸೀಲ್​​ ಡೌನ್​​

ಬಾಶೆಲ್ ಮಿಷನ್ ಕಾಂಪೌಂಡ್‌ ನಿವಾಸಿಯಾಗಿರುವ ನರ್ಸ್‌ ಗಂಗಾ ಬಳ್ಳಾರಿ, ಅಕ್ಕಪಕ್ಕದ ಮನೆಯವರು ಮತ್ತು ಸಂಬಂಧಿಗಳು ತನ್ನ ಕುಟುಂಬಸ್ಥರನ್ನು ಹತ್ತಿರ ಸೇರಿಸುತ್ತಿಲ್ಲ. ವಠಾರದ ಮಕ್ಕಳು ತನ್ನ ಪುಟ್ಟ ಮಗನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಬೀದಿಯಲ್ಲಿ ಓಡಾಡುವಾಗ ದೂರದಲ್ಲಿ ಇರುವಂತೆ ಹೇಳುತ್ತಾರೆ. ಅಂಗಡಿಗಳಿಗೆ ಹೋದರೆ ಬರಬೇಡಿ ಅನ್ನುತ್ತಾರೆ. ಜನರ ಅಸಭ್ಯ ವರ್ತನೆಯಿಂದ ಕೆಲಸವೇ ಬೇಡವಾಗಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದರು.
Youtube Video

ನರ್ಸ್ ನೋವಿಗೆ ಸ್ಪಂಧಿಸಿದ ಧಾರವಾಡ ಜಿಲ್ಲಾಡಳಿತ, ಗಂಗಾ ಬಳ್ಳಾರಿಗೆ ಶಾಲು ಹೊದಿಸಿ, ಮೈಸೂರು ಪೇಠ ತೊಡಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದೆ. ಕಿಮ್ಸ್‌ ಕೊರೋನಾ ವಾರ್ಡ್‌ನಲ್ಲಿ ಸೇವೆ ಸಲ್ಲಿಸುವ ಇತರ ನರ್ಸ್‌ಗಳಿಗೂ‌ ಇದೇ ವೇಳೆ ಸನ್ಮಾನ ಮಾಡಲಾಗಿದೆ. ಸರ್ಕಾರ ನಿಮ್ಮ ಜೊತೆಗಿದ್ದು ಎದೆಗುಂದಬೇಡಿ ಎಂದು ಧೈರ್ಯ ತುಂಬಲಾಯಿತು.
First published: July 3, 2020, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories