ಆರೋಗ್ಯ ಇಲಾಖೆಯ ಮಹಾ ಯಡವಟ್ಟು; ನೆಗೆಟಿವ್ ವರದಿಯಿಂದ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟ ಗರ್ಭಿಣಿ

ವ್ಯಾಪಾರಿಯಾದ ಆಕೆಯ ಗಂಡನಿಂದ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿತ್ತು. ಕೂಡಲೇ ಜಿಲ್ಲಾಡಳಿತ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ಏರಿಯಾವನ್ನ ಸೀಲ್ ಡೌನ್ ಮಾಡಿ, ಆಕೆಯ ಗಂಡ ಹಾಗೂ ಸುತ್ತಮುತ್ತಲಿನ ಹಲವರನ್ನ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಆದರೆ, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿತ್ತು.

news18-kannada
Updated:May 29, 2020, 7:08 AM IST
ಆರೋಗ್ಯ ಇಲಾಖೆಯ ಮಹಾ ಯಡವಟ್ಟು; ನೆಗೆಟಿವ್ ವರದಿಯಿಂದ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟ ಗರ್ಭಿಣಿ
ವ್ಯಾಪಾರಿಯಾದ ಆಕೆಯ ಗಂಡನಿಂದ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿತ್ತು. ಕೂಡಲೇ ಜಿಲ್ಲಾಡಳಿತ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ಏರಿಯಾವನ್ನ ಸೀಲ್ ಡೌನ್ ಮಾಡಿ, ಆಕೆಯ ಗಂಡ ಹಾಗೂ ಸುತ್ತಮುತ್ತಲಿನ ಹಲವರನ್ನ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಆದರೆ, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿತ್ತು.
  • Share this:
ಚಿಕ್ಕಮಗಳೂರು : ಕೊರೋನಾ ವಿಚಾರದಲ್ಲಿ ಜನರಿಗೆ ಧೈರ್ಯ ತುಂಬಬೇಕಾದ ಸರ್ಕಾರ ತಾನು ಮಾಡಿದ ಯಡವಟ್ಟಿನಿಂದ ಜನರೇ ಬೆಚ್ಚಿ ಬೀಳುವಂತಾಗಿದೆ. ಮೊದಲು ಸೋಂಕೇ ಇಲ್ಲದ ಗರ್ಭೀಣಿಗೆ ಕೊರೋನಾ ಸೋಂಕು ಅಂದ್ರು. ಕೆಲಸದಲ್ಲಿದ್ದ ವೈದ್ಯರಿಗೆ ಪಾಸಿಟಿವ್ ತರಿಸಿದ್ರು. ಇದರಿಂದ ಜಿಲ್ಲೆಯ ಜನ ಕಂಗಾಲಾಗಿದ್ದರು. ಆದರೆ, ಇದೀಗ ಎರಡು ಪ್ರಕರಣಗಳ ಪ್ರೈಮರಿ ಕಾಂಟಾಕ್ಟ್ ಲೀಸ್ಟ್‌ನಲ್ಲಿ 40ಕ್ಕೂ ಅಧಿಕ ಜನರ ವರದಿ ನೆಗೆಟಿವ್ ಬಂದಿತ್ತು. ಇದರ ಬೆನ್ನಿಗೆ ಗರ್ಭೀಣಿ ಮತ್ತು ವೈದ್ಯರ ವರದಿಯನ್ನು ಬೆಂಗಳೂರು ಲ್ಯಾಬ್‌ಗೆ ಕಳಿಸಲಾಗಿ ಇದೀಗ ಇಬ್ಬರ ವರದಿಯೂ ನೆಗೆಟಿವ್ ಬಂದಿದ್ದು ಕಾಫಿನಾಡಿನ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹೌದು... ಅಂದು ಮೇ 19. ಕಾಫಿನಾಡ ಮೂಡಿಗೆರೆ ಹಾಗೂ ತರೀಕೆರೆ ಜನರಿಗೆ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ, ಮೂಡಿಗೆರೆಯ ವೈದ್ಯ, ತರೀಕೆರೆಯ ಗರ್ಭೀಣಿ ಇಬ್ಬರಿಗೂ ಕೊರೋನ ಪಾಸಿಟಿವ್ ಎಂದು ಸರ್ಕಾರವೇ ಹೆಲ್ತ್ ಬುಲೆಟಿನ್‌ನಲ್ಲಿ ಅನೌನ್ಸ್ ಮಾಡಿತ್ತು. ಆದರೆ, ತುಂಬು ಗರ್ಭೀಣಿ ಮನೆ ಬಿಟ್ಟು ಹೊರಗೇ ಹೋಗಿಲ್ಲ, ಹೀಗಿದ್ದ ಮೇಲೆ ಕೊರೋನಾ ಬರಲು ಹೇಗೆ ಸಾಧ್ಯ? ಎಂದು ಜನ ಗೊಂದಲಕ್ಕೊಳಗಾಗಿದ್ದರು.

ವ್ಯಾಪಾರಿಯಾದ ಆಕೆಯ ಗಂಡನಿಂದ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿತ್ತು. ಕೂಡಲೇ ಜಿಲ್ಲಾಡಳಿತ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ಏರಿಯಾವನ್ನ ಸೀಲ್ ಡೌನ್ ಮಾಡಿ, ಆಕೆಯ ಗಂಡ ಹಾಗೂ ಸುತ್ತಮುತ್ತಲಿನ ಹಲವರನ್ನ ಕ್ವಾರಂಟೈನ್‌ಗೆ ಒಳಪಡಿಸಿತ್ತು. ಆದರೆ, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿತ್ತು.

ಪರಿಣಾಮ ಜಿಲ್ಲಾಡಳಿತಕ್ಕೆ ತುಸು ನಿರಾಳವಾಗಿದ್ದರೂ ಸಹ ಬೇರೆ ರೀತಿಯ ಟೆನ್ಷನ್‌ ಶುರುವಾಗಿತ್ತು. ನಾವೇ ಎಲ್ಲಾದ್ರು ಯಡವಟ್ಟು ಮಾಡಿದೆವ? ಎಂದು ಆತ್ಮಾವಲೋಕನಕ್ಕೆ ಮುಂದಾಗಿ, ಗರ್ಭೀಣಿಯ ವರದಿಯನ್ನು ನಾಲ್ಕೈದು ಬಾರಿ ಟೆಸ್ಟ್ ಮಾಡಿ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ಗೆ ಕಳುಹಿಸಿತ್ತು.

ಅಲ್ಲಿ ಗರ್ಭೀಣಿಗೆ ನೆಗೆಟಿವ್ ಎಂದು ಇಂದು ವರದಿ ಬಂದಿದೆ. ಇದರಿಂದ ತರೀಕೆರೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಗರ್ಭೀಣಿ ಹಾಗೂ ಗರ್ಭಿಣಿ ಕುಟುಂಬಸ್ಥರನ್ನು ನೆರೆಹೊರೆಯ ಜನ ಹೂವಿನ ಹಾರ ಹಾಕಿ ಇದೀಗ ಊರಿಗೆ ಸ್ವಾಗತಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬಿಜೆಪಿಯಲ್ಲಿ ಮತ್ತೆ ಭಿನ್ನಮತೀಯರ ಕಹಳೆ; ಕೊರೋನಾ ಸಂಕಷ್ಟದಲ್ಲೂ ಬಿಎಸ್‌ವೈ ಸ್ಥಾನಕ್ಕೆ ಸಂಚಕಾರ?
First published: May 29, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading