• Home
  • »
  • News
  • »
  • district
  • »
  • ಮಲೇಶಿಯಾದಿಂದ ಬಂದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ಪತ್ತೆ; ಆತಂಕದಲ್ಲಿ ಕೋಲಾರ, ಅನೇಕರ ಕ್ವಾರಂಟೈನ್

ಮಲೇಶಿಯಾದಿಂದ ಬಂದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ಪತ್ತೆ; ಆತಂಕದಲ್ಲಿ ಕೋಲಾರ, ಅನೇಕರ ಕ್ವಾರಂಟೈನ್

ಸೀಲ್‌ಡೌನ್‌ ಆಗಿರುವ ಬಂಗಾರಪೇಟೆಯ ವಿವೇಕಾನಂದ ನಗರ.

ಸೀಲ್‌ಡೌನ್‌ ಆಗಿರುವ ಬಂಗಾರಪೇಟೆಯ ವಿವೇಕಾನಂದ ನಗರ.

ಕೋಲಾರ ಜಿಲ್ಲೆಯ ಬಂಗಾರಪೇಟೆಗೆ  ಮಲೇಶಿಯಾದಿಂದ 35 ವರ್ಷದ ಓರ್ವ ವ್ಯಕ್ತಿ ಆಗಮಿಸಿದ್ದ, ಈತನನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಬಿಬಿಎಂಪಿ ಹೋಟೆಲ್‌ನಲ್ಲಿ ಇರಿಸಿ 7 ದಿನ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ, ಈತನ ಮಾದರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಈ ವರದಿ ಕೈ ಸೇರುವ ಮುನ್ನವೇ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಮುಂದೆ ಓದಿ ...
  • Share this:

ಕೋಲಾರ (ಜೂನ್‌ 01); ಮಲೇಶಿಯಾದಿಂದ ಜಿಲ್ಲೆಗೆ ಆಮಿಸಿರುವ ಓರ್ವ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ಇದೀಗ ಈತನ ಜೊತೆಗೆ ಕಟಿಂಗ್‌ ಮಾಡಿಸಿಕೊಂಡವರಿಂದ ಜೊತೆಗೆ ಓಡಾಡಿದವರ ವರೆಗೆ ಎಲ್ಲರಲ್ಲೂ ಆತಂಕ ಶುರುವಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಗೆ  ಮಲೇಶಿಯಾದಿಂದ 35 ವರ್ಷದ ಓರ್ವ ವ್ಯಕ್ತಿ ಆಗಮಿಸಿದ್ದ, ಈತನನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಬಿಬಿಎಂಪಿ ಹೋಟೆಲ್‌ನಲ್ಲಿ ಇರಿಸಿ 7 ದಿನ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ, ಈತನ ಮಾದರಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಈ ವರದಿ ಕೈ ಸೇರುವ ಮುನ್ನವೇ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಹೀಗಾಗಿ ಅವರು ಶುಕ್ರವಾರ ಬಂಗಾರಪೇಟೆಯ ವಿವೇಕಾನಂದ ನಗರದ ತಮ್ಮ ನಿವಾಸಕ್ಕೆ ಬಂದಿದ್ದಾರೆ. ಅಲ್ಲದೆ, ಕಳೆದ ಭಾನುವಾರ ಮನೆ ಬಳಿಯೇ ಇರುವ ಹೇರ್ ಕಟಿಂಗ್ ಶಾಪ್ ನಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದಾರೆ. ಅಲ್ಲದೆ, ಅನೇಕರ ಜೊತೆಗೆ ಓಡಾಟ ನಡೆಸಿದ್ದಾರೆ. ಹೀಗಾಗಿ ಈತನ ಜೊತೆಗೆ ಅಂದು ಕಟಿಂಗ್ ಮಾಡಿಸಿಕೊಂಡವರ ಮಾಹಿತಿ ಪಡೆದಿರುವ ಆರೋಗ್ಯ ಇಲಾಖೆ ಅಧಿಕಾರಿಗಳು 15ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಿದ್ದಾರೆ.

ಅಲ್ಲದೆ, ಬಂಗಾರಪೇಟೆಯ ವಿವೇಕಾನಂದ ನಗರ‌ವನ್ನು ಸೀಲ್ ಡೌನ್ ಮಾಡಿದ್ದು ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಈ ಕುರಿತು ಮಾತನಾಡಿರುವ ಕೋಲಾರ ಅಪರ ಜಿಲ್ಲಾಧಿಕಾರಿ ಬಿ. ಶಿವಸ್ವಾಮಿ, "ಇವರು ವರದಿಗೆ ಮುನ್ನವೇ ನಿವಾಸಕ್ಕೆ ಮರಳಿದ್ದಾರೆ. ಇದೀಗ ವರದಿ ಕೈಸೇರಿಸ ಕೂಡಲೇ ವ್ಯಕ್ತಿಯ ಮೂಲ‌ ಪತ್ತೆಹಚ್ಚಿ ಬೆಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ, ಸಂಪರ್ಕಿರನ್ನು ಪತ್ತೆಹಚ್ಚಿ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 

ಇದನ್ನೂ ಓದಿ : ವಿಮಾನಯಾನ ಪುನರಾರಂಭ; ಒಂದು ವಾರದಲ್ಲಿ 3370 ವಿಮಾನ ಹಾರಾಟ, 2.6 ಲಕ್ಷ ಪ್ರಯಾಣಿಕರ ಓಡಾಟ

First published: