ಬೀದಿಗೆ ಬಿದ್ದ ಕಲಾವಿದರ ಬದುಕು ; ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿ ಕಲಾವಿದರು

ಮದುವೆಗಳಿಗೆ ಅಗತ್ಯವಾಗಿ ಬೇಕಾಗುವ ಮಂಗಳ ವಾದ್ಯ ಬ್ಯಾಂಡ್, ಬ್ಯಾಂಜೋ ಕಲಾವಿದರು ಈಗ ತುತ್ತು ಅನ್ನಕ್ಕೂ ಪರದಾಡುವಂತ ಸ್ಥಿತಿ ಎದುರಾಗಿದೆ.

ಬ್ಯಾಂಡ್ ಕಂಪನಿಯ ಕಲಾವಿದರು

ಬ್ಯಾಂಡ್ ಕಂಪನಿಯ ಕಲಾವಿದರು

  • Share this:
ಚಿಕ್ಕೋಡಿ(ಜುಲೈ.01): ಕೊರೋನಾ ಎಫೆಕ್ಟ್​ ನಿಂದಾಗಿ ಮದುವೆ, ಮುಂಜಿ, ಮೆರವಣಿಗೆ, ಹಬ್ಬ ಜಾತ್ರೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಬಾರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳು ಕಾಯಕವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ 

ಮಾರ್ಚ, ಏಪ್ರೀಲ್, ಮೇ, ಜೂನ್, ತಿಂಗಳುಗಳಲ್ಲಿಯೇ ಹೆಚ್ಚು ಮದುವೆ, ಮುಂಜಿ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳ ಇರುತ್ತವೆ. ಆದರೆ, ಈ ತಿಂಗಳುಗಳಲ್ಲಿಯೇ ಮಹಾಮಾರಿ ಕೊರೋನಾದಿಂದಾಗಿ ಇಡೀ ದೇಶಾದ್ಯಂತ ಲಾಕ್‍ಡೌನ್ ವಿಧಿಸಲಾಗಿತ್ತು. ಜೊತೆಗೆ ಯಾವುದೇ ಸಭೆ ಸಮಾರಂಭ ನಡೆಸಬಾರದು ಎಂದು ಸರ್ಕಾರ ಆದೇಶ ಮಾಡಿತ್ತು.

ವರ್ಷದಲ್ಲಿ ನಾಲ್ಕೈದು ತಿಂಗಳುಗಳ ಕಾಲ ಮದುವೆ ಸೇರಿದಂತೆ ಶುಭ ಸಮಾರಂಭಗಳು ನಡೆಯುತ್ತವೆ. ಹೀಗಾಗಿ ಮದುವೆಗಳಿಗೆ ಅಗತ್ಯವಾಗಿ ಬೇಕಾಗುವ ಮಂಗಳ ವಾದ್ಯ, ಬ್ಯಾಂಡ್, ಬ್ಯಾಂಜೋ ಕಲಾವಿದರು ಈಗ ತುತ್ತು ಅನ್ನಕ್ಕೂ ಪರದಾಡುವಂತ ಸ್ಥಿತಿ ಎದುರಾಗಿದೆ.

ಇನ್ನು ಲಾಕ್‍ ಡೌನ್‍ದಿಂದಾಗಿ ಬುದ್ದ, ಬಸವ, ಅಂಬೇಡ್ಕರ್, ಮಹಾವೀರ, ಶಿವ ಜಯಂತಿ, ಜಾತ್ರೆಗಳು ರದ್ದಾಗಿವೆ.  ಸಮಾರಂಭಗಳು, ವಿವಾಹ, ಗೃಹ ಪ್ರವೇಶ, ಸಮಾರಂಭಗಳು ಮುಂದೂಡಿದ್ದಾರೆ. ಮದುವೆ ಮೆರವಣಿಗೆ ವಿವಾಹ ಕಾರ್ಯಕ್ರಮಕ್ಕೆ ಬೇಕಾಗುವ ಮಂಗಳವಾದ್ಯಗಳಿಗೂ ಬ್ರೇಕ್ ಬಿದ್ದದ್ದು, ಈಗ ಇವರ ಉಪಜೀವನ ನಡೆಸುವುದು ಕಷ್ಟಕರವಾಗಿದೆ.

ಇದನ್ನೂ ಓದಿ : ಕೊರೋನಾಕ್ಕೂ ಕುಗ್ಗದ ಮಂಡ್ಯದ ಐದು ರೂಪಾಯಿ ಡಾಕ್ಟರ್ ; ಪ್ರತಿನಿತ್ಯ ನೂರಾರು ಜನರಿಗೆ ವೈದ್ಯರ ಚಿಕಿತ್ಸೆ

15 ರಿಂದ 20 ಕ್ಕೂ ಹೆಚ್ಚು ಜನರಿರುವ ಹಲವಾರು ಬ್ಯಾಂಡ್ ಕಂಪನಿಗಳು ನೂರಾರು ಮಂಗಳವಾದ್ಯಗಳ ತಂಡಗಳು ಇವೆ. ಒಂದು ಬ್ಯಾಂಡ್ ಕಂಪನಿಯಲ್ಲಿ ಕಲಾವಿದರು, ಕಾರ್ಮಿಕರು, ಸೇರಿದಂತೆ ಕನಿಷ್ಠ 20 ಜನ ದುಡಿಯುತ್ತಾರೆ. ಇಂಥ ನೂರಾರು ಕಲಾವಿದರ ಬದುಕನ್ನೇ ಕೊರೋನಾ ಕಸಿದುಕೊಂಡಿದೆ. ಹೀಗಾಗಿ ನಮಗೂ ಸರಕಾರ ಸಹಾಯ ಧನ ನೀಡುವಂತೆ ಕಾರ್ಮಿಕರು ಮನವಿ ಮಾಡಿದ್ದಾರೆ.


ಒಟ್ಟಿನಲ್ಲಿ ಈ ಕಲಾವಿದರನ್ನು ಹಾಗೂ ಕಾರ್ಮಿಕರನ್ನು ನಂಬಿಕೊಂಡಿರುವ ಕುಟುಂಬಸ್ಥರ ಸ್ಥಿತಿಯೂ ಶೋಚನೀಯವಾಗಿದೆ. ಬ್ಯಾಂಡ್ ಕಂಪನಿಗಳಲ್ಲಿ ಇದ್ದುಕೊಂಡು ಅಲ್ಪಸ್ವಲ್ಪ ಬರುವ ಸಂಭಾವನೆಯಲ್ಲಿಯೇ ಬದುಕು ಸಾಗಿಸುತ್ತಿದ್ದರು. ಈಗ ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ಸರಕಾರ ಕ್ಷೌರಿಕರಿಗೆ ಆಟೋ ಚಾಲಕರೂ ಸೇರಿದಂತೆ ಇತರರಿಗೆ ನೀಡಿರುವಂತೆ ವಾದ್ಯ ನುಡಿಸುವರಿಗೂ  ಸಹಾಯಧನದ ಪ್ಯಾಕೇಜ್ ಘೋಷಿಸಿ ಕಲಾವಿದರ ಬದುಕಿಗೆ ಸರಕಾರ ಆಸರೆಯಾಗಬೇಕಿದೆ.
First published: