Coronavirus Chamarajanagara Updates: ಕೊರೋನಾ ಭೀತಿ: ಚಾಮರಾಜನಗರ ಎಪಿಎಂಸಿ ತರಕಾರಿ ಮಾರುಕಟ್ಟೆ ತಾತ್ಕಾಲಿಕ ಬಂದ್

Chamarajanagara Coronavirus Cases: ರೈತರು, ಸಗಟು ಹಾಗು ಚಿಲ್ಲರೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿದಂತೆ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಮಂದಿ ತರಕಾರಿ ಮಂಡಿಗೆ ಬರುತ್ತಾರೆ .ಹಾಗಾಗಿ ತರಕಾರಿ ಹರಾಜು ಹಾಗು ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಿದೆ.

ಚಾಮರಾಜನಗರ ಎಪಿಎಂಸಿ ಮಾರ್ಕೆಟ್​

ಚಾಮರಾಜನಗರ ಎಪಿಎಂಸಿ ಮಾರ್ಕೆಟ್​

  • Share this:
ಚಾಮರಾಜನಗರ(ಜೂ.29): ರಾಜ್ಯದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಎಲ್ಲಾ ಜಿಲ್ಲೆಗಳಂತೆಯೇ ಚಾಮರಾಜನಗರದಲ್ಲೂ ಕೋವಿಡ್​​-19 ಪಾಸಿಟಿವ್​ ಕೇಸುಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ. ಹಾಗಾಗಿಯೇ ಚಾಮರಾಜನಗರದ ಎಪಿಎಂಸಿ ತರಕಾರಿ  ಮಾರುಕಟ್ಟೆ ತಾತ್ಕಾಲಿಕವಾಗಿ ಬಂದ್  ಮಾಡಲಾಗಿದೆ.

ಗ್ರೀನ್​​ ಜೋನ್​​ನಲ್ಲಿದ್ದ​ ಚಾಮರಾಜನಗರ ಜಿಲ್ಲೆಗೆ ಕೊರೋನಾ ವಕ್ಕರಿಸಿ ಇದುವರೆಗೆ 33 ಮಂದಿಗೆ ಸೋಂಕು ತಗುಲಿದೆ. ಇದರಿಂದ ಕೂಡಲೇ ಎಚ್ಚೆತ್ತ ವ್ಯಾಪಾರಿಗಳು, ದಲ್ಲಾಳಿಗಳು ಇಂದಿನಿಂದ ಮುಂದಿನ ಆರು ದಿನಗಳ ಕಾಲ ತರಕಾರಿ ಮಂಡಿಗಳನ್ನು ಮುಚ್ಚಲು ತೀರ್ಮಾನಿಸಿದ್ಧಾರೆ. ಆದ್ದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ಇನ್ನು, ಈ ಮಾಹಿತಿ ತಿಳಿಯದೇ ಎಂದಿನಂತೆಯೇ ಇಂದು ಕೂಡ ಮಾರುಕಟ್ಟೆಗೆ ತರಕಾರಿ ತಂದ ಕೆಲ ರೈತರು ನಿರಾಸೆಗೊಂಡು ಮನೆಗೆ ವಾಪಸ್ಸಾಗಿದ್ದಾರೆ. ಆದರೀಗ ಇಷ್ಟು ದಿನ ರೈತರು, ವ್ಯಾಪಾರಿಗಳು, ದಲ್ಲಾಳಿಗಳಿಂದ ಗಿಜಿಗುಡುತ್ತಿದ್ದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಿಕೋ ಎನ್ನುತ್ತಿದೆ.

ಇದನ್ನೂ ಓದಿ: Coronavirus Tumkur Updates: ತುಮಕೂರಿನಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 18 ಮಂದಿಗೆ ಸೋಂಕು

ರೈತರು, ಸಗಟು ಹಾಗು ಚಿಲ್ಲರೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿದಂತೆ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಮಂದಿ ತರಕಾರಿ ಮಂಡಿಗೆ ಬರುತ್ತಾರೆ .ಹಾಗಾಗಿ ತರಕಾರಿ ಹರಾಜು ಹಾಗು ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಿದೆ.

ಜನಜಂಗುಳಿಯಿಂದ ಕೊರೋನಾ ಹರಡುವ ಸಾಧ್ಯತೆಗಳಿರುವುದರಿಂದ ಜೂನ್ 29 ರಿಂದ ಜುಲೈ 4 ರವರೆಗೆ ತಾತ್ಕಾಲಿಕವಾಗಿ ತರಕಾರಿ ಮಂಡಿ ಮುಚ್ಚಲು  ತರಕಾರಿ ವ್ಯಾಪಾರಿಗಳು ಹಾಗು ದಲ್ಲಾಳಿಗಳು ಸಭೆ ಸೇರಿ ತೀರ್ಮಾನ ಕೈಗೊಂಡಿದ್ದಾರೆ
First published: