HOME » NEWS » District » CORONA TEST ON THE SPOT IF DONT WEAR MASK KOLAR TAHSILDAR SHOBITHA WARNS THE PUBLIC MAK

ಮಾಸ್ಕ್ ಹಾಕದಿದ್ದರೆ ಸ್ಥಳದಲ್ಲೇ ಕೊರೋನಾ ಟೆಸ್ಟ್; ಸಾರ್ವಜನಿಕರಿಗೆ ಕೋಲಾರ ತಹಶೀಲ್ದಾರ್​ ಶೋಬಿತಾ ಎಚ್ಚರಿಕೆ

ಕೋಲಾರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರು ಹೆಚ್ಚುತ್ತಿದ್ದು, ಮಾಸ್ಕ್ ಧರಿಸದೆ ಒಡಾಡೊರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿಂದೆ ನೂರು ರೂಪಾಯಿ ದಂಡ ಹಾಕಿದ್ದಾರೆ. ಮುಂದೆ ಒಂದು ಸಾವಿರ ರೂಪಾಯಿ ದಂಡ ಹಾಕುವ ಸಾಧ್ಯತೆಯಿದೆ ಎಂದು ತಹಶೀಲ್ದಾರ್​ ಶೋಬಿತಾ ಎಚ್ಚರಿಕೆ ನೀಡಿದ್ದಾರೆ.

news18-kannada
Updated:October 15, 2020, 4:00 PM IST
ಮಾಸ್ಕ್ ಹಾಕದಿದ್ದರೆ ಸ್ಥಳದಲ್ಲೇ ಕೊರೋನಾ ಟೆಸ್ಟ್; ಸಾರ್ವಜನಿಕರಿಗೆ ಕೋಲಾರ ತಹಶೀಲ್ದಾರ್​ ಶೋಬಿತಾ ಎಚ್ಚರಿಕೆ
ಜನರಿಗೆ ಎಚ್ಚರಿಕೆ ನೀಡುತ್ತಿರುವ ಶಹಶೀಲ್ದಾರ್ ಶೋಬಿತಾ.
  • Share this:
ಕೋಲಾರ: ಜಿಲ್ಲೆಯಲ್ಲಿ ಇನ್ನು ಮುಂದೆ ಮಾಸ್ಕ್ ಹಾಕದೆ ನಿರ್ಲಕ್ಷ್ಯ ಎಸಗಿದರೆ, ಅಂತವರಿಗೆ ಸ್ತಳದಲ್ಲೆ ಕೊರೋನಾ ಟೆಸ್ಟ್ ಮಾಡಿಸೋದಾಗಿ, ಕೋಲಾರ ತಹಶಿಲ್ದಾರ್ ಶೋಬಿತಾ ಎಚ್ಚರಿಕೆ ನೀಡಿದ್ದಾರೆ. ಕೋಲಾರದ ಗಾಂಧೀವನ ಬಳಿ ತಾಲೂಕು ಆಡಳಿತ, ನಗರಸಭೆ ಹಾಗು ಆರೋಗ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕೊರೋನಾ ಜಾಗೃತಿ ಜಾಥಾದಲ್ಲಿ ತಹಶಿಲ್ದಾರ್ ಶೋಬಿತಾ ಹೀಗೊಂದು ಎಚ್ಚರಿಕೆ ನೀಡಿದ್ದಾರೆ. ನಗರದ ಅಮ್ಮವಾರಿ ಪೇಟೆಯಿಂದ ಎಂಜಿ ರಸ್ತೆವರೆಗೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ, ಕಂದಾಯ ಇಲಾಖೆ, ಆರೋಗ್ಯ, ನಗರಸಭೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ಜಾಥಾ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಶೋಬಿತಾ, ಕೋಲಾರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರು ಹೆಚ್ಚುತ್ತಿದ್ದು, ಮಾಸ್ಕ್ ಧರಿಸದೆ ಒಡಾಡೊರ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿಂದೆ ನೂರು ರೂಪಾಯಿ ದಂಡ ಹಾಕಿದ್ದಾರೆ. ಮುಂದೆ ಒಂದು ಸಾವಿರ ರೂಪಾಯಿ ದಂಡ ಹಾಕುವ ಸಾಧ್ಯತೆಯಿದೆ. ದಂಡವನ್ನು ಲೆಕ್ಕಿಸದೆ ಮಾಸ್ಕ್ ಯಾರು ಹಾಕಲ್ವೊ ಅವರಿಗೆ ರ್ಯಾಪಿಡ್ ಕಿಟ್ ಮೂಲಕ ಸ್ತಳದಲ್ಲೆ ಕೊರೋನಾ ಟೆಸ್ಟ್ ಮಾಡಿಸಿ ಕೊರೋನಾ ಫಲಿತಾಂಶ ನೀಡುವ ಎಚ್ಚರಿಕೆಯನ್ನ ನೀಡಿದರು.

ಇದನ್ನೂ ಓದಿ : ನಾಗರೀಕ ಸೇವೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಇತಿಹಾಸ ಬರೆದ ಪಂಜಾಬ್ ಸರ್ಕಾರ

ಇದೇ ವೇಳೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ರಮ್ಯ ದೀಪಿಕಾ, ಕೋಲಾರ ತಾಲೂಕಿನಲ್ಲಿ ದಿನೇ ದಿನೇ ಸೋಂಕು ಹೆಚ್ಚುತ್ತಿದೆ. ಪ್ರತಿದಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಯನ್ನ ದಾಖಲೆ ಮಟ್ಟದಲ್ಲಿ ಮಾಡಲಾಗುತ್ತಿದೆ. ಜನರು ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಿಕೊಂಡು ಬಂದರೆ ಸೋಂಕು ತಡೆಗಟ್ಟಲು ಅನುಕೂಲಕರ ಆಗಲಿದೆ ಎಂದು  ಸಲಹೆ ನೀಡಿದರು.
Published by: MAshok Kumar
First published: October 15, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories