ಬಾಗಲಕೋಟೆ(ಜೂ.29): ಬಾಗಲಕೋಟೆಯಲ್ಲಿ ಕೊರೋನಾ ರಣಕೇಕೆ ಮುಂದುವರೆದಿದೆ. ಎಸ್ಎಸ್ಎಲ್ಸಿ ಮೂವರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ ಬೆನ್ನಲ್ಲೀಗ ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರಿಗೂ ಕೊರೋನಾ ವಕ್ಕರಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಣಾಧಿಕಾರಿಗಳಲ್ಲಿ ಆತಂಕ ಸೃಷ್ಟಿಸಿದೆ.
ಹೌದು, ಇಲ್ಲಿನ ನವನಗರದಲ್ಲಿರುವ ಆದರ್ಶ ವಿದ್ಯಾಲಯದ ಬಾಹ್ಯ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಗೆ ಕೊರೋನಾ ಬಂದಿದೆ. ಹಳ್ಳೂರು ಗ್ರಾಮದ ಪ್ರೌಢಶಾಲೆ ಶಿಕ್ಷಕಿಗೆ ಬಾಗಲಕೋಟೆ ಆದರ್ಶ ವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಮೇಲ್ವಿಚಾರಕಿಯಾಗಿ ನಿಯೋಜಿಸಲಾಗಿತ್ತು. ಇವರು ಜೂನ್ 25 ಮತ್ತು 26ರಂದು ನಡೆದ ಪರೀಕ್ಷೆ ವೇಳೆ ಕೊಠಡಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸಿದ್ದರು.
ಇತ್ತೀಚೆಗೆ ಶಿಕ್ಷಕಿಗೆ ದಿಢೀರ್ ತಲೆನೋವು ಮತ್ತು ಜ್ವರ ಕಂಡು ಬಂದಿದೆ. ಹೀಗಾಗಿ ಶಿಕ್ಷಕಿಯೇ ಖುದ್ದು ಕೋವಿಡ್ ಜಿಲ್ಲಾಸ್ಪತ್ರೆಗೆ ಹೋಗಿ ಗಂಟಲು ಮಾದರಿ ದ್ರವ ಪರೀಕ್ಷೆ ಮಾಡಿಸಿದ್ದಾರೆ. ಆಗ ಇವರಿಗೆ ಕೊರೋನಾ ಪಾಸಿಟಿವ್ ಇರುವುದು ಧೃಡಪಟ್ಟಿದೆ.
ಇನ್ನು, ಶಿಕ್ಷಕಿಯೊಂದಿಗೆ ಪ್ರಥಾಮಿಕ ಸಂಪರ್ಕ ಹೊಂದಿದ್ದ 20 ಮಂದಿ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇವರ ಜಾಗಕ್ಕೆ ಹೊಸದಾಗಿ 20 ಜನರನ್ನು ನೇಮಿಸಿ ಡಿಡಿಪಿಐ ಶ್ರೀಶೈಲ ಬಿರಾದಾರ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಜುಲೈ 2 ರ ನಂತರ ಡಿಕೆಶಿ ಸೂಪರ್ಪ್ಲಾನ್; ಮಾಡಲಿದ್ದಾರೆ ಹೊಸ ಪ್ರಯೋಗ; ನಂಬಿದ ಕಾರ್ಯಕರ್ತರಿಗೂ ಭರ್ಜರಿ ಗಿಫ್ಟ್?
ಶಿಕ್ಷಕಿ ಜತೆಗೆ ಮುಧೋಳದ ನಗರದ ವಿದ್ಯಾರ್ಥಿಯೋರ್ವನಿಗೂ ಕೋವಿಡ್-19 ಬಂದಿದೆ. ಆದ್ದರಿಂದ ಎಸ್ಎಸ್ಎಲ್ಸಿ ಪರೀಕ್ಷೆಯುವ ವಿದ್ಯಾರ್ಥಿಗಳಿಗೆ ಕೊರೋನಾ ಭೀತಿ ಶುರುವಾಗಿದೆ.
ಭಾನುವಾರ ಒಂದೇ ದಿನ ಬಾಗಲಕೋಟೆಯಲ್ಲಿ 17 ಮಂದಿಗೆ ಕೊರೋನಾ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆಯೂ 180 ಆಗಿದೆ. ಇನ್ನು, ಮಾರಕ ಕೊರೋನಾಗೆ ನಿನ್ನೆ ಇಬ್ಬರು ಅಸುನೀಗಿದ್ದು, ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಸೋಂಕಿತರಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ