ಕೊರೋನಾ ಭೀತಿ; ಕಾಲೇಜು ಆರಂಭವಾಗಿ ಒಂದು ವಾರ ಕಳೆದರೂ ವಿದ್ಯಾರ್ಥಿಗಳ ಸುಳಿವಿಲ್ಲ!

ಕಾಲೇಜಿಗೆ ಬರಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಒಂದು ವಾರವಾದರೂ ಅವರ ಪರೀಕ್ಷಾ ವರದಿ ಬಂದಿಲ್ಲ. ಕಾಲೇಜಿನ ಸಿಬ್ಬಂದಿಗಳಲ್ಲಿಯೂ ವರದಿ ಬಂದಿಲ್ಲ. ಒಂದು ವಾರದವರೆಗೆ ಐಸೋಲೇಷನ್ ಆಗಬೇಕಾಗಿರುವ ಹಿನ್ನಲೆ ಬಹುತೇಕರು ಕಾಲೇಜಿಗೆ ಬರುತ್ತಿಲ್ಲ.

ಖಾಲಿ ಹೊಡೆಯುತ್ತಿರುವ ತರಗತಿಗಳು.

ಖಾಲಿ ಹೊಡೆಯುತ್ತಿರುವ ತರಗತಿಗಳು.

  • Share this:
ರಾಯಚೂರು: ಮಾರ್ಚ್​​ ತಿಂಗಳಿನಿಂದ ಬಂದ್ ಆಗಿದ್ದ ಪದವಿ ಕಾಲೇಜು ಹಂತ ಹಂತವಾಗಿ ಆರಂಭಕ್ಕೆ ಸಿದ್ದತೆ ನಡೆದಿದೆ. ಈ ಮೊದಲು ಹಂತವಾಗಿ ರಾಜ್ಯದಲ್ಲಿ ಕಳೆದ ವಾರ ನವಂಬರ್ 17 ರಿಂದ ಪದವಿ ಕಾಲೇಜುಗಳು ಅಂತಿಮ ವರ್ಷದ ವಿದ್ಯಾರ್ಥಿಗಳ ತರಗತಿ ಆರಂಭವಾಗಿವೆ. ಆದರೆ, ಕಾಲೇಜು ಆರಂಭವಾಗಿ ಒಂದು ವಾರದವಾದರೂ ರಾಯಚೂರಿನಲ್ಲಿ ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಬರುತ್ತಿಲ್ಲ, ಬಹುತೇಕ ಕಾಲೇಜುಗಳಲ್ಲಿ ಹಾಜರಾತಿ ಸಂಖ್ಯೆ ಕೇವಲ 10-12 ಮಾತ್ರ ಇದೆ. ಇದಕ್ಕೆ ಉದಾಹರಣೆಯಾಗಿ ರಾಯಚೂರಿನ ಎಲ್​ವಿಡಿ ಕಾಲೇಜು ಭಣ ಭಣ ಎನ್ನುತ್ತಿರುವುದು. ಒಂದು ವಾರದವಾದರೂ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಇನ್ನೂ ಸರಕಾರಿ ಪದವಿ‌ ಕಾಲೇಜು ಸೇರಿದಂತೆ ಜಿಲ್ಲೆಯ ಬಹುತೇಕ ಕಾಲೇಜಿನಲ್ಲಿ ಇದೆ ಸ್ಥಿತಿ ಇದೆ.

ಇದಕ್ಕೆ ಕಾರಣ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವುದು ಕಡ್ಡಾಯ ಮಾಡಲಾಗಿದೆ. ಬಹುತೇಕ ಪಾಲಕರು ಹಾಗೂ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡರೆ ಎಲ್ಲಿ ಕೋವಿಡ್ ಧೃಡ ಪಡುತ್ತದೆಯೋ? ಎಂಬ ಭಯ. ಇತ್ತೀಚಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ಡ ಧೃಪಡುತ್ತಿರುವ ಹಿನ್ನಲೆಯಲ್ಲಿ ಬಹುತೇಕರು ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ.

ಇನ್ನೂ ಕಾಲೇಜಿಗೆ ಬರಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಒಂದು ವಾರವಾದರೂ ಅವರ ಪರೀಕ್ಷಾ ವರದಿ ಬಂದಿಲ್ಲ. ಕಾಲೇಜಿನ ಸಿಬ್ಬಂದಿಗಳಲ್ಲಿಯೂ ವರದಿ ಬಂದಿಲ್ಲ. ಒಂದು ವಾರದವರೆಗೆ ಐಸೋಲೇಷನ್ ಆಗಬೇಕಾಗಿರುವ ಹಿನ್ನಲೆ ಬಹುತೇಕರು ಕಾಲೇಜಿಗೆ ಬರುತ್ತಿಲ್ಲ. ಇನ್ನೂ ವಿದ್ಯಾರ್ಥಿಗಳು ಎಲ್ಲಿ ಟೆಸ್ಟ್ ಮಾಡಿಸಿಕೊಳ್ಳಬೇಕು? ಯಾರು ಮಾಡುತ್ತಾರೆ? ಸಮೂಹಿಕವಾಗಿ ಸ್ವ್ಯಾಬ್ ತೆಗೆದುಕೊಳ್ಳುವ ಕೇಂದ್ರಕ್ಕೆ ಹೋಗಬೇಕೆ? ಎಂಬ ಮಾಹಿತಿಯೂ ಇಲ್ಲ.

ಇದನ್ನೂ ಓದಿ : ಬೀದರ್, ಬಸವ ಕಲ್ಯಾಣ ಕ್ಷೇತ್ರಕ್ಕೆ ಭರ್ಜರಿ ಉಡುಗೊರೆ; ಪ್ರತಿ ಕ್ಷೇತ್ರಕ್ಕೆ 7500 ಮನೆಗಳ ನಿರ್ಮಾಣಕ್ಕೆ ಆದೇಶ

ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಸ್ವ್ಯಾಬ್ ತೆಗೆಯುವ ಕೇಂದ್ರವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸರಕಾರಿ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ತರಗತಿಗಳನ್ನು ಆರಂಭಿಸುವ ಮುನ್ನ ಸರಕಾರ ಈ ಬಗ್ಗೆ ಚಿಂತಿಸಬೇಕಾಗಿತ್ತು ಎನ್ನುವ ಅಭಿಪ್ರಾಯವಿದೆ. ಇನ್ನೂ ವಿದ್ಯಾರ್ಥಿಗಳಿಗೆ ಅನ್ ಲೈನ್ ಶಿಕ್ಷಣ ಪಡೆಯಲು ಹಲವಾರು ತೊಂದರೆಗಳಿವೆ. ಅಲ್ಲಿಯೂ ಶೇ.50 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಟೆಂಡ್ ಮಾಡುತ್ತಿದ್ದಾರೆ. ಇನ್ನೂ ಪ್ರಾಯೋಗಿಕ ತರಗತಿಗಳೇ ಇಲ್ಲ. ಸರಕಾರ ಈ ಎಲ್ಲವನ್ನು ಮೊದಲು ಚಿಂತಿಸಿ ಕಾಲೇಜು ಆರಂಭಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಮಧ್ಯೆ ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ,  ಗ್ರಾಮೀಣ ಪ್ರದೇಶದಲ್ಲಿ ಬಸ್ ಸೌಕರ್ಯವಿಲ್ಲ. ರಾಯಚೂರು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಓಡುತ್ತಿದ್ದ ಬಸ್ ಗಳಲ್ಲಿ ಶೇ.50 ರಷ್ಟು ಬಸ್ ಗಳು ಮಾತ್ರ ಓಡುತ್ತಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ಬರಲು ಆಗುತ್ತಿಲ್ಲ. ಆರಂಭದಲ್ಲಿಯೇ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ಈಗ ಸರಕಾರ ವಿದ್ಯಾರ್ಥಿಗಳ ಗಂಟಲ ದ್ರವ ಪರೀಕ್ಷೆ ,ಸಾರಿಗೆ ವ್ಯವಸ್ಥೆ, ಟೆಸ್ಟ್ ಮಾಡಿಸಿದವರ ವರದಿ ಬೇಗನೆ ಬರುವಂತೆ ಮಾಡಬೇಕು. ಇಲ್ಲವೆ ಕಾಲೇಜುಗಳಲ್ಲಿ ಮುಂಜಾಗ್ರತಾ ಕ್ರಮ ವಹಿಸಿ ಕಾಲೇಜು ಆರಂಭಿಸುವುದು ಅವಶ್ಯ ಎನ್ನಲಾಗುತ್ತಿದೆ.
Published by:MAshok Kumar
First published: