ಕೊರೋನಾ ಆರ್ಭಟಕ್ಕೆ ತುಮಕೂರು ತತ್ತರ; ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಂದ ರಾಮನಗರಕ್ಕೂ ಸೋಂಕು ಹರಡಿರುವ ಸಾಧ್ಯತೆ?

ಸೋಂಕಿತ ಚಾಲಕ ಮೂರು ದಿನಗಳ ಕಾಲ ಮಾಗಡಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಿದ್ದ. ಹಾಗಾಗಿ ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮಾಹಿತಿಯನ್ನೂ ರಾಮನಗರ ಜಿಲ್ಲಾಡಳಿತ ಕಲೆಹಾಕುತ್ತಿದೆ. ಅಲ್ಲದೇ ಮಾಗಡಿ ಡಿಪೋದ ತನ್ನ ಸಹೋದ್ಯೋಗಿಗಳೊಂದಿಗೆ ಊಟ ತಿಂಡಿ ಮಾಡಿದ್ದು ಡಿಪೋದಲ್ಲೂ ಆತಂಕ ಸೃಷ್ಟಿಯಾಗಿದೆ.

news18-kannada
Updated:May 25, 2020, 9:18 PM IST
ಕೊರೋನಾ ಆರ್ಭಟಕ್ಕೆ ತುಮಕೂರು ತತ್ತರ; ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಂದ ರಾಮನಗರಕ್ಕೂ ಸೋಂಕು ಹರಡಿರುವ ಸಾಧ್ಯತೆ?
ಸೋಂಕಿತ ಚಾಲಕ ಮೂರು ದಿನಗಳ ಕಾಲ ಮಾಗಡಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಿದ್ದ. ಹಾಗಾಗಿ ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮಾಹಿತಿಯನ್ನೂ ರಾಮನಗರ ಜಿಲ್ಲಾಡಳಿತ ಕಲೆಹಾಕುತ್ತಿದೆ. ಅಲ್ಲದೇ ಮಾಗಡಿ ಡಿಪೋದ ತನ್ನ ಸಹೋದ್ಯೋಗಿಗಳೊಂದಿಗೆ ಊಟ ತಿಂಡಿ ಮಾಡಿದ್ದು ಡಿಪೋದಲ್ಲೂ ಆತಂಕ ಸೃಷ್ಟಿಯಾಗಿದೆ.
  • Share this:
ತುಮಕೂರು : ಕೊರೋನಾ ರಾಜ್ಯಕ್ಕೆ ವಕ್ಕರಿಸಿ ಎರಡು ತಿಂಗಳೇ ಕಳೆದರೂ ಸಹ ತುಮಕೂರು ಜಿಲ್ಲೆಯನ್ನು ಗ್ರೀನ್‌ ಝೋನ್ ಎಂದೇ ಗುರುತಿಸಲಾಗಿತ್ತು. ಬೆಂಗಳೂರಿನ ಪಕ್ಕದಲ್ಲೇ ಇದ್ದರೂ ಈ ಜಿಲ್ಲೆಯಲ್ಲಿ ಮಾತ್ರ ಮಾರಣಾಂತಿಕ ಕೊರೋನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಅದರೆ, ಇದೀಗ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಲ್ಲಿ ವೈರಸ್‌ ಕಾಣಿಸಿಕೊಂಡಿದ್ದು ಇಡೀ ಜಿಲ್ಲೆಯಲ್ಲಿ ಆತಂಕದ ಛಾಯೆ ಆವರಿಸಿದೆ.‌ 

ತುಮಕೂರು ತಾಲ್ಲೂಕಿನ ಬೆಳ್ಳಾವಿ ಹೋಬಳಿ ಮಾವಿನಕುಂಟೆ ಗ್ರಾಮದ 35 ವರ್ಷದ ಕೆ ಎಸ್ ಆರ್ ಟಿಸಿ ಚಾಲಕನಿಗೆ ಕೋವಿಡ್ 19 ದೃಡಪಟ್ಟಿದೆ. ಇವರನ್ನ ಪಿ 2135 ಎಂದು ಗುರುತಿಸಲಾಗಿದೆ. ಇವರು ಕೆ ಎಸ್ ಆರ್ ಟಿ ಸಿ ಮಾಗಡಿ ಡಿಪೋದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು . ಲಾಕ್‌ಡೌನ್ ಸಡಿಲಿಕೆ ಬಳಿಕ ಕರ್ತವ್ಯಕ್ಕೆ ಹಾಜರಾಗುವ ಮುನ್ನಾ ತಪಾಸಣೆ ನಡೆಸಿ ಗಂಟಲು ದ್ರವ ಮಾದರಿಯನ್ನ ಪಡೆದು ಪರಿಕ್ಷೆಗೆ ಕಳುಹಿಸಲಾಗಿತ್ತು ಇಂದು ವರದಿ ಬಂದಿದ್ದು  ಪಾಸಿಟಿವ್ ಇರುವುದು ದೃಡಪಟ್ಟಿದೆ.

ಪರಿಣಾಮ ಮಾವಿನಕುಂಟೆ ಗ್ರಾಮದಲ್ಲಿ ಸೊಂಕಿತನ ಮನೆಯಲ್ಲಿ ವಾಸವಿದ್ದ 10 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಮಾವಿನಕುಂಟೆ ಗ್ರಾಮವನ್ನ ಕಂಟೈನ್ಮೆಂಟ್‌ ವಲಯವಾಗಿ ಪರಿವರ್ತಿಸಿ ಸೀಲ್‌ಡೌನ್ ಮಾಡಲಾಗಿದೆ.

ಸೋಂಕಿತ ಚಾಲಕ ಮೂರು ದಿನಗಳ ಕಾಲ ಮಾಗಡಿ ಬೆಂಗಳೂರು ಮಾರ್ಗದಲ್ಲಿ ಸಂಚರಿಸಿದ್ದ. ಹಾಗಾಗಿ ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮಾಹಿತಿಯನ್ನೂ ರಾಮನಗರ ಜಿಲ್ಲಾಡಳಿತ ಕಲೆಹಾಕುತ್ತಿದೆ. ಅಲ್ಲದೇ ಮಾಗಡಿ ಡಿಪೋದ ತನ್ನ ಸಹೋದ್ಯೋಗಿಗಳೊಂದಿಗೆ ಊಟ ತಿಂಡಿ ಮಾಡಿದ್ದು ಡಿಪೋದಲ್ಲೂ ಆತಂಕ ಸೃಷ್ಟಿಯಾಗಿದೆ.

ತುಮಕೂರು ಮಾತ್ರವಲ್ಲ ಗ್ರೀನ್ ಝೋನ್ ಆಗಿದ್ದ‌ ರಾಮನಗರ ಸಹ ಈ ಪ್ರಕರಣದಿಂದ ತತ್ತರಿಸಿದೆ. ಪ್ರಯಾಣಿಕರಿಗೂ ಸೋಂಕು ಹರಡಿದರೇ ರಾಮನಗರದಲ್ಲಿ ಸೋಂಕಿತರ ಸಂಖ್ಯೆ‌ ಹೆಚ್ಚಲಿದೆ. ಲಾಕ್‌ಡೌನ್ ವೇಳೆ ತುಮಕೂರಿನಲ್ಲೇ ವಾಸವಿದ್ದ ಚಾಲಕನಿಗೆ ತಗುಲಿದ ಸೋಂಕಿನ ಮೂಲದ ಕುರಿತು ತುಮಕೂರು ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ. ಒಟ್ಟಾರೆ ಕೆಎಸ್‌ಆರ್‌ಟಿಸಿ ಚಾಲಕನಿಗೆ ಸೋಂಕು ದೃಢಪಟ್ಟಿರುವುದು ಉಭಯ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.

ಇದನ್ನೂ ಓದಿ ; ಬಂಟ್ವಾಳದಲ್ಲಿ ಹಿಂದೂ ಯುವಕನ್ನು ರಕ್ಷಿಸಿದ್ದ ಮುಸ್ಲಿಂ ಹುಡುಗರು; ಅಭಿನಂದಿಸಿದ ಸಿದ್ದರಾಮಯ್ಯ
First published: May 25, 2020, 9:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading