HOME » NEWS » District » CORONAVIRUS INFECTS 19 PEOPLE IN A SINGLE VILLAGE IN CHIKMAGALUR VCTV MAK

CoronaVirus: ಚಿಕ್ಕಮಗಳೂರಿನ ಒಂದೇ ಗ್ರಾಮದ 19 ಮಂದಿಗೆ ಕೊರೋನಾ; ಕೂಲಿ ಕಾರ್ಮಿಕರಲ್ಲಿ ಹೆಮ್ಮಾರಿಯ ಭೀತಿ!

ಕ್ವಾರಂಟೈನ್‍ನಲ್ಲಿರಿ ಯಾರೂ ಮನೆಯಿಂದ ಹೊರಬರಬೇಡಿ ಎಂದ ಅಧಿಕಾರಿಗಳಿಗೆ ಜನ ನಮ್ಮ ಜೀವನ ಹೇಗೆಂದು ಪ್ರಶ್ನಿಸಿದ್ದರು. ಜನರ ಜೀವನ ನಿರ್ವಹಣೆಯ ಪರಿಸ್ಥಿತಿ ತಹಶೀಲ್ದಾರ್ ಗಮನಕ್ಕೆ ಬರುತ್ತಿದ್ದಂತೆ 15 ಕುಟುಂಬಗಳಿಗೆ 15 ದಿನಕ್ಕಾಗುವಷ್ಟು ರೇಷನ್ ಕಿಟ್ ನೀಡಿದ್ದಾರೆ.

news18-kannada
Updated:May 2, 2021, 8:52 PM IST
CoronaVirus: ಚಿಕ್ಕಮಗಳೂರಿನ ಒಂದೇ ಗ್ರಾಮದ 19 ಮಂದಿಗೆ ಕೊರೋನಾ; ಕೂಲಿ ಕಾರ್ಮಿಕರಲ್ಲಿ ಹೆಮ್ಮಾರಿಯ ಭೀತಿ!
ಚಿಕ್ಕಮಗಳೂರಿನ ಕೊರೋನಾ ಪೀಡಿತ ಗ್ರಾಮ.
  • Share this:
ಚಿಕ್ಕಮಗಳೂರು : ಒಂದೇ ಗ್ರಾಮದ 19 ಕಾರ್ಮಿಕರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರೋ ಘಟನೆ ಚಿಕ್ಕಮಗಳುರು ತಾಲೂಕಿನ ಹಾರ್ಜಿಹಳ್ಳಿ ಯಲ್ಲಿ ನಡೆದಿದೆ. ಹಾರ್ಜಿಹಳ್ಳಿ ಗ್ರಾಮದಲ್ಲಿರೋ 30 ಮನೆಗಳಲ್ಲಿ 19 ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಗ್ರಾಮದಲ್ಲಿ ಕೊರೊನಾ ಆತಂಕ ಮನೆಮಾಡಿದೆ. ಇನ್ನು ಇವರೆಲ್ಲರೂ ಕಾಫಿ ತೋಟಕ್ಕೆ ಕೂಲಿಗೆ ಹೋದ್ರಷ್ಟೆ ಎಲ್ಲರದ್ದೂ ಹೊಟ್ಟೆ ತುಂಬೋದು. ಆದ್ರೆ, ಕಾಫಿ ತೋಟಕ್ಕೆ ಹೋದವರಲ್ಲಿ ಒಬ್ರಿಗೆ ಅದೆಲ್ಲಿಂದ ಕೊರೋನಾ ವೈರಸ್ ಬಂತೋ ಗೊತ್ತಿಲ್ಲ. ಅಲ್ಲಿಂದ ಶುರುವಾದ ಹೆಮ್ಮಾರಿ ಅಬ್ಬರ ಗ್ರಾಮದ 14 ಕುಟುಂಬದ 19 ಜನರಲ್ಲಿ ಪತ್ತೆಯಾಗಿದೆ. ಇಡೀ ಹಾರ್ಜಿಹಳ್ಳಿ ಗ್ರಾಮದಲ್ಲಿ ಕೊರೋನಾ ಭೀತಿ ಶುರುವಾಗಿದೆ. ಆದರೂ, ಕೆಲಸಕ್ಕೆ ಹೋಗಿಲ್ಲ ಅಂದ್ರೆ ಅವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿ.

ಕ್ವಾರಂಟೈನ್‍ನಲ್ಲಿರಿ ಯಾರೂ ಮನೆಯಿಂದ ಹೊರಬರಬೇಡಿ ಎಂದ ಅಧಿಕಾರಿಗಳಿಗೆ ಜನ ನಮ್ಮ ಜೀವನ ಹೇಗೆಂದು ಪ್ರಶ್ನಿಸಿದ್ದರು. ಜನರ ಜೀವನ ನಿರ್ವಹಣೆಯ ಪರಿಸ್ಥಿತಿ ತಹಶೀಲ್ದಾರ್ ಗಮನಕ್ಕೆ ಬರುತ್ತಿದ್ದಂತೆ 15 ಕುಟುಂಬಗಳಿಗೆ 15 ದಿನಕ್ಕಾಗುವಷ್ಟು ರೇಷನ್ ಕಿಟ್ ಜೊತೆ ಗ್ರಾಮಕ್ಕೆ ಹೋಗಿ ಎಲ್ಲರಿಗೂ ರೇಷನ್ ಕೊಟ್ಟು ಯಾರೂ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿದ್ದಾರೆ.

ವಿಷಯ ತಿಳಿದ ತಹಶೀಲ್ದಾರ್ ಚಿಕ್ಕಮಗಳೂರಿನ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಬ್ರಾಹ್ಮಣ ಮಹಾಸಭಾ ಅರ್ಧ ಗಂಟೆ ಟೈಂ ಕೇಳಿ ಅರ್ಧ ಗಂಟೆಯಲ್ಲೇ 15 ಮನೆಗಳಿಗೆ 15 ದಿನಕ್ಕಾಗುವಷ್ಟು ರೇಷನ್ ಕಿಟ್ ರೆಡಿ ಮಾಡಿ ತಹಶೀಲ್ದಾರ್ ಕಚೇರಿ ತಲುಪಿಸಿದ್ದಾರೆ. ತಹಶೀಲ್ದಾರ್ ತಂಡ ಆಹಾರ ಸಾಮಗ್ರಿಗಳನ್ನ ವಾಹನದಲ್ಲಿ ಕೊಂಡೊಯ್ದು ಪ್ರತಿ ಮನೆಗೂ ತಲುಪಿಸಿದ್ದಾರೆ.

ಈ ವೇಳೆ, ತಹಶೀಲ್ದಾರ್ ಪ್ರತಿ ಮನೆಯ ಬಳಿ ಹೋಗಿ ಎಲ್ಲರೂ ಟೆಸ್ಟ್ ಮಾಡ್ಸಿ ಅಂತ ಮನವಿ ಮಾಡಿದ್ದಾರೆ. ಕೆಲವರು ಮನೆ ಒಳಗೆ ಇದ್ರು ಹೊರ ಬರೋಕೆ ಹಿಂದೇಟು ಹಾಕಿದ್ರು. ಮನೆ ಮುಂದೆ ಬೀಗ ಹಾಕಿ ಹಿಂದಿನಿಂದ ಓಡಾಡ್ತಿದ್ರು. ತಹಶೀಲ್ದಾರ್ ಕಾಂತರಾಜು ಹಿಂಭಾಗಿಲಿನಿಂದಲೂ ಹೋಗಿ ಟೆಸ್ಟ್ ಮಾಡಿಸುವಂತೆ ಸೂಚಿಸಿದ್ದಾರೆ. ಹೊರರಾಜ್ಯದಿಂದ ಬಂದಿರೋ ಕಾರ್ಮಿಕರಿಂದ ಕೊರೋನಾ ಹರಿಡಿರೋ ಶಂಕೆ ವ್ಯಕ್ತವಾಗಿದೆ.

ಒಟ್ಟಾರೆ, ಹಳ್ಳಿ ಜನ ಕೊರೋನಾ ಬಂತು ಆತಂಕಕ್ಕೀಡಾಗಲಿಲ್ಲ. 15 ದಿನಗಳ ಕಾಲ ಕೂಲಿಗೆ ಹೋಗದಿದ್ರೆ ನಮ್ಮ ಬದುಕು ಹೇಗೆಂದು ಯೋಚಿಸತೊಡಗಿದ್ರು. ಮನೆಯಲ್ಲೇ ಇದ್ರೆ ಬದುಕೋದು ಹೇಗೆಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದರು. ಇಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸೋದ್ರ ಜೊತೆ ಮಾನವೀಯತೆಯನ್ನೂ ಮೆರೆದಿದ್ದಾರೆ.

ಅಧಿಕಾರಿಗಳು ಕೇಳಿದ ಕೂಡಲೇ ಬ್ರಾಹ್ಮಣ ಸಮಾಜವೂ ನೆರವಿನ ಹಸ್ತ ನೀಡ್ತು, ಅಧಿಕಾರಿಗಳು ಮಾನವೀಯತೆ ಮೆರೆದ್ರು. ಅಧಿಕಾರಿಗಳು ಹಾಗೂ ಬ್ರಾಹ್ಮಣ ಸಮಾಜಕ್ಕೆ ಹಳ್ಳಿ ಜನ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಭಾರತದಲ್ಲಿ ಕೊರೋನಾ ಕೇಕೆ!:ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ಸುಮಾರು ನಾಲ್ಕು ಲಕ್ಷ ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ.

ಇದನ್ನೂ ಓದಿ: Coronavirus Updates: ಭಾರತದಲ್ಲಿ ನಿನ್ನೆ ಸುಮಾರು 4 ಲಕ್ಷ ಕೊರೊನಾ ಪ್ರಕರಣಗಳು ಪತ್ತೆ

ಶನಿವಾರ 3,92,488 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಗುಣ ಆಗಿರುವವರು 3,07,865 ಜನ ಮಾತ್ರ. ಇದರಿಂದ ದೇಶದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 1,95,57,457ಕ್ಕೆ ಏರಿಕೆ ಆಗಿದೆ.‌ ಇದಲ್ಲದೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದ್ದು ದೇಶದಲ್ಲಿ ಇದೀಗ ದಿನ ಒಂದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ‌ ಸಾವನ್ನಪ್ಪುತ್ತಿದ್ದಾರೆ. ಶನಿವಾರ 3,689 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,15,542ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊತ್ತ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಈವರೆಗಿನ ದಾಖಲೆ ಆಗಿತ್ತು.
Published by: MAshok Kumar
First published: May 2, 2021, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories