HOME » NEWS » District » CORONAVIRUS EFFECT BELAGAVI MANGAI DEVI FAIR CANCELED RH

ಕೊರೋನಾ ವೈರಸ್ ಪರಿಣಾಮ; ಬೆಳಗಾವಿ ಪ್ರಸಿದ್ಧ ಮಂಗಾಯಿ ದೇವಿ ಜಾತ್ರೆ ರದ್ದು

ಮಂಗಾಯಿ ದೇವಿ ಜಾತ್ರೆಗೆ ಮಹಾರಾಷ್ಟ್ರ ಹಾಗೂ ಗೋವಾದಿಂದ ಅನೇಕ ಭಕ್ತರು ಆಗಮಿಸುತ್ತಿದ್ದರು. ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು, ಅಲ್ಲಿಂದ ಭಕ್ತರು ಬಂದಲ್ಲಿ ನಗರಕ್ಕೆ ಕೊರೋನಾ ಸೋಂಕು ಹಬ್ಬುವ ಭಯದಿಂದ ಜಾತ್ರೆ ರದ್ದು ಮಾಡಮಾಗಿದೆ.

news18-kannada
Updated:July 10, 2020, 7:36 PM IST
ಕೊರೋನಾ ವೈರಸ್ ಪರಿಣಾಮ; ಬೆಳಗಾವಿ ಪ್ರಸಿದ್ಧ ಮಂಗಾಯಿ ದೇವಿ ಜಾತ್ರೆ ರದ್ದು
ಮಂಗಾಯಿ ದೇವಿ ಜಾತ್ರೆಯ ಚಿತ್ರ (ಸಂಗ್ರಹ ಚಿತ್ರ)
  • Share this:
ಬೆಳಗಾವಿ (ಜು.10); ಬೆಳಗಾವಿಯಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದ್ದು, ಸದ್ಯದ ಮಟ್ಟಿಗೆ ನಿಯಂತ್ರಣಕ್ಕೆ ಬರುವ ಯಾವ ಸೂಚನೆಗಳು ಕಾಣುತ್ತಿಲ್ಲ. ಹೀಗಾಗಿ ಬೆಳಗಾವಿಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಐತಿಹಾಸಿಕ ಮಂಗಾಯ ದೇವಿ ಜಾತ್ರೆಯನ್ನು ಈ ವರ್ಷ ರದ್ಧು ಮಾಡಲಾಗಿದೆ. ಈ ಜಾತ್ರೆಗೆ ಗೋವಾ, ಮಹಾರಾಷ್ಟ್ರದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುವ ಆತಂಕದ ಹಿನ್ನೆಲೆಯಲ್ಲಿ ಜಾತ್ರೆಯನ್ನು ರದ್ದು ಮಾಡಲಾಗಿದೆ.

ಇದೇ ತಿಂಗಳ 14ರಿಂದ 18 ರವರೆಗೆ ಐದು ದಿನಗಳ ಮಂಗಾಯಿ ದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಾತ್ರೆಯನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.

ಬೆಳಗಾವಿ ತಾಲೂಕಿನಲ್ಲಿ 138ಕ್ಕೂ ಹೆಚ್ಚು ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಕಳೆದ ಕೆಲ ದಿನಗಳಿಂದ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇರುವವರಿಗೂ ಸೋಂಕು ತಗುಲಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ 37 ಕಂಟೈನ್​ಮೆಂಟ್ ಝೋನ್ ಘೋಷಣೆಯಾಗಿದ್ದು, ಜಾತ್ರೆ ರದ್ದಿಗೆ ಪ್ರಮುಖ ಕಾರಣವಾಗಿದೆ.

ಮಂಗಾಯಿ ದೇವಿ ಜಾತ್ರೆಯಲ್ಲಿ ಭಕ್ತರು ಕೋಳಿ ಮರಿಗಳನ್ನು ದೇವಸ್ಥಾನ ಮೇಲೆ ಎಸೆದು ಭಕ್ತಿ ಸಮರ್ಪಣೆ ಮಾಡುತ್ತಿದ್ದರು. ಮೊದಲು ಭಕ್ತಿಯಿಂದ ದೇವರಿಗೆ ತಮ್ಮ ಹರಕೆ ರೂಪದಲ್ಲಿ ಕೋಳಿ ಮರಿಗಳನ್ನು ದೇವಸ್ಥಾನದ ಮೇಲೆ ಎಸೆಯುತ್ತಿದ್ದರು. ಸದ್ಯ ಯಾವುದೇ ಆಚರಣೆ ಇಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ. ಆದೇಶ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಎಚ್ಚರಿಕೆಯನ್ನು ನೀಡಿದೆ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಕೈಮೀರಿದ ಕೊರೋನಾ ಪರಿಸ್ಥಿತಿ; ಜುಲೈ 13 ರಿಂದ 23ರ ವರೆಗೆ ಪುಣೆ ಸಂಪೂರ್ಣ ಲಾಕ್‌ಡೌನ್

ಮಂಗಾಯಿ ದೇವಿ ಜಾತ್ರೆಗೆ ಮಹಾರಾಷ್ಟ್ರ ಹಾಗೂ ಗೋವಾದಿಂದ ಅನೇಕ ಭಕ್ತರು ಆಗಮಿಸುತ್ತಿದ್ದರು. ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು, ಅಲ್ಲಿಂದ ಭಕ್ತರು ಬಂದಲ್ಲಿ ನಗರಕ್ಕೆ ಕೊರೋನಾ ಸೋಂಕು ಹಬ್ಬುವ ಭಯದಿಂದ ಜಾತ್ರೆ ರದ್ದು ಮಾಡಮಾಗಿದೆ. ಭಕ್ತರು ಸಹ ಪೊಲೀಸ್ ಇಲಾಖೆಯ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಭಕ್ತರಿಗೆ ಮನವಿ ಮಾಡಲಾಗಿದೆ.
Published by: HR Ramesh
First published: July 10, 2020, 7:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading