ಮುಂಬೈನಿಂದ ಬರುವವರನ್ನು ಕೋವಿಡ್ 19 ಪರೀಕ್ಷೆ ನಡೆಸಿ ಜಿಲ್ಲೆಗೆ ಪ್ರವೇಶ ನೀಡಿ ; ಶಾಸಕ ಶಿವಲಿಂಗೇಗೌಡ

ಮುಂಬೈ ಮಹಾನಗರದಿಂದ ಇನ್ನೂ ಜಿಲ್ಲೆಗೆ 10 ಸಾವಿರ ಮಂದಿ ಬರುವ ನಿರೀಕ್ಷೆ ಇದೆ.. ಅವರೆಲ್ಲಾ ಬಂದರೆ ಜಿಲ್ಲೆಗೆ ಗಂಡಾಂತರ ಶತಸಿದ್ದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು

news18-kannada
Updated:June 3, 2020, 12:48 PM IST
ಮುಂಬೈನಿಂದ ಬರುವವರನ್ನು ಕೋವಿಡ್ 19 ಪರೀಕ್ಷೆ ನಡೆಸಿ ಜಿಲ್ಲೆಗೆ ಪ್ರವೇಶ ನೀಡಿ ;  ಶಾಸಕ ಶಿವಲಿಂಗೇಗೌಡ
ಜೆಡಿಎಸ್​ ಶಾಸಕ ಶಿವಲಿಂಗೇಗೌಡ
  • Share this:
ಹಾಸನ(ಜೂ.03): ಮುಂಬೈನಿಂದ ಬರುವವರನ್ನು ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರವಷ್ಟೇ ಹಾಸನಕ್ಕೆ ಪ್ರವೇಶ ನೀಡಿ ಇಲ್ಲವಾದರೆ ಅಪಾಯ ಖಂಡಿತ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು. 

ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಕರೆಯಲಾಗಿದ್ದ ಕೋವಿಡ್ -19 ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಹಾಸನದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಬಂದ ವ್ಯಕ್ತಿಗಳ ಮೂಲಕ ಕೊರೋನಾ ಪಾಸಿಟಿವ್ ವರದಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ವಾಸಿಸುವ ಯಾರೊಬ್ಬರಿಗೂ ಕೊರೋನಾ ಸೋಂಕು ಕಂಡು ಬಂದಿಲ್ಲ. ಆದ್ದರಿಂದ ನೆರೆ ರಾಜ್ಯದಿಂದ ಬರುವವರನ್ನು ಪರೀಕ್ಷೆಗೆ ಒಳಪಡಿಸಿದ ನಂತರವಷ್ಟೇ ಪ್ರವೇಶ ನೀಡಿ ಎಂದು ಒತ್ತಾಯಿಸಿದರು.

ಮುಂಬೈ ಮಹಾನಗರದಿಂದ ಇನ್ನೂ ಜಿಲ್ಲೆಗೆ 10 ಸಾವಿರ ಮಂದಿ ಬರುವ ನಿರೀಕ್ಷೆ ಇದೆ.. ಅವರೆಲ್ಲಾ ಬಂದರೆ ಜಿಲ್ಲೆಗೆ ಗಂಡಾಂತರ ಶತಸಿದ್ದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಮುದಾಯ ಕೆಂದ್ರದಲ್ಲಿ ಎಷ್ಟು ದಾದಿಯರು ಬೇಕು ಅಷ್ಟೆಲ್ಲಾ ಕೇವಲ ಒಬ್ಬರಿದ್ದಾರೆ. ಕೋಟಿ ಖರ್ಚು ಮಾಡಿ ವೈದ್ಯಕೀಯ ಪದವಿ ಪಡೆದು ಸರ್ಕಾರಿ ಆಸ್ಪತ್ರೆ ಏಕೆ ಬೇಕು ಹಲವು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರು ಇಲ್ಲಾ. ಮೆಡಿಕಲ್ ಕಾಲೇಜ್ ತೆರೆಯುತ್ತಿದ್ದೀರಿ. ಆದರೆ, ಹಳ್ಳಿಯಲ್ಲಿ ಸೇವೆ ನೀಡಲು ಅವರು ತಯಾರಿಲ್ಲ. ಎಂಬಿಬಿಎಸ್ ಮಾಡಲು 5  ಕೋಟಿ ಖರ್ಚು ಮಾಡಿ 46 ಸಾವಿರಕ್ಕೆ ಇಂಜೆಕ್ಷನ್ ಕೊಡು ಎಂದರೆ ಬರುವರೇ ಹೇಳಿ ಎಂದು ಸಚಿವ ಕೆ.ಸುಧಾಕರ್ ಅವರಿಗೆ ಶಾಸಕ ಶಿವಲಿಂಗೇಗೌಡ ಪ್ರಶ್ನಿಸಿದರು.

ಏನಾದರೂ ಒಂದು ಕಾನೂನು ತಂದು(ಎನ್ ಆರ್ ಎಚ್ ಎಮ್ )ಸ್ಕೀಮ್ ಸಮರ್ಪಕವಾಗಿ ಜಾರಿಯಾಗಲಿ. ಇದು ಇಲಾಖೆಯಲ್ಲಿ ಸರಿಯಾಗಿ ಉಪಯೋಗವಾಗುತ್ತಿಲ್ಲ ನೀವಾದರು ಆರೋಗ್ಯ ಇಲಾಖೆ ಸುಧಾರಣೆಗೆ ಕ್ರಮ ವಹಿಸಿ ಎಂದು ಸಲಹೆ ನಿಡಿದರು.

ಕೋವಿಡ್ ಟೆಸ್ಟ್ ಕಡ್ಡಾಯವಾಗಬೇಕು :  ಹೆಚ್​ ಕೆ ಕುಮಾರಸ್ವಾಮಿ

ಶಾಸಕ ಹೆಚ್. ಕೆ. ಕುಮಾರಸ್ವಾಮಿ ಮಾತನಾಡಿ ಮಾಸ್ಕ್ ಉಪಯೋಗ ಹಾಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಬೇಕು. ನಮ್ಮಲ್ಲಿ ಆರೋಗ್ಯ ಚಿಕಿತ್ಸೆ ಹಾಗೂ ಪಾಲನೆ ವ್ಯವಸ್ಥೆ ಬಿಗಿಯಾಗಬೇಕು ಸಾಮಾಜಿಕ ಅಂತರ ಅತ್ಯಗತ್ಯ. ಈ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳಿದ ಅವರು, ಸಕಲೇಶಪುರ ಆಸ್ಪತ್ರೆಗೆ ಕೋವಿಡ್ ಸಮಸ್ಯೆ ಕಾಣಿಸಿಕೊಂಡ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ವೆಂಟಿಲೇಟರ್ ಬಂದಿಲ್ಲಾ.ಬಹುತೇಕ ತಾಲೂಕಿನ ಸರ್ಕಾರಿ ಆಸ್ಪತ್ರೆ ಯಲ್ಲಿ ವೆಂಟಿಲೆಟರ್ ಇಲ್ಲ. ಅಲ್ಲದೆ ಇದನ್ನು ನಿರ್ವಹಣೆ ಮಾಡುವ ನುರಿತ ವೈದ್ಯರು ಇಲ್ಲ  ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಬಿಡಾರ ಹೂಡುವುದು ಬೇಡ ತಾಲ್ಲೂಕು ಆಸ್ಪತ್ರೆಯಲ್ಲಿ ಸಹ ಶಸ್ತ್ರ ಚಿಕಿತ್ಸಕರನ್ನು ನಿಯೋಜನೆಗೆ ಒತ್ತಾಯಿಸಿದ ಅವರು ಹಳ್ಳಿಗಾಡಿನಲ್ಲಿನ ಕಿರಿಯ ವೈದ್ಯರು ಕೆಲಸ ಮಾಡಲಿ ಎಂದರು.ಇದನ್ನೂ ಓದಿ :  ಗಂಡನ ಕೊಲೆ ಮಾಡಿಸಿದ್ದ ಹೆಂಡತಿ ಸೇರಿದಂತೆ ನಾಲ್ವರು ಆರೋಪಿಗಳ ಬಂಧನ

ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಮಾತನಾಡಿ ಆರೋಗ್ಯ ವ್ಯವಸ್ಥೆ ಹೆಚ್ಚು ಉನ್ನತ ಮಟ್ಟದಲ್ಲಿ ಇರುವ ದೇಶದಲ್ಲಿ ಇಂದು ಕೊರೋನಾ ಮಹಾಮಾರಿಗೆ ಲಕ್ಷಜನ ಸಾವಿಗೀಡಾಗಿದ್ದಾರೆ. ಆದರೆ, ಭಾರತದಲ್ಲಿ ಆ ರೀತಿಯ ದುರಂತ ನಡೆದಿಲ್ಲ. ರಾಜ್ಯದಲ್ಲಿ 1800 ವೆಂಟಿಲೇಟರ್ ಅಳವಡಿಸಿದೆ. 2 ಲಕ್ಷ ಮಂದಿಯನ್ನು ಕ್ವಾರಂಟೈನ್ ಮಾಡಲು ತಯಾರಿದೆ. ಲಾಕ್ ಡೌನ್ ಮಾಡಿದ ಕಾರಣ ಹೆಚ್ಚು ಹಾನಿಯಾಗಿಲ್ಲ ಎಂದು ತಿಳಿಸಿದರು.

First published: June 3, 2020, 9:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading