ಕೊರೋನಾ ವಾರಿಯರ್ಸ್​​ಗೂ ಕಂಟಕ : ಇಬ್ಬರು ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಗೂ ಸೋಕು ದೃಢ

ಪೊಲೀಸ್ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೂ ಸೋಂಕು ಆವರಿಸಲಾರಂಭಿಸಿದೆ. ಜಿಲ್ಲೆಯಲ್ಲಿ ಮತ್ತೆ ಪೊಲೀಸರಿಗೆ ಕೊರೋನಾ ವಕ್ಕರಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಲಬುರ್ಗಿ(ಜೂ.28): ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ತಲ್ಲಣದ ವಾತಾವರಣ ನಿರ್ಮಿಸಿದೆ. ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು, ಕೊರೋನಾ ರಣಕೇಕೆ ಹಾಕಲಾರಂಭಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1364 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿದೆ. ಕಳೆದ ನಾಲ್ಕು ದಿನಗಳಲ್ಲಿ ಆರು ಜನ ಸಾವನ್ನಪ್ಪಿರುವದು ಆತಂಕಕ್ಕೆ ಕಾರಣವಾಗಿದೆ. ಇದು ಹೀಗಿರಬೇಕಾದರೆ ಕೊರೋನಾ ವಾರಿಯರ್ಸ್ ಗೂ ಸೋಂಕು ಬೆನ್ನು ಹತ್ತಿದ್ದು, ತಲ್ಲಣದ ವಾತಾವರಣ ಸೃಷ್ಟಿಸಿದೆ. 

ಕಲಬುರ್ಗಿ ಕೊರೋನಾ ಅಟ್ಟಹಾಸ ಮೆರೆದಿದೆ. ಕೊರೋನಾ ವಾರಿಯರ್ಸ್ ಗೂ ಬೆನ್ನು ಹತ್ತಿದೆ. ಪೊಲೀಸ್ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೂ ಸೋಂಕು ಆವರಿಸಲಾರಂಭಿಸಿದೆ. ಜಿಲ್ಲೆಯಲ್ಲಿ ಮತ್ತೆ ಪೊಲೀಸರಿಗೆ ಕೊರೋನಾ ವಕ್ಕರಿಸಿದೆ. ಕಲಬುರ್ಗಿಯ ಇಬ್ಬರು ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನಗರದ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಗೊಂಡಿದೆ. ನಗರದ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿಗೆ ರಾಂಡಮ್ ಆಗಿ ಪರೀಕ್ಷೆ ಮಾಡಲಾಗುತ್ತಿದ್ದು, ಈ ವೇಳೆ ಇಬ್ಬರು ಸಿಬ್ಬಂದಿಗೆ ಸೋಂಕಿರುವುದು ದೃಢಪಟ್ಟಿದೆ.

ಈ ಹಿಂದೆ ಕೆ.ಎಸ್.ಆರ್.ಪಿ ಕಾನ್ಸ್​ಟೇಬಲ್​ ಹಾಗೂ ವಿ.ವಿ. ಠಾಣೆ ಕಾನ್ಸ್​​ ಟೇಬಲ್​ ಗೆ ಸೋಂಕು ದೃಢಪಟ್ಟಿತ್ತು. ಕೆ.ಎಸ್.ಆರ್.ಪಿ ಕಾನ್ಸ್​ಟೇಬಲ್​ ಈಗಾಗಲೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೊನ್ನೆಯಷ್ಟೇ ವಿ.ವಿ. ಠಾಣೆಯ ಕಾನ್ಸ್​ಟೇಬಲ್ ಗೆ ಸೋಂಕು ದೃಢಪಟ್ಟು, ಆತನಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರೆದಿರುವಾಗಲೇ, ಮತ್ತಿಬ್ಬರು ಸಿಬ್ಬಂದಿಗೆ ಸೋಂಕು ದೃಢಪಟ್ಟಿರುವುದು ಪೊಲೀಸ್ ಸಿಬ್ಬಂದಿಯ ಆತಕಕ್ಕೆ ಕಾರಣವಾಗಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದೆ. ಉಳಿದ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಇದನ್ನೂ ಓದಿ : ಮನೆ ಅಂಗಳಕ್ಕೆ ಶಾಲಾ ಶಿಕ್ಷಕರು ; ಮನೆಯೇ ಪಾಠ ಶಾಲೆ ಶಿಕ್ಷಕರ ವಿನೂತನ ಪ್ರಯತ್ನ

ಮತ್ತೊಂದೆಡೆ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಗೆ ಕೊರೋನಾ ಸೋಂಕು ದೃಢಪಟ್ಟಿದೆ. ಆಳಂದ ತಾಲೂಕಿನ ಖಜೂರಿ ಗ್ರಾಮದ ನಿವಾಸಿಗೆ ಸೋಂಕು ದೃಢಪಟ್ಟಿದೆ. ನಲವತ್ತು ವರ್ಷದ ಆಶಾ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದ್ದು, ಆಕೆಗೆ ಸೋಂಕು ಹೇಗೆ ತಗುಲಿದೆ ಎನ್ನುವುದು ಗೊತ್ತಾಗಿಲ್ಲ.

ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋದಾಗ ಪತ್ತೆಯಾದ ಸೋಂಕು. ಕಳೆದ ಅನೇಕ ದಿನಗಳಿಂದ ಗ್ರಾಮದಲ್ಲಿ ಕೊರೋನಾ ಬಗ್ಗೆ ಮಾಹಿತಿ ನೀಡಿದ್ದ ಆಶಾ ಕಾರ್ಯಕರ್ತೆ. ಗ್ರಾಮದ ಬಹುತೇಕ ಜನರ ಸಂಪರ್ಕಕ್ಕೆ ಬಂದಿರುವ ಆಶಾ ಕಾರ್ಯಕರ್ತೆ. ಇಡೀ ಖಜೂರಿ ಗ್ರಾಮದಲ್ಲಿ ಇದೀಗ ಕೊರೋನಾ ಆತಂಕ ಸೃಷ್ಟಿಯಾಗಿದೆ.
First published: