ಕೊರೋನಾಘಾತಕ್ಕೆ ತುಮಕೂರು‌ ತತ್ತರ; ದಿನದಿಂದ ದಿನಕ್ಕೆ ಏರುತ್ತಲೇ ಇದೆ ಮಹಾಮಾರಿಯ ಕಾವು

ಕಲ್ಪತರು ನಾಡು ತುಮಕೂರಿನಲ್ಲಿ ಕಳೆದ ತಿಂಗಳು ಎರಡಂಕಿಯಲ್ಲಿದ್ದ  ಸೋಂಕಿತರ ಸಂಖ್ಯೆ, ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ನಾಲ್ಕು ನೂರರ ಗಡಿ ದಾಟಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 95 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 30 ಜನ ಪೊಲೀಸರು ಎಂಬುದು ಉಲ್ಲೇಖಾರ್ಹ.

news18-kannada
Updated:July 11, 2020, 8:04 AM IST
ಕೊರೋನಾಘಾತಕ್ಕೆ ತುಮಕೂರು‌ ತತ್ತರ; ದಿನದಿಂದ ದಿನಕ್ಕೆ ಏರುತ್ತಲೇ ಇದೆ ಮಹಾಮಾರಿಯ ಕಾವು
ಸಾಂದರ್ಭಿ ಚಿತ್ರ
  • Share this:
ತುಮಕೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಇತ್ತ ತುಮಕೂರು ಜಿಲ್ಲೆಯಲ್ಲೂ ಮಾರಣಾಂತಿಕ ಸೋಂಕು ರಣಕೇಕೆ ಹಾಕುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಮತ್ತು ಮೃತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಕೊರೋನಾ ಸಾಮುದಾಯಿಕವಾಗಿ ಹರಡಿದೆಯಾ? ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಆತಂಕ ವ್ಯಕ್ತಪಡಿಸಿದ್ದರು. ಅಂಕಿಅಂಶಗಳೂ ಸಹ ಈ ಅನುಮಾನಕ್ಕೆ ಪೂರಕವಾಗಿದ್ದದ್ದು ಆತಂಕಕ್ಕೆ ಕಾರಣವಾಗಿತ್ತು.

ಕಲ್ಪತರು ನಾಡು ತುಮಕೂರಿನಲ್ಲಿ ಕಳೆದ ತಿಂಗಳು ಎರಡಂಕಿಯಲ್ಲಿದ್ದ  ಸೋಂಕಿತರ ಸಂಖ್ಯೆ, ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ನಾಲ್ಕು ನೂರರ ಗಡಿ ದಾಟಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 95 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 30 ಜನ ಪೊಲೀಸರು ಎಂಬುದು ಉಲ್ಲೇಖಾರ್ಹ. ಜೂನ್. 30 ರಂದು ಅಂದರೆ ಕಳೆದ 10 ದಿನಗಳ ಹಿಂದೆ 113 ಇದ್ದ ಕೊರೋನಾ ಪಾಸಿಟೀವ್ ಪ್ರಕರಣಗಳು ಇಂದಿಗೆ ಬರೋಬ್ಬರಿ 438ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ದಾಖಲೆ ಜಿಗಿತ ಕಂಡ ಕೊರೋನಾ; ಒಂದೇ ದಿನಕ್ಕೆ 7,862 ಜನರಲ್ಲಿ ಸೋಂಕು ಪತ್ತೆ, 226 ಸಾವು!

ಒಂದೆಡೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ನಾಲ್ಕು ನೂರರ ಗಡಿ ದಾಟಿ ಜನರಿಗೆ ಭಯ ಮೂಡಿಸಿದ್ದರೆ, ಶುಕ್ರವಾರ ಕೊರೋನಾಗೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾದಿಂದ ಮೃತಪಟ್ಟವರ ಸಂಖ್ಯೆಯೂ 13ಕ್ಕೆ ಏರಿಕೆಯಾಗಿದೆ. ಒಟ್ಟಲ್ಲಿ ಕೊರೋನಾ ಭೀತಿ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಏರುತ್ತಲೇ ಇರುವುದು ಜಿಲ್ಲಾಡಳಿತಕ್ಕೂ ತಲೆ ನೋವಿನ ಸಂಗತಿಯಾಗಿದೆ.
Published by: MAshok Kumar
First published: July 11, 2020, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading