ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಿದ್ದಿದೆ ರಾಶಿ ರಾಶಿ ಕೊರೋನಾ ತ್ಯಾಜ್ಯ!

ಬಿಮ್ಸ್ ಆಸ್ಪತ್ರೆಗೆ ಕೊರೋನಾ ಸೋಂಕಿನಿಂದ ಬರೋ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಬೆಳಗಾವಿ ಜಿಲ್ಲೆಯ ಜನ ಕೊರೋನಾ ಸೋಂಕಿಗಿಂದ ಹೆಚ್ಚಾಗಿ ಬಿಮ್ಸ್ ಆಸ್ಪತ್ರೆ ಹೆಸರು ಹೇಳಿದರೆ ಸಾಕು ಹೆದುರವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲಿನ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

news18-kannada
Updated:August 2, 2020, 7:23 PM IST
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಿದ್ದಿದೆ ರಾಶಿ ರಾಶಿ ಕೊರೋನಾ ತ್ಯಾಜ್ಯ!
ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಿದ್ದಿರುವ ತ್ಯಾಜ್ಯ.
  • Share this:
ಬೆಳಗಾವಿ (ಆಗಸ್ಟ್2); ಬೆಳಗಾವಿ ಬಿಮ್ಸ್ ಆಸ್ಪತ್ರೆ ಇತ್ತೀಚಿಗೆ ತನ್ನ ಎಡವಟ್ಟಿನಿಂದಲೇ ಸುದ್ದಿಯಾಗುತ್ತಿದೆ. ಆಸ್ಪತ್ರೆಗಳಲ್ಲಿ ಅನೇಕ ಅವ್ಯವಸ್ಥೆ, ಎಡವಟ್ಟುಗಳು ನಡೆದರೂ ಹೇಳುವವರು ಕೇಳುವವರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ತ್ಯಾಜ್ಯವು ಆಸ್ಪತ್ರೆಯ ಆವರಣದಲ್ಲಿ ರಾಶಿ ರಾಶಿ ಬಿದ್ದು ಇದನ್ನು ವಿಲೇವಾರಿ ಮಾಡದೇ ಇರೋದು ರೋಗಿಗಳ ಆತಂಕಕ್ಕೆ ಕಾರಣವಾಗಿದೆ.

ಬಿಮ್ಸ್ ಆಸ್ಪತ್ರೆಯಲ್ಲಿ ನಿತ್ಯ ಅನೇಕ ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಬಳಕೆಯಾಗುತ್ತವೆ. ಜತೆಗೆ ರೋಗಿಗಳು ಸಹ ಬಳಸಿರುವ ಮಾಸ್ಕ್ ಹಾಗೂ ವಿವಿಧ ತ್ಯಾಜ್ಯ ವಸ್ತುಗಳನ್ನು ಸಂಗ್ರಸಲಾಗುತ್ತದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಬೇಕು ಎಂಬುದು ಸರ್ಕಾರದ ನಿಯಮವಿದೆ. ಆದರೆ ಬಿಮ್ಸ್ ಆಸ್ಪತ್ರೆಯಲ್ಲಿ ರಾಶಿ ರಾಶಿ ಕಸ ಹಾಗೇ ಬಿದ್ದಿದ್ದು, ಯಾರೊಬ್ಬರು ಸ್ವಚ್ಛ ಮಾಡುವ ಬಗ್ಗೆ ಗಮನಹರಿಸಿಲ್ಲ.

ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ. ಊಟ ವ್ಯವಸ್ಥೆ ಸರಿಯಿಲ್ಲ ಎನ್ನುವ ಆರೋಪಗಳು ಇವೆ. ಜತೆಗೆ ತ್ಯಾಜ್ಯ ವಿಲೇವಾರಿ ಸಹ ಸದ್ಯ ಸೇರ್ಪಡೆಯಾಗಿದೆ. ಹೀಗೆ ಆಸ್ಪತ್ರೆಯ ಆವರಣದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಜಾನವಾರುಗಳು ಬಂದು ತಿಂದು ಹೋಗುತ್ತಿವೆ. ಇದು ಮತ್ತೊಂದು ಅನಾಹುತ ಸೃಷ್ಟಿಸುವ ಮೊದಲು ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಿದೆ.

ಬಿಮ್ಸ್ ಆಸ್ಪತ್ರೆಯಲ್ಲಿ ನಡೆಯುವ ಅವ್ಯವಸ್ಥೆಯ ಬಗ್ಗೆ ಈಗಾಗಲೇ ಹಲವು ಜನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮುಂದೆ ದೂರು ನೀಡಿದ್ದರು. ದಿನದಲ್ಲಿ ಎರಡು ಬಾರಿ ಸ್ವತಃ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಸರಿ ಮಾಡುತ್ತಾರೆ ಎಂದು ಸಚಿವರು ಹೇಳಿದ್ದರು. ಆದರೆ ಈವರೆಗೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆಸ್ಪತ್ರೆಗೆ ಹೋಗಿದ್ದಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಮಾಹಿತಿಯೇ ನೀಡಿಲ್ಲ. ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರೆ ಇಂತಹ ಅವಾಂತರಗಳು ಕಡಿಮೆಯಾಗುತ್ತಿದ್ದವು. ಆದರೇ ಬಿಮ್ಸ್ ಅಧಿಕಾರಿಗಳು ಮಾತ್ರ ಇಷ್ಟೊಂದು ನಿರ್ಲಕ್ಷ್ಯ ತೋರಿಸಿರೋದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.

ಇದನ್ನು ಓದಿ: ಆನ್‌ಲೈನ್‌ಗೆ ಲಗ್ಗೆ ಇಟ್ಟ ಹಾಪ್‌ಕಾಮ್ಸ್: ಮೈಸೂರಿನಲ್ಲಿ ಮನೆ ಮನೆಗೆ ತಲುಪುತ್ತಿದೆ ತಾಜಾ ಹಣ್ಣು-ತರಕಾರಿ

ಬಿಮ್ಸ್ ಆಸ್ಪತ್ರೆಗೆ ಕೊರೋನಾ ಸೋಂಕಿನಿಂದ ಬರೋ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಬೆಳಗಾವಿ ಜಿಲ್ಲೆಯ ಜನ ಕೊರೋನಾ ಸೋಂಕಿಗಿಂದ ಹೆಚ್ಚಾಗಿ ಬಿಮ್ಸ್ ಆಸ್ಪತ್ರೆ ಹೆಸರು ಹೇಳಿದರೆ ಸಾಕು ಹೆದುರವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲಿನ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Published by: HR Ramesh
First published: August 2, 2020, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading