ಕಾರ ಹುಣ್ಣುಮೆಗೆ ತಟ್ಟಿದ ಕೊರೋನಾ ಭೀತಿ..!; ಸಂಭ್ರಮದಿಂದ ಆಚರಣೆ ಮಾಡುತ್ತಿದ್ದ ರೈತರ ಹಬ್ಬಕ್ಕೂ ಕುತ್ತು

ಕೊರೋನಾ ವೈರಸ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬಾರದು ಎಂದು ಜಿಲ್ಲಾಡಳಿತ ಆದೇಶ ಮಾಡಿದೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಹಲವೆಡೆ ರೈತರು ಈ ಬಾರಿ ಸರಳವಾಗಿ ಕಾರ ಹುಣ್ಣುಮೆ ಆಚರಣೆ ಮಾಡುತ್ತಿದ್ದಾರೆ. ಕರಿ ಹರಿಯುವ ಕಾರ್ಯವನ್ನು ಕೈ ಬಿಟ್ಟಿದ್ದಾರೆ.

news18-kannada
Updated:June 6, 2020, 7:22 AM IST
ಕಾರ ಹುಣ್ಣುಮೆಗೆ ತಟ್ಟಿದ ಕೊರೋನಾ ಭೀತಿ..!; ಸಂಭ್ರಮದಿಂದ ಆಚರಣೆ ಮಾಡುತ್ತಿದ್ದ ರೈತರ ಹಬ್ಬಕ್ಕೂ ಕುತ್ತು
ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಎತ್ತುಗಳಿಗೆ ಅಲಂಕರಿಸುತ್ತಿರುವ ರೈತರು.
  • Share this:
ಗದಗ : ಇಡೀ ಮಾನವ ಕುಲಕ್ಕೆ ಕಂಟಕವಾದ ಕೊರೋನಾ ಭೀತಿ ಇದೀಗ ರೈತರ ಸಡಗರದ ಹಬ್ಬಕ್ಕೂ ತಟ್ಟಿದೆ.  ಹೌದು, ಪ್ರತಿವರ್ಷ ಕಾರ ಹುಣ್ಣುಮೆ ಬಂತು ಅಂದ್ರೆ, ರೈತರ ಸಂಗಾತಿಗಳಾದ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ ಈ ಭಾರಿ ಡೆಡ್ಲಿ ಕೊರೋನಾದಿಂದ ಸರಳವಾಗಿ ಆಚರಣೆ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಅಂದಹಾಗೇ ಗದಗನ ವೀರ ನಾರಾಯಣ ಓಣಿ ಹಾಗೂ ಬೆಟಗೇರಿ ರೈತಾಪಿ ವರ್ಗ ಸಂಭ್ರಮ ಸಡಗರರಿಂದ ಕಾರ ಹುಣ್ಣುಮೆ ಆಚರಣೆ ಮಾಡುತ್ತಿದ್ದರು. ಈ ಭಾರಿ ಕೇವಲ ಎತ್ತುಗಳ ಮೈ ತೊಳೆದು, ಅವುಗಳಿಗೆ ತತ್ತಿ ಸರಾಯಿ, ಎಣ್ಣಿ ಹಾಕಲಾಯಿತು. ಹೀಗೆ ಮಾಡೋದರಿಂದ ಎತ್ತುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಸಹ ಇದೆ.

ಕೊರೋನಾ ವೈರಸ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬಾರದು ಎಂದು ಜಿಲ್ಲಾಡಳಿತ ಆದೇಶ ಮಾಡಿದೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಹಲವೆಡೆ ರೈತರು ಈ ಬಾರಿ ಸರಳವಾಗಿ ಕಾರ ಹುಣ್ಣುಮೆ ಆಚರಣೆ ಮಾಡುತ್ತಿದ್ದಾರೆ. ಕರಿ ಹರಿಯುವ ಕಾರ್ಯವನ್ನು ಕೈ ಬಿಟ್ಟಿದ್ದಾರೆ. ಈ ಮೊದಲು ಎತ್ತುಗಳನ್ನು ಶೃಂಗಾರ ಮಾಡಿ ಓಣಿಯಲ್ಲಿ ಓಡಿಸಿ ಕರಿ ಹರಿಯುತ್ತಿದ್ದರು.

ಕೆಲವು ಗ್ರಾಮಗಳಲ್ಲಿ ಮಾತ್ರ ರೈತರು ಹಿಂದಿನ ಸಂಪ್ರದಾಯದಂತೆ ಎತ್ತುಗಳನ್ನು ಶೃಂಗಾರ ಮಾಡಿ ರಸ್ತೆ ಓಡಿಸಿ ಕರಿ ಹರಿದಿದ್ದಾರೆ. ಹಿಂದಿನ ಕಾಲದಿಂದ ಮಾಡಿಕೊಂಡ ಬಂದಿರೋ ಸಂಪ್ರದಾಯವನ್ನು ಬಿಡಲು ಸಾಧ್ಯವಿಲ್ಲ. ಹೀಗಾಗಿ ಸರಳವಾಗಿ ಆಚರಣೆ ಮಾಡಿರೋದಾಗಿ ಹೇಳ್ತಾರೆ ಯುವ ರೈತರು.

ಮುಂಗಾರು ಆರಂಭದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದ ಕಾರ ಹುಣ್ಣುಮೆ ಹಬ್ಬಕ್ಕೆ ಕೊರೋನಾ ಕರಿ ನೆರಳು ಬಿದ್ದಿದೆ. ರೈತ ವರ್ಗ ಕೊರೋನಾ ಭೀತಿಯ ನಡುವೆ ಸರಳವಾಗಿ ಈ ಹಬ್ಬವನ್ನು ಆಚರಣೆ ಮಾಡಿದ್ದಾರೆ.

ಇದನ್ನೂ ಓದಿ : Kerala Elephant Death: ಕೇರಳದ ಆನೆ ಹತ್ಯೆಗೆ ಸಂಬಂಧಿಸಿದಂತೆ ’ಕೋಮುದ್ವೇಷದ’ ಹೇಳಿಕೆ; ಸಚಿವೆ ಮನೇಕಾ ಗಾಂಧಿ ವಿರುದ್ಧ ಎಫ್‌ಐಆರ್‌
First published: June 6, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading