ಯಲಹಂಕದ ಗ್ರಾಮೀಣ ಭಾಗಗಳಲ್ಲಿ ಕೊರೋನಾ ರಣಕೇಕೆ

ಯಲಹಂಕ ತಾಲ್ಲೂಕಿನ ಕಾಕೋಳು ಗ್ರಾಮದ 59 ವರ್ಷದ ವ್ಯಕ್ತಿಯೊಬ್ಬರನ್ನ ಬಲಿ ಪಡೆದಿದೆ. ಕಾಕೊಳು, ಪುಟ್ಟೇನಹಳ್ಳಿ, ಸಾದಹಳ್ಳಿ, ಚಿಕ್ಕಜಾಲ ಗ್ರಾಮೀಣ ಭಾಗಗಳಲ್ಲಿ ಜನರನ್ನ ನಿದ್ದೆಗೆಡಿಸಿದೆ. ಇದರಿಂದ ಹಳ್ಳಿ ಜನರು ಹೊಲ, ತೋಟ, ಹಸು ಮೇಯಿಸಲೂ ಹೋಗಲಾಗದ ಸ್ಥಿತಿಗೆ ತಲುಪಿದ್ದಾರೆ.

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಂದ ಕೊರೋನಾಪೀಡಿತ ಗ್ರಾಮಗಳಿಗೆ ಭೇಟಿ

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಂದ ಕೊರೋನಾಪೀಡಿತ ಗ್ರಾಮಗಳಿಗೆ ಭೇಟಿ

  • Share this:
ಯಲಹಂಕ: ನಗರ ಭಾಗಗಳಲ್ಲಿ ಹೆಚ್ಚು ರಣ ಕೇಕೆ ಹಾಕ್ತಿದ್ದ ಕೊರೋನ ಮಹಾಮಾರಿ ಇದೀಗ ಗ್ರಾಮೀಣ ಭಾಗಗಳಿಗೂ ಲಗ್ಗೆ ಇಟ್ಟಿದೆ. ಹಳ್ಳಿ-ಹಳ್ಳಿಗಳಲ್ಲೂ ಸಾವಿನ ರಣಕಹಳೆ ಮೊಳಗಿಸುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಯಲಹಂಕದಲ್ಲಿ ಕೊರೋನಾ ಸೋಂಕು ಹರಡದಂತೆ ನೂರಾರು ಕೊರೋನ ವಾರಿಯರ್ಸ್ ರಾತ್ರಿ ಹಗಲು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ ಪರಿಣಾಮ ಆ ಭಾಗ ಬಹಳ ದಿನಗಳ ಕಾಲ ಕೊರೋನಾದಿಂದ ಮುಕ್ತವಾಗಿತ್ತು. ಆದರೆ, ಈಗ ದಿಢೀರನೆ ಗ್ರಾಮೀಣ ಭಾಗಗಳಲ್ಲಿ ಲಗ್ಗೆ ಇಡುತ್ತಿದೆ. ಲಾಕ್ ಡೌನ್ ಓಪನ್ ಆದ ಕೆಲವೇ ದಿನಗಳಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಯಲಹಂಕ ತಾಲ್ಲೂಕಿನ ಕಾಕೋಳು ಗ್ರಾಮದ 59 ವರ್ಷದ ವ್ಯಕ್ತಿಯೊಬ್ಬರನ್ನ ಬಲಿ ಪಡೆದಿದೆ. ಕಾಕೊಳು, ಪುಟ್ಟೇನಹಳ್ಳಿ, ಸಾದಹಳ್ಳಿ, ಚಿಕ್ಕಜಾಲ ಗ್ರಾಮೀಣ ಭಾಗಗಳಲ್ಲಿ ಜನರನ್ನ ನಿದ್ದೆಗೆಡಿಸಿದೆ. ಇದರಿಂದ ಹಳ್ಳಿ ಜನರು ಹೊಲ, ತೋಟ, ಹಸು ಮೇಯಿಸಲೂ ಹೋಗಲಾಗದ ಸ್ಥಿತಿಗೆ ತಲುಪಿದ್ದಾರೆ.

ಲಾಕ್​ಡೌನ್ ಸಮಯದಲ್ಲಿ ಯಲಹಂಕ ತಾಲ್ಲೂಕು ಒಂದರಲ್ಲೇ ಸುಮಾರು 42 ಸಾವಿರ ಆಹಾರ ಧಾನ್ಯದ ಕಿಟ್​ಗಳನ್ನ ವಿತರಣೆ ಮಾಡಲಾಗಿತ್ತು. ಇದೀಗ ಮತ್ತೆ ಗ್ರಾಮೀಣ ಭಾಗದ ಜನರು ಮನೆಗಳಿಂದ ಹೊರ ಬರದಂತಾಗಿದ್ದು ಕಾಕೋಳು ಗ್ರಾಮದಲ್ಲಿ ಸಾವಿನ ಬೆನ್ನಲ್ಲೇ ಪ್ರಾಥಮಿಕ ಸಂಪರ್ಕಿತ ಇಬ್ಬರಲ್ಲಿ ಸೊಂಕು ದೃಢವಾಗಿದೆ. 18 ಜನ ಪ್ರಾಥಮಿಕ ಸಂಪರ್ಕಿತರ ಕ್ಯಾರಂಟೈನ್ ಮಾಡಲಾಗಿದ್ದು ಜನರಿಗೆ ದೈರ್ಯ ಮತ್ತು ಜಾಗೃತಿ ಮೂಡಿಸಲಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಕೋವಿಡ್ ಟೆಸ್ಟ್ ಕಿಟ್ ತಯಾರಿಸಿದ ಬೆಂಗಳೂರಿನ ಬಯೋಅಜೈಲ್ ಸಂಸ್ಥೆಯಲಹಂಕ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮತ್ತು ತಹಶೀಲ್ದಾರ್ ರಘುಮೂರ್ತಿ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಕಾಕೋಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸ್ವಚ್ಚತೆ, ಮುಂಜಾಗ್ರತಾ ಕ್ರಮಗಳು ಸೇರಿದಂತೆ ಗ್ರಾಮಸ್ಥರ ಜೊತೆ ಸಭೆ ನಡೆಸಿ ಧೈರ್ಯ ತುಂಬಿದರು. ಸಂಪೂರ್ಣ ಗ್ರಾಮ ಲಾಕ್​ಡೌನ್ ಮಾಡಿದ್ದರಿಂದ ಗ್ರಾಮದ ಜನರಿಗೆ ಸ್ಪಂದಿಸಲು ಕಂದಾಯ ಇಲಾಖೆ ಅಧಿಕಾರಿಗಳ ಮೂರು ತಂಡವನ್ನು ನಿಯೋಜನೆ ಮಾಡಲಾಗಿದೆ.
First published: