• Home
  • »
  • News
  • »
  • district
  • »
  • corona : ಅಧಿಕಾರಿಗಳ ನಿರ್ಲಕ್ಷ್ಯ; ಕೊಡಗಿನ ಕರಿಕೆ ಚೆಕ್‍ಪೋಸ್ಟ್​ನಲ್ಲಿ ಇಲ್ಲ ಕಟ್ಟುನಿಟ್ಟಿನ ಕ್ರಮ

corona : ಅಧಿಕಾರಿಗಳ ನಿರ್ಲಕ್ಷ್ಯ; ಕೊಡಗಿನ ಕರಿಕೆ ಚೆಕ್‍ಪೋಸ್ಟ್​ನಲ್ಲಿ ಇಲ್ಲ ಕಟ್ಟುನಿಟ್ಟಿನ ಕ್ರಮ

ತಪಾಸಣೆ ಇಲ್ಲದೆ ಒಳ ಬರುತ್ತಿರುವ ವಾಹನ

ತಪಾಸಣೆ ಇಲ್ಲದೆ ಒಳ ಬರುತ್ತಿರುವ ವಾಹನ

ಸಾಕಷ್ಟು ಆಟೋ, ಬೈಕ್ ಮತ್ತು ಜೀಪುಗಳು ಹೋಗಿ ಬರುತ್ತಿದ್ದವು. ಆದರೂ ಒಬ್ಬರನ್ನಾದರೂ ಪೊಲೀಸರು ನಿಲ್ಲಿಸಿ ಯಾವ ಪರಿಶೀಲನೆಯನ್ನು ಮಾಡುತ್ತಿರಲಿಲ್ಲ. ಮಾಧ್ಯಮಗಳ ಕ್ಯಾಮರಾ ಕಂಡೊಡನೆ ಪೊಲೀಸರು ರಸ್ತೆಗಿಳಿದು ವಾಹನಗಳ ನಿಲ್ಲಿಸಿ ಪರಿಶೀಲನೆಗೆ ಮುಂದಾದರು. ಆಗಲೂ ಆಟೋ, ಬೈಕ್ ಮತ್ತು ಜೀಪುಗಳಲ್ಲಿ ಬಂದವರಿಗೆ ಕೊವಿಡ್ ನೆಗೆಟಿವ್ ವರದಿ ಇದಿಯೋ ಇಲ್ಲವೋ ಎಂಬುದನ್ನು ಪರಿಶೀಲನೆಯನ್ನೇ ಮಾಡಲಿಲ್ಲ.

ಮುಂದೆ ಓದಿ ...
  • Share this:

ಕೊಡಗು : ಕೊಡಗು ಜಿಲ್ಲೆಗೆ ಪಕ್ಕದ ಕೇರಳ ರಾಜ್ಯ ಕಂಟಕವಾಗಿ ಕಾಡುತ್ತಿದೆ. ಹೀಗಾಗಿಯೇ ಕೇರಳ ಕೊಡಗು ಗಡಿಗಳ ಚೆಕ್‍ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡುವಂತೆ ಕೊಡಗು ಜಿಲ್ಲಾಡಳಿತ ಸೂಚಿಸಿದೆ. ಆದರೆ ಮಡಿಕೇರಿ ತಾಲ್ಲೂಕಿನ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಯಾವುದೇ ಕಟ್ಟುನಿಟ್ಟಿನ ತಪಾಸಣೆಯೇ ಇಲ್ಲದೆ ನಿರ್ಲಕ್ಷ್ಯ ವಹಿಸುತ್ತಿರೋದು ಬಟಾಬಯಲಾಗಿದೆ.


ಹೌದು ಕರ್ನಾಟಕದ ಗಡಿ ಜಿಲ್ಲೆಯಾಗಿರುವ ಕೊಡಗು, ಕೇರಳ ರಾಜ್ಯಕ್ಕೆ ಹೊಂದಿಕೊಂಡಿದ್ದು, ಕುಟ್ಟ, ಮಾಕುಟ್ಟ ಮತ್ತು ಕರಿಕೆಯ ಮೂರು ಕಡೆಗಳಲ್ಲಿ ಸಂಪರ್ಕ ಗಡಿಗಳಿವೆ. ಅದರಲ್ಲಿ ಮಡಿಕೇರಿ ತಾಲ್ಲೂಕಿನ ಕರಿಕೆ ಚೆಕ್‍ಪೋಸ್ಟ್ ನಲ್ಲಿ ಯಾವುದೇ ಕಟ್ಟುನಿಟ್ಟಿನ ತಪಾಸಣೆಯೇ ನಡೆಯುತ್ತಿಲ್ಲ. ಹಲವು ವಾಹನಗಳು ಕೇರಳದಿಂದ ಕೊಡಗಿಗೆ, ಕೊಡಗಿನಿಂದ ಕೇರಳಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲದೆ ಮುಕ್ತವಾಗಿ ಸಂಚರಿಸುತ್ತಿವೆ.


ಪೊಲೀಸ್, ಆರೋಗ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಚೆಕ್‍ಪೋಸ್ಟ್ ಗೆ ನೇಮಿಸಲಾಗಿದೆ. ಆದರೆ ಆರೋಗ್ಯ ಇಲಾಖೆಯಿಂದ ಕೇವಲ ಆಶಾ ಕಾರ್ಯಕರ್ತರು ಮಾತ್ರವೇ ಸ್ಥಳದಲ್ಲಿ ಇದ್ದದ್ದು ಬಿಟ್ಟರೇ ಬೇರೆಯವರ ಸುಳಿವೇ ಇರಲಿಲ್ಲ.


ಇನ್ನು ಪೊಲೀಸ್ ಸಿಬ್ಬಂದಿ ಚೆಕ್‍ಪೋಸ್ಟ್ ನಲ್ಲಿಯೇ ಇದ್ದರು ತಾವು ಇಲ್ಲದಂತೆ ಸುಮ್ಮನೇ ಇದ್ದರು. ಹಲವು ವಾಹನಗಳು ಚೆಕ್‍ಪೋಸ್ಟ್ ನಲ್ಲಿ ಯಾವುದೇ ಅಡೆತಡೆಯಿಲ್ಲದೆ ಓಡಾಡುತ್ತಿದ್ದವು. ಇನ್ನು ಕರಿಕೆ, ಚತ್ತುಕಾಯ ಗ್ರಾಮಗಳ ಜನರು ಆರಾಮಾಗಿ ಕೇರಳಕ್ಕೆ ನಡೆದುಕೊಂಡೇ ಹೋಗಿ ಬರುತ್ತಿದ್ದರು. ಇದ್ಯಾವುದಕ್ಕೂ ಪೊಲೀಸರು ಮಾತ್ರ ಕ್ಯಾರೇ ಎನ್ನುತ್ತಿರಲಿಲ್ಲ.
ಸಾಕಷ್ಟು ಆಟೋ, ಬೈಕ್ ಮತ್ತು ಜೀಪುಗಳು ಹೋಗಿ ಬರುತ್ತಿದ್ದವು. ಆದರೂ ಒಬ್ಬರನ್ನಾದರೂ ಪೊಲೀಸರು ನಿಲ್ಲಿಸಿ ಯಾವ ಪರಿಶೀಲನೆಯನ್ನು ಮಾಡುತ್ತಿರಲಿಲ್ಲ. ಮಾಧ್ಯಮಗಳ ಕ್ಯಾಮರಾ ಕಂಡೊಡನೆ ಪೊಲೀಸರು ರಸ್ತೆಗಿಳಿದು ವಾಹನಗಳ ನಿಲ್ಲಿಸಿ ಪರಿಶೀಲನೆಗೆ ಮುಂದಾದರು. ಆಗಲೂ ಆಟೋ, ಬೈಕ್ ಮತ್ತು ಜೀಪುಗಳಲ್ಲಿ ಬಂದವರಿಗೆ ಕೊವಿಡ್ ನೆಗೆಟಿವ್ ವರದಿ ಇದಿಯೋ ಇಲ್ಲವೋ ಎಂಬುದನ್ನು ಪರಿಶೀಲನೆಯನ್ನೇ ಮಾಡಲಿಲ್ಲ. ಬದಲಾಗಿ ಸುಮ್ಮನೆ ವಿಚಾರಣೆ ಮಾಡುವವರಂತೆ ನಟಿಸಿ ಎಲ್ಲರನ್ನೂ ಕೊಡಗಿಗೆ ಎಲ್ಲರನ್ನೂ ಬಿಡುತ್ತಿದ್ದರು.


ಈಗಾಗಲೇ ಕರಿಕೆ ಗ್ರಾಮದಲ್ಲಿ ಕೇರಳ ರಾಜ್ಯಕ್ಕೆ ಹೋಗಿ ಬಂದವರಿಗೆ ಸೋಂಕು ದೃಢಪಟ್ಟ ಪ್ರಕರಣಗಳು ಸಾಕಷ್ಟಿವೆ. ಒಂದು ವಾರದಲ್ಲಿ 20 ರಿಂದ 25 ಜನರಿಗೆ ಸೋಂಕು ದೃಢಪಟ್ಟಿದೆ. ಈ ಗ್ರಾಮದಲ್ಲಿ ಈಗಲೂ ನಿತ್ಯ ಒಂದೆರಡು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ ಎಂದು ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಹೇಳಿದ್ದಾರೆ.


ಇದಕ್ಕೆ ಚೆಕ್‍ಪೋಸ್ಟ್ ನಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯವೇ ಕಾರಣ. ಮತ್ತೊಂದೆಡೆ ಅಲ್ಲಿರುವ ಪೊಲೀಸ್ ಸಿಬ್ಬಂದಿ ಕೂಡ ಕೇರಳದಿಂದ ಬರುವವರಿಂದ ಹಣಪಡೆದು ಒಳಗೆ ಬಿಡುತ್ತಿದ್ದಾರೆ ಅಂತ ಸ್ಥಳೀಯರೇ ಆರೋಪ ಮಾಡುತ್ತಿದ್ದಾರೆ. ಯಾವುದೇ ಹೊಸ ನಿಯಮಗಳು ಬಂದರು ಅದರಿಂದ ನಮಗೆ ಹೇಗೆ ಲಾಭವಾಗುತ್ತದೆ ಎಂದು ಪೊಲೀಸರು ಯೋಚಿಸುತ್ತಾರೆ ಎಂದು ಚತ್ತುಕ್ಕಾಯ ಗ್ರಾಮದ ರಾಮನಾಥ್ ಹೇಳಿದ್ದಾರೆ.


ಇದನ್ನೂ ಓದಿ: ರಕ್ಷಾ ಬಂಧನದ ವಿಶೇಷ: ಭಾರತದ ರಾಜಕಾರಣದ ಪ್ರಮುಖ 5 ಅಣ್ಣ- ತಂಗಿಯರು ಇವರು...!


ಒಟ್ಟಿನಲ್ಲಿ ಕೊಡಗಿನಲ್ಲಿ ಈಗಲೂ ಪಾಸಿಟಿವಿಟಿ ರೇಟ್ ಶೇಕಡಾ 2 ಕ್ಕಿಂತ ಜಾಸ್ತಿಯೇ ಇದ್ದು ಚೆಕ್‍ಪೋಸ್ಟ್ ಗಳಲ್ಲಿನ ನಿರ್ಲಕ್ಷ್ಯ ಕೊಡಗಿನ ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:HR Ramesh
First published: