ಕೋವಿಡ್​​-19 ಭೀತಿ: ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಕೊರೋನಾ ವಾರಿಯರ್ಸ್​ ಆಗ್ರಹ

ಮನೆಯಲ್ಲಿ ವಯಸ್ಸಾದ ತಮ್ಮ ತಂದೆ, ತಾಯಿಗಳು, ಪುಟಾಣಿ ಮಕ್ಕಳು ಇರುತ್ತಾರೆ. ಹೀಗಾಗಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಹೋಗುವುದಾದರೆ ಬೀದಿಯಲ್ಲಿರುವ ಮಹಾಮಾರಿಯನ್ನೇ ನಾವೇ ಮನೆಗೆ ಕರೆದುಕೊಂಡು ಹೋದಂತೆ ಆಗುತ್ತದೆ. ಒಂದು ವೇಳೆ ಹಾಗೇನಾದರೂ ಆದರೆ ನಮ್ಮ ಸ್ಥಿತಿ ಏನು, ಬಿಪಿ, ಶುಗರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಲ್ಲಿ ಇದ್ದಾರೆ. ಇದರಿಂದ ಗಂಭೀರ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ ಎನ್ನೋದು ಕೊರೋನಾ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿರುವ ನಾನ್ ಕ್ಲಿನಿಕ್ ಸಿಬ್ಬಂದಿಗಳ ಮತ್ತು ಪೋಷಕರ ಆತಂಕ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು(ಜು.02): ಕೊರೋನಾ ಮಹಾಮಾರಿಯಿಂದ ಎಷ್ಟೋ ಕುಟುಂಬಗಳು ದುಡಿಮೆಯೂ ಇಲ್ಲದೆ ಕಷ್ಟದಲ್ಲೇ ಜೀವನ ಸಾಗಿಸುತ್ತಿವೆ. ಅಂತಹವರಿಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಸಹಾಯವನ್ನು ಮಾಡುತ್ತಿವೆ. ಆದರೆ, ಕೊರೋನಾ ವಾರ್ಡ್‍ಗಳಲ್ಲೇ ಕೆಲಸ ಮಾಡುತ್ತಿರುವವರಿಗೆ ಪ್ರತ್ಯೇಕ ವಸತಿ ಸೌಲಭ್ಯವಿಲ್ಲದೆ ಮನೆಯವರೊಂದಿಗೆ ಹೋಗಿ ಇರಬೇಕಾದ ಸ್ಥಿತಿ ನಿರ್ಮಾವಾಗಿದೆ. ಇದರಿಂದ ನಾವೇ ನಮ್ಮ ಮನೆಗಳಿಗೆ ಕೋವಿಡ್​-19 ಮಹಾಮಾರಿಯನ್ನು ತಂದುಬಿಡ್ತೇವಾ ಎನ್ನೋ ಆಂತಕದಲ್ಲಿ ಕೊರೋನಾ ವಾರಿಯರ್ಸ್ ಇದ್ದಾರೆ.

ನಾವೆಲ್ಲರೂ ಮನೆಯಿಂದ ಹೊರಗೆ ಹೋಗಬೇಕಾದ್ರು ಹಿಂದೆ ಮುಂದೆ ನೋಡ್ತೇವೆ. ಇನ್ನು ಅಲ್ಲಿ ಸೋಂಕಿತನಿದ್ದ, ಅದು ಕಂಟೈನ್ಮೆಂಟ್ ಏರಿಯಾ ಅಂದ್ರೆ ನಾವು ಅತ್ತ ಸುಳಿಯೋದೆ ಇಲ್ಲ. ಆದರೆ ಕೊರೋನಾ ರೋಗದ ವಿರುದ್ಧವೇ ಹೋರಾಡುತ್ತಾ, ಆ ರೋಗಿಗಳಿಗೆ ಶ್ರುಶೂಷೆ ಮಾಡುತ್ತಿರುವವರ ಧೈರ್ಯ, ಸ್ಥೈರ್ಯವನ್ನು ಮೆಚ್ಚಲೇಬೇಕು. ಆದರೆ, ಕೊರೋನಾ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿರುವವರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗಬೇಕಾಗಿದೆ. ಕೊರೋನಾ ವಾರ್ಡ್‍ಗಳಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್ ಸೇರಿದಂತೆ ನಮ್ಮ ಸೇಫ್ಟಿಗೆ ಬೇಕಾಗಿರುವ ಎಲ್ಲಾ ರೀತಿ ಕ್ರಮಗಳನ್ನು ತೆಗೆದುಕೊಂಡಿರುತ್ತೇವೆ ಎನ್ನೋದು ಶ್ರುಶೂಷಕಿಯರ ಮಾತು.

ಮನೆಯಲ್ಲಿ ವಯಸ್ಸಾದ ತಮ್ಮ ತಂದೆ, ತಾಯಿಗಳು, ಪುಟಾಣಿ ಮಕ್ಕಳು ಇರುತ್ತಾರೆ. ಹೀಗಾಗಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಹೋಗುವುದಾದರೆ ಬೀದಿಯಲ್ಲಿರುವ ಮಹಾಮಾರಿಯನ್ನೇ ನಾವೇ ಮನೆಗೆ ಕರೆದುಕೊಂಡು ಹೋದಂತೆ ಆಗುತ್ತದೆ. ಒಂದು ವೇಳೆ ಹಾಗೇನಾದರೂ ಆದರೆ ನಮ್ಮ ಸ್ಥಿತಿ ಏನು, ಬಿಪಿ, ಶುಗರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಲ್ಲಿ ಇದ್ದಾರೆ. ಇದರಿಂದ ಗಂಭೀರ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ ಎನ್ನೋದು ಕೊರೋನಾ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿರುವ ನಾನ್ ಕ್ಲಿನಿಕ್ ಸಿಬ್ಬಂದಿಗಳ ಮತ್ತು ಪೋಷಕರ ಆತಂಕ.

ಇದನ್ನೂ ಓದಿ: ಕೊರೋನಾ ರೋಗಿ ಶವ ಎಳೆದೊಯ್ದು ಗುಂಡಿಗೆ ಎಸೆದ ಪ್ರಕರಣ: ಆರೋಗ್ಯ ಇಲಾಖೆ ಅಧಿಕಾರಿಗೆ ಯಾದಗಿರಿ ಡಿಸಿ ನೋಟಿಸ್​​

ಕೋವಿಡ್ ವಾರ್ಡ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‍ಗಳ ಈ ಸಮಸ್ಯೆಯನ್ನು ಹೇಳುತ್ತಿದ್ದಂತೆ ಮೆಡಿಕಲ್ ಕಾಲೇಜಿನ ಅಧಿಕಾರಿಗಳು ಎಚ್ಚೆತ್ತುಕೊಂಡರು. ಕೋವಿಡ್ ವಾರ್ಡ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಜಿಲ್ಲಾಡಳಿತದಿಂದಲೇ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಬಯಸಿದರೆ ಹಾಸ್ಟೆಲ್ ಅಥವಾ ಕ್ವಾಟ್ರಸ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಅಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎನ್ನೋದು ಮೆಡಿಕಲ್ ಕಾಲೇಜಿನ ಅಧಿಕಾರಿಗಳ ಮಾತು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಗತ್ಯವಿರುವವರು ತನ್ನ ಹೆಸರನ್ನು ನೊಂದಾಯಿಸಿಕೊಂಡರೆ ಪ್ರತ್ಯೇಕ ವಸತಿ ಸಮೀಕ್ಷೆ ಮಾಡಲಾಗುವುದು ಎನ್ನುತ್ತಿದ್ದಾರೆ ಸೂಪರಿಡೆಂಟ್ ಆಫ್ ಮೆಡಿಕಲ್ ಸ್ಟ್ಯಾಫ್ ಅಧಿಕಾರಿ ಲೋಕೇಶ್.

ಒಟ್ಟಿನಲ್ಲಿ ಕೊರೋನಾ ಮಹಾಮಾರಿ ಅಟ್ಯಾಕ್ ಆಗಿರುವ ರೋಗಿಗಳ ಶ್ರುಶೂಷೆ ಮಾಡುತ್ತಿರುವ ಸಿಬ್ಬಂದಿಗೆ ನಾವೇ ನಮ್ಮ ಮನೆಗಳಿಗೆ ಮಹಾಮಾರಿಯನ್ನು ಕರೆದೊಯ್ದು ಬಿಡುತ್ತೇವಾ ಎನ್ನೋ ಆತಂಕವಿದ್ದು, ಆದಷ್ಟು ಬೇಗ ಜಿಲ್ಲಾಡಳಿತ ಈ ಸಿಬ್ಬಂದಿಗೆ ಪ್ರತ್ಯೇಕ ವಸತಿ ಕಲ್ಪಿಸಲಿ ಎನ್ನೋದು ನಮ್ಮ ಒತ್ತಾಯ.
First published: