HOME » NEWS » District » CORONA MEDICINE REMDISIVIR MANUFACTURING AT NANJANAGUDU JUBILENTS FACTORY PMTV MAK

ಕೊರೋನಾ ಮೊದಲ ಅಲೆಯಲ್ಲಿ ಮೈಸೂರಿಗೆ ಮಾರಕವಾಗಿದ್ದ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ರೆಮ್​ಡಿಸಿವಿರ್ ತಯಾರಿಕೆ!

ಕಳೆದ ವರ್ಷ ಅಷ್ಟೇಲ್ಲಾ ಆವಾಂತರಕ್ಕೆ ಕಾರಣವಾಗಿದ್ದ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಈ ವರ್ಷದ ಕೊರೋನಾ ಅಲೆಯಲ್ಲಿ ಇಡೀ ರಾಜ್ಯಕ್ಕೆ ಜೀವರಕ್ಷಕನಾಗಿ ನಿಂತಿದೆ. ಅದು ಸಹ ಕೊರೊನಾ ರೋಗಿಗಳಿಗೆ ರಾಮಬಾಣವಾಗಿರುವ ರೆಮಿಡಿಸಿವಿರ್‌ ಇಂಜೆಕ್ಷನ್‌ ತಯಾರಿಸುವ ಮೂಲಕ.

news18-kannada
Updated:May 10, 2021, 6:25 PM IST
ಕೊರೋನಾ ಮೊದಲ ಅಲೆಯಲ್ಲಿ ಮೈಸೂರಿಗೆ ಮಾರಕವಾಗಿದ್ದ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ರೆಮ್​ಡಿಸಿವಿರ್ ತಯಾರಿಕೆ!
ರೆಮಿಡಿಸಿವರ್​ ಔಷಧ.
  • Share this:
ಮೈಸೂರು: ಜುಬಿಲಿಯಂಟ್‌..! ಬಹುಶಃ ಕಳೆದ ವರ್ಷ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳನಲ್ಲಿ ಇಡೀ ರಾಜ್ಯವೇ ಈ ಹೆಸರನ್ನು ಕೇಳಿತ್ತು. ಈ ಹೆಸರಿನ ಹಿಂದಿರುವ ಕಾರ್ಖಾನೆಯ ಬಗ್ಗೆ ಸುಧೀರ್ಘ ಚರ್ಚೆ ಮಾಡಿ, ಕೊರೋನಾ ಆತಂಕವನ್ನೆ ಹೆಚ್ಚಾಗುವಂತೆ ಮಾಡಿತ್ತು. ಆಗಷ್ಟೆ ಭಾರತದಲ್ಲಿ ಕೊರೋನಾ ಕೇಸ್‌ಗಳು ದಾಖಲಾಗುತ್ತಿದ್ದ ಸಂದರ್ಭದಲ್ಲಿ, ಮೈಸೂರಿನ ನಂಜನಗೂಡು ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯಂಟ್ಸ್ ಲೈಫ್‌ ಸೈನ್ಸ್‌ ಕಾರ್ಖಾನೆಗೆ ಅಪ್ಪಳಿಸಿದ್ದ ಕೊರೋನಾ, ಇಡೀ ಕಾರ್ಖಾನೆಗೆ ಬರಸಿಡಿಲಿನಂತೆ ಹರಡಿತ್ತು. ಇಡೀ ರಾಜ್ಯದಲ್ಲಿ ಒಂದೋ ಎರಡೋ ಕೊರೋನಾ ಕೇಸ್‌ ಪತ್ತೆಯಾಗುತ್ತಿದ್ದ ಕಾಲದಲ್ಲು ಜುಬಿಲಿಯಂಟ್ ಕಾರ್ಖಾನೆಯಲ್ಲಿ ಮಾತ್ರ, ದಿನವೊಂದಕ್ಕೆ ನಾಲ್ಕು ಐದು ಕೊರೋನಾ ಪಾಸಿಟಿವ್‌ಗಳು ಪತ್ತೆಯಾಗಿದ್ದವು.

ಅಂದಿನ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಕ್ಷಣ ಕಾರ್ಯಪ್ರವೃತರಾಗಿ, ಇಡೀ ನಂಜನಗೂಡು ತಾಲ್ಲೂಕನ್ನೆ ಲಾಕ್‌ಡೌನ್ ಮಾಡಿಬಿಟ್ಟಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 1800 ಮಂದಿಯನ್ನ ಏಕ ಕಾಲದಲ್ಲಿ ಕೊರೋನಾ ಪರೀಕ್ಷೆಗೆ ಒಳಪಡಿಸಿದರು. ಅಂತಿಮವಾಗಿ ಒಂದು ತಿಂಗಳ ಕಾಲ ಇಡೀ ಮೈಸೂರು ನಗರವನ್ನೆ ಕಾಡಿದ್ದ ಜುಬಿಲಿಯಂಟ್‌ ಕಾರ್ಖಾನೆಯಲ್ಲಿ ಒಟ್ಟು 74 ಕೊರೊನಾ ಕೇಸ್‌ ದಾಖಲಾಗಿದ್ದವು. ಆಗ ಇಡೀ ಮೈಸೂರಿನಲ್ಲಿ ಇದ್ದದ್ದು ಕೇವಲ 90 ಪ್ರಕರಣಗಳು ಮಾತ್ರ.

ಕೊರೋನಾದ ಮೊದಲ ಅಲೆಯಲ್ಲಿ  ಇಡೀ ಮೈಸೂರಿಗರಿಗೆ ಕಂಕಟ ತಂದೊಡ್ಡಿ, ಶೇ.80 ರಷ್ಟು ಪ್ರಕರಣಗಳನ್ನ ತನ್ನೋಳಗೆ ಅಡಗಿಸಿಕೊಂಡಿದ್ದ ಜುಬಿಲಿಯಂಟ್‌ ಕಾರ್ಖಾನೆ ವಿರುದ್ದ ಅಪಸ್ವರಗಳು ಕೇಳಿ ಬಂದಿದ್ದವು. ಆಗ ಸಿಎಂ ಬಿಎಸ್‌ವೈ ಕಾರ್ಖಾನೆಗೆ ಸೋಂಕು ಹೇಗೆ ಬಂತು ಅನ್ನೋದನ್ನ ಪತ್ತೆ ಹಚ್ಚೋ ಸಲುವಾಗಿ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ತನಿಖೆಯನ್ನು ಮಾಡಿಸಿದ್ದರು. ಆದರೆ, ತನಿಖೆಯಲ್ಲು ಕಾರ್ಖಾನೆಗೆ ಹೇಗೆ ಸೊಂಕು ತಗುಲಿತ್ತು ಅನ್ನೋದನ್ನ ಸಾಬೀತು ಮಾಡದೆ ಅಂತಿಮ ವರದಿ ಸಲ್ಲಿಸಿ, ನಂಜನಗೂಡಿನಲ್ಲಿ ಸೋಂಕು ನಿಯಂತ್ರಿಸಬೇಕು ಎಂದಷ್ಟೇ ತಿಳಿಸಲಾಗಿತ್ತು.

ಕಳೆದ ವರ್ಷ ಅಷ್ಟೇಲ್ಲಾ ಆವಾಂತರಕ್ಕೆ ಕಾರಣವಾಗಿದ್ದ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಈ ವರ್ಷದ ಕೊರೋನಾ ಅಲೆಯಲ್ಲಿ ಇಡೀ ರಾಜ್ಯಕ್ಕೆ ಜೀವರಕ್ಷಕನಾಗಿ ನಿಂತಿದೆ. ಅದು ಸಹ ಕೊರೊನಾ ರೋಗಿಗಳಿಗೆ ರಾಮಬಾಣವಾಗಿರುವ ರೆಮಿಡಿಸಿವಿರ್‌ ಇಂಜೆಕ್ಷನ್‌ ತಯಾರಿಸುವ ಮೂಲಕ. ಹೌದು ಕೊರೋನಾ ಕೇಸ್‌ಗಳು ತನಿಖೆ ಲಾಕ್‌ಡೌನ್‌ ಎಲ್ಲವನ್ನು ಮುಗಿಸಿ ಮರು ಸ್ಥಾಪನೆಯಾದ ಜುಬಿಲಿಯಂಟ್‌ ಕಾರ್ಖಾನೆ ಈ ವರ್ಷದ ಆರಂಭದಲ್ಲೆ ರೆಮಿಡಿಸಿವಿರ್‌ ಔಷಧಿ ತಯಾರಿಸಲು ಆರಂಭಿಸಿತ್ತು.

ಈ ಮೊದಲೆ ಇದ್ದ ಕಚ್ಛಾ ಪದರ್ಥಗಳನ್ನ ಬಳಸಿ ಅತಿ ಹೆಚ್ಚು ಸಂಖ್ಯೆಯಲ್ಲಿ ರೆಮಿಡಿಸಿವಿರ್ ಉತ್ಪಾದನೆ ಮಾಡಿತ್ತು.  ಜುಬಿಲಿಯಂಟ್ ಕಾರ್ಖಾನೆಯೇ ತಿಳಿಸಿದಂತೆ 70ಕ್ಕು ಹೆಚ್ಚು ದೇಶಗಳಿಗೆ ಔಷಧಿ ಕಳುಹಿಸುವ ಜುಬಿಲಿಯಂಟ್ ಕಾರ್ಖಾನೆ, ಭಾರತದಲ್ಲು ತನ್ನ ಒಡಂಬಡಿಯ ಕಂಪನಿಗಳಿಗೆ ರೆಮಿಡಿಸಿವಿರ್‌ ಮಾರಟ ಮಾಡಿತ್ತು.

ಇದನ್ನೂ ಓದಿ: ಚುನಾವಣಾ ಫಲಿತಾಂಶಗಳಲ್ಲಿ ಸೋಲು, ಕೋವಿಡ್ ನಿರ್ವಹಣೆಯಲ್ಲೂ ವೈಫಲ್ಯ; ಆರ್​ಎಸ್​ಎಸ್​-ಬಿಜೆಪಿಯಲ್ಲಿ ಮನೆಮಾಡಿದ ಆತಂಕ

ಆದರೆ, ಇತ್ತಿಚಿಗೆ ರಾಜ್ಯ ಹಾಗೂ ದೇಶಲ್ಲಿ ರೆಮಿಡಿಸಿವಿರ್ ಗೆ ಬೇಡಿಕೆ ಹೆಚ್ಚಾಗಿದೆ. ಅದಕ್ಕಾಗಿ ರೆಮಿಡಿಸಿವಿರ್‌ ಔಷಧಿಯನ್ನ  ಹೆಚ್ಚಾಗಿ ಉತ್ಪಾದಿಸಿ ಕೊಡಿ ಅಂತ ಇಂದು ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಹಾಗೂ ಸಂಸದ ಪ್ರತಾಪ್‌ಸಿಂಹ ನೇತೃತ್ವದಲ್ಲಿ ನಂಜನಗೂಡಿನ ಶಾಸಕ ಹರ್ಷವರ್ಧನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್‌ ಸೇರಿ ಜುಬಿಲಿಯಂಟ್‌ ಕಾರ್ಖಾನೆ ಮುಖ್ಯಸ್ಥರನ್ನ ಮನವಿ ಮಾಡಿದ್ದಾರೆ.
Youtube Video

ಕಾರ್ಖಾನೆಯಲ್ಲಿ ಆದ್ಯತೆ ಮೇರೆಗೆ ರೆಮಿಡಿಸಿವಿರ್ ಉತ್ಪಾದನೆ ಮಾಡುವುದಾಗಿ ಹೇಳಿರುವ ಮುಖ್ಯಸ್ಥರು, ಹೆಚ್ಚಿನ ಸಂಖ್ಯೆಯ ಔಷಧಿಯನ್ನ ಸರ್ಕಾರಕ್ಕೆ ನೀಡುವ ಭರವಸೆ ನೀಡಿದೆ. ಅದೇನೆ ಇದ್ದರೂ ಇಡೀ ದೇಶವೇ ಕೊರೋನಾ ಅಲೆಗೆ ಬೆಚ್ಚಿ ಬಿದ್ದಿದ್ದರೂ, ತನ್ನಲ್ಲೆ ಉದ್ಬವವಾಗಿದ್ದ ಅಲೆಯಿಂದ ಈಜಿ ಬಂದು ಇಡೀ ರಾಜ್ಯವನ್ನೆ ಜೀವನಾಡಿಯಂತೆ ಕಾಪಾಡುತ್ತಿರುವ ಜುಬಿಲಿಯಂಟ್ ಕಾರ್ಖಾನೆಯ ಸಾಧನೆಯನ್ನು ಮೆಚ್ಚಲೇ ಬೇಕಿದೆ. ಈ ಕಾರ್ಖಾನೆ ಇನ್ನಷ್ಟು ಔಷಧಿ ತಯಾರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗಲಿ ಅನ್ನೋದೆ ಎಲ್ಲರ ಆಶಯ.
Published by: MAshok Kumar
First published: May 10, 2021, 6:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories