HOME » NEWS » District » CORONAVIRUS INFECTS 23 PEOPLE IN ONE VILLAGE AT DHARAWADA DISTRICT RH

ಒಬ್ಬ ವ್ಯಕ್ತಿಯಿಂದ ಒಂದೇ ಗ್ರಾಮದ 23 ಜನರಿಗೆ ಕೊರೋನಾ ಸೋಂಕು!

ಉಳಿದಂತೆ ಪಿ-6255 ರಿಂದ ಮೂವರಿಗೆ ಸೋಂಕು, ಪಿ-6269 ನಿಂದ ಒಬ್ಬರಿಗೆ ಸೋಂಕು ಹಾಗೂ ಮಹಾರಾಷ್ಟ್ರದಿಂದ ಹಿಂದಿರುಗಿದ ನಾಲ್ವರಿಗೆ ಸೋಂಕು ಮತ್ತು ಜಮ್ಮು-ಕಾಶ್ಮೀರ, ತೆಲಂಗಾಣ, ರಾಜಸ್ಥಾನದಿಂದ ಬಂದಿರುವವರಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

news18-kannada
Updated:June 16, 2020, 7:23 AM IST
ಒಬ್ಬ ವ್ಯಕ್ತಿಯಿಂದ ಒಂದೇ ಗ್ರಾಮದ 23 ಜನರಿಗೆ ಕೊರೋನಾ ಸೋಂಕು!
ಸಾಂದರ್ಭಿಕ ಚಿತ್ರ
  • Share this:
ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟಗೊಂಡಿದ್ದು, ಸೋಮವಾರ ಒಂದೇ ದಿನ 34 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಒಬ್ಬ ವ್ಯಕ್ತಿಯಿಂದ ಒಂದೇ ಗ್ರಾಮದ  23 ಜನರಿಗೆ ಕೊರೋನಾ ಸೋಂಕು ತಗುಲಿದ ಘಟನೆಯೂ ನಡೆದಿದೆ. 

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ 23 ಜನರಿಗೆ ಕೊರೋನಾ‌ ಸೋಂಕು ಹಬ್ಬಿದೆ. ಮಗಳನ್ನು ಕರೆತರಲು ದೆಹಲಿಗೆ ಹೋಗಿದ್ದ ವ್ಯಕ್ತಿ ಬರುವಾಗ ಸೋಂಕಿತನಾಗಿ ಬಂದಿದ್ದ ಎನ್ನಲಾಗಿದ್ದು, ವ್ಯಕ್ತಿಯ ಮನೆಯ ನಾಲ್ವರಿಗೂ ಸೋಂಕು ತಗುಲಿದೆ.

ಸೋಂಕಿತ ವ್ಯಕ್ತಿಯಿಂದ ಗ್ರಾಮದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ,  ಪಿ-6222 ನಿಂದಲೇ ಗ್ರಾಮದಲ್ಲಿ ಕೊರೋನಾ ಮಾಹಾಸ್ಪೋಟವಾಗಿದೆ.

ಇದನ್ನು ಓದಿ: ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಮಗನ ಮದುವೆಯಲ್ಲಿ ನಿಯಮ ಉಲ್ಲಂಘನೆ; ಪಿಟಿಪಿ ವಿರುದ್ಧ ದೂರು ದಾಖಲು

ಉಳಿದಂತೆ ಪಿ-6255 ರಿಂದ ಮೂವರಿಗೆ ಸೋಂಕು, ಪಿ-6269 ನಿಂದ ಒಬ್ಬರಿಗೆ ಸೋಂಕು ಹಾಗೂ ಮಹಾರಾಷ್ಟ್ರದಿಂದ ಹಿಂದಿರುಗಿದ ನಾಲ್ವರಿಗೆ ಸೋಂಕು ಮತ್ತು ಜಮ್ಮು-ಕಾಶ್ಮೀರ, ತೆಲಂಗಾಣ, ರಾಜಸ್ಥಾನದಿಂದ ಬಂದಿರುವವರಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
Youtube Video
First published: June 16, 2020, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories