Ramesh Jarkiholi CD Case: ರಮೇಶ್ ಜಾರಕಿಹೊಳಿಗೆ ಕೊರೋನಾ ಸೋಂಕು; ಐಸಿಯುನಲ್ಲಿ ದಾಖಲಾಗಿರೋ ವಿಡಿಯೋ ಬಿಡುಗಡೆ!
ರಮೇಶ್ ಜಾರಕಿಹೊಳಿ ಹೊರ ರಾಜ್ಯಕ್ಕೆ ಹೋಗಿ ಬಂದಿದ್ದರಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ನಿನ್ನೆ ಸಂಜೆ ಉಸಿರಾಟ ಸಮಸ್ಯೆ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್ ಜಾರಕಿಹೊಳಿ.
ಬೆಳಗಾವಿ (ಏಪ್ರಿಲ್ 05); ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಎಸ್ ಐಟಿ ಮುಂದೆ ಹಾಜರಾಗಬೇಕಿತ್ತು. ಆದರೇ ಕೆಲ ದಿನಗಳಿಂದ ರಮೇಶ ಜಾರಕಿಹೊಳಿ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿ ರಲಿಲ್ಲ. ಇಂದು ಮುಂಜಾನೆ ಬೆಳಗಾವಿಯಲ್ಲಿ ಸಚಿವ ಬೈರತಿ ಬಸವರಾಜ್ ಮಾತನಾಡಿ ರಮೇಶ ಜಾರಕಿಹೊಳಿ ಕೊರೊನಾ ಸೋಂಕು ತಗುಲಿದೆ, ಬೆಂಗಳೂರಿ ನಲ್ಲಿಯೇ ಇದ್ದಾರೆ ಎಂದು ಹೇಳಿದರು. ಇದು ಪ್ರಕರಣಕ್ಕೆ ಹೊಸ ತಿರುವು ತಂದು ಕೊಟ್ಟಿತು. ಬಳಿಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಗಳೂರು ಅಲ್ಲ ಗೋಕಾಕ್ ನಲ್ಲಿಯೇ ಇದ್ದಾರೆ ಎಂಬುದು ಖಚಿತಗೊಂಡಿತ್ತು. ಮಾರ್ಚ್ 30ರಂದು ಕೊಲ್ಹಾಪುರ ಮಹಾಲಕ್ಷ್ಮೀ ದೇವಿಯ ದರ್ಶವನ್ನು ಜಾರಕಿಹೊಳಿ ಪಡೆದಿದ್ದರು. ನಂತರ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 1ರಂದು ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಲಾಗಿದ್ದು, ಸೋಂಕು ದೃಢ ಪಟ್ಟಿದೆ. 4 ದಿನ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇದ್ದ ರಮೇಶ ಜಾರಕಿಹೊಳಿಗೆ ನಿನ್ನೆ ಉಸಿರಾಟ ಸಮಸ್ಯೆ ಹಿನ್ನೆಲೆಯಲ್ಲಿ ಗೋಕಾಕ್ ತಾಲೂಕು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.
ಗೋಕಾಕ್ ತಾಲೂಕು ಆಸ್ಪತ್ರೆಯ ವೈದ್ಯ ರವೀಂದ್ರ ಅಂಟಿನ್ ಈ ಬಗ್ಗೆ ಮಾಧ್ಯಗಳಿಗೆ ಮಾಹಿತಿ ನೀಡಿದ್ದರು. ರಮೇಶ್ ಜಾರಕಿಹೊಳಿ ಹೊರ ರಾಜ್ಯಕ್ಕೆ ಹೋಗಿ ಬಂದಿದ್ದರಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಹೀಗಾಗಿ ಕೊರೋನಾ ಟೆಸ್ಟ್ ಮಾಡಿಸಲಾಗಿತ್ತು. ನಿನ್ನೆ ಸಂಜೆ ಉಸಿರಾಟ ಸಮಸ್ಯೆ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಸದ್ಯ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಬಿಪಿ ಹಾಗೂ ಸಕ್ಕರೆ ಕಾಯಿಲೆ ಇರೋದ್ರಿಂದ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದರು. ಸದ್ಯ ರಮೇಶ ಜಾರಕಿಹೊಳಿ ಸ್ಥಿತಿರವಾಗಿದ್ದು, ಐಸಿಯುನಲ್ಲಿ ನೀಡಲಾಗುತ್ತಿದೆ. ಕೊವಿಡ್ ವಾರ್ಡ್ ನಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.
ಮದ್ಯಾಹ್ನ ವೇಳೆಗೆ ರಮೇಶ ಜಾರಕಿಹೊಳಿ ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಇಲ್ಲ ಎಂದು ಸಂತ್ರಸ್ತ ಯುವತಿ ಪರ ವಕೀಲ ಜಗದೀಶ ಆರೋಪ ಮಾಡಿದ್ದರು. ಗೋಕಾಕ್ ವಕೀಲ ಚಂದನ ಗಿಡ್ಡಣ್ಣವರ್ ಗೋಕಾಕ್ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಹಾಗೂ ವಕೀಲ ಚಂದನ ಗಿಡ್ಡಣವರ್ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ರಮೇಶ ಜಾಕಿಹೊಳಿ ಚಿಕಿತ್ಸೆ ಪಡೆಯುತ್ತಿರೋ ವಿಡಿಯೋ ವೈದ್ಯ ರವೀಂದ್ರ ಅಂಟಿನ್ ಬಿಡುಗಡೆ ಮಾಡಿದರು. ಐಸಿಯು ನಲ್ಲಿ ರಮೇಶ ಜಾರಕಿಹೊಳಿ ಪಿಪಿಇ ಕಿಟ್ ಹಾಕಿಹೊಂಡು ಮಲಗಿರೋದು ಖಚಿತವಾಯಿತು. ವೈದ್ಯರು ಮಾತನಾಡಿ, ನಿನ್ನೆಯಿಂದ ರಮೇಶ ಜಾರಕಿಹೊಳಿ ನಮ್ಮ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರು ಸುಳ್ಳು ಆರೋಪ ಮಾಡಬಾರದು ಎಂದು ಮನವಿ ಮಾಡಿದರು.
ಮಾರ್ಚ್ 30ರಿಂದ ರಮೇಶ ಜಾರಕಿಹೊಳಿ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಜತೆಗೆ ಕೊರೊನಾ ಸೋಂಕು ತಗುಲಿರೋ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಇದು ಅನೇಕ ಗೊಂದಲ್ಲಕ್ಕೆ ಕಾರಣವಾಗಿದೆ. ಎಸ್ ಐ ಟಿ ಬಂಧನ ಭೀತಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ