• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ರಾಜ್ಯದಲ್ಲಿ ಕೊರೋನಾ ಲಾಕ್​ಡೌನ್  ಜಾರಿ; ಅದೃಷ್ಟದ ಲೆಕ್ಕಾಚಾರದಲ್ಲಿ ಅಡಿಕೆ ಬೆಳೆಗಾರರು!

ರಾಜ್ಯದಲ್ಲಿ ಕೊರೋನಾ ಲಾಕ್​ಡೌನ್  ಜಾರಿ; ಅದೃಷ್ಟದ ಲೆಕ್ಕಾಚಾರದಲ್ಲಿ ಅಡಿಕೆ ಬೆಳೆಗಾರರು!

ಅಡಿಕೆ

ಅಡಿಕೆ

ಅಡಿಕೆ ಬೆಳೆಗಾರನ ಈ ವರ್ತನೆ ಈಗಾಗಲೇ ಮಾರುಕಟ್ಟೆಯಲ್ಲಿ ಹಳೆ ಅಡಿಕೆಯ ಅಭಾವಕ್ಕೆ ಕಾರಣವಾಗಿದೆ. ಬೆಳೆಗಾರ ಅಡಿಕೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡದೇ ಅಡಿಕೆ ಮಾರುಕಟ್ಟೆಯೂ ತಲ್ಲಣಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ. ಇದೇ ರೀತಿಯ ಅಭಾವ ಸೃಷ್ಟಿಯಾದಲ್ಲಿ, ಅಡಿಕೆಯನ್ನು ಹೆಚ್ಚಾಗಿ ಉಪಯೋಗಿಸುವ ಉತ್ತರ ಭಾರತದ ಜನ ಅಡಿಕೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. 

ಮುಂದೆ ಓದಿ ...
  • Share this:

ಪುತ್ತೂರು; ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸರಕಾರ 14 ದಿನಗಳ ಕಾಲ ಅಘೋಷಿತ ಲಾಕ್ ಡೌನ್ ಘೋಷಿಸಿದೆ. ಲಾಕ್ ಡೌನ್ ಘೋಷಣೆಯ ಕಾರಣಕ್ಕಾಗಿ ಒಂದು ವರ್ಗ ಮತ್ತೆ ಬದುಕು ಕಟ್ಟಲು ಪರದಾಡಬೇಕಾದ ಸ್ಥಿತಿಯೂ ನಿರ್ಮಾಣಗೊಳ್ಳಲಿದೆ. ಆದರೆ ಸರಕಾರದ ಲಾಕ್ ಡೌನ್ ನಲ್ಲಿ ಅದೃಷ್ಟದ ಬೇಟೆಗೆ ಇಳಿದಿದ್ದಾರೆ ಕರಾವಳಿ ಭಾಗದ ಅಡಿಕೆ ಬೆಳೆಗಾರರು. ಕಳೆದ ಬಾರಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಾದಾಗ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏಕಾಏಕಿ ಏರಿಕೆಯನ್ನು ಕಂಡಿತ್ತು. ಇದೇ ಏರಿಕೆ ಈ ಬಾರಿಯೂ ಕಾಣಲಿದೆಯೇ ಎನ್ನುವ ಲೆಕ್ಕಾಚಾರದಲ್ಲಿ ಅಡಿಕೆ ಬೆಳೆಗಾರರಿದ್ದು, ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಹಿಂದೇಟು ಹಾಕುತ್ತಿದ್ದಾರೆ.


ಕೊರೋನಾ ಮಹಾಮಾರಿ ದೇಶದಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದು, ಇದಕ್ಕೆ ಸಿಲುಕಿದ ಜನರ ಬದುಕೇ ದುಸ್ತರವಾಗುತ್ತಿದೆ. ರಾಜ್ಯದಲ್ಲೂ ಕೊರೋನಾ ಎರಡನೇ ಅಲೆ ಸಾಕಷ್ಟು ಜೀವ ಹಾನಿ ಮಾಡಿದ್ದು, ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಮತ್ತೆ ಕೊರೋನಾ ಲಾಕ್ ಡೌನ್ ಜಾರಿಗೆ ತರಲಾಗಿದೆ. 14 ದಿನಗಳ ಕಾಲ ಈ ಲಾಕ್ ಡೌನ್ ನಿಂದಾಗಿ ಹಲವು ಕುಟುಂಬಗಳು ಮತ್ತೆ ಸಮಸ್ಯೆಗಳನ್ನು ಎದುರಿಸಲಿವೆ. ಆದರೆ ಕರಾವಳಿಯ ಅಡಿಕೆ ಬೆಳೆಗಾರ ಮಾತ್ರ ಲಾಕ್ ಡೌನ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾನೆ.


ಕಳೆದ ಬಾರಿ ದೇಶದಾದ್ಯಂತ ಜಾರಿಯಾದ ಲಾಕ್ ಡೌನ್ ನಿಂದಾಗಿ ಅಡಿಕೆ ಬೆಲೆಯಲ್ಲಿ ಹೆಚ್ಚಿನ ಜಿಗಿತ ಕಂಡಿದ್ದು, ಬೆಳೆಗಾರರು ಭಾರೀ ಲಾಭವನ್ನು ಕಂಡಿದ್ದರು. ಕಳೆದ ವರ್ಷ ಲಾಕ್ ಡೌನ್ ಜಾರಿಗೆ ಮೊದಲು ಅಡಿಕೆ ಮಾರುಕಟ್ಟೆಯಲ್ಲಿ 250 ರೂಪಾಯಿಗೂ ಕಡಿಮೆ ಬೆಲೆ ನಿಗದಿಯಾಗಿತ್ತು. ಆದರೆ ಲಾಕ್ ಡೌನ್ ಜಾರಿಯಾದ ಬಳಿಕ ಅಡಿಕೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಂಡು ಬಂದಿತು.  ಈ ಕಾರಣಕ್ಕಾಗಿ 250 ರೂಪಾಯಿಯ ಆಸುಪಾಸಿನಲ್ಲಿದ್ದ ಅಡಿಕೆ ಧಾರಣೆ 400, 500 ರೂಪಾಯಿಗಳ ಆಸುಪಾಸಿಗೆ ಬಂದು ತಲುಪಿತು. ಉತ್ತರ ಭಾರತದಿಂದ ಅಡಿಕೆಗೆ ಹೆಚ್ಚಿನ ಬೇಡಿಕೆ ಬಂದ ಹಿನ್ನಲೆಯಲ್ಲಿ ಅಡಿಕೆಯ ಧಾರಣೆಯಲ್ಲಿ ದಾಖಲೆಯ ಏರಿಕೆಯೂ ಕಂಡು ಬಂದಿತ್ತು. ಇದೀಗ ರಾಜ್ಯದಲ್ಲಿ ಮತ್ತೆ ಕೊರೋನಾ ಲಾಕ್ ಡೌನ್ ಜಾರಿಗೆ ಬಂದಿದ್ದು, ಅಡಿಕೆ ಬೆಳೆಗಾರ ತಮ್ಮ ಬಳಿಯಿರುವ ಅಡಿಕೆಯನ್ನು ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾನೆ. ಕಳೆದ ವರ್ಷದಂತೆ ಈ ವರ್ಷವೂ ಅದೃಷ್ಟದ ಬೇಟೆಯಲ್ಲಿ ನಿರತನಾಗಿದ್ದು, ಈ ನಡೆ ಮಾರುಕಟ್ಟೆಯಲ್ಲಿ ಅಡಿಕೆಯ ಅಭಾವ ಸೃಷ್ಟಿಯಾಗುವ ಸಾಧ್ಯತೆಗೂ ಕಾರಣವಾಗಲಿದ


ಇದನ್ನು ಓದಿ: ಕೊಪ್ಪಳದ ಒಂದೇ ಗ್ರಾಮದಲ್ಲಿ 80 ಜನರಿಗೆ ಕೊರೋನಾ ಪಾಸಿಟಿವ್!; ನಗರ ಪ್ರದೇಶಗಳಿಂದ ಮಹಾವಲಸೆ!


ಅಡಿಕೆಯನ್ನು ಅತ್ಯಂತ ಹೆಚ್ಚು ಖರೀದಿ ಮಾಡುವ ಹಾಗೂ ದೇಶದ ವಿವಿಧ ಭಾಗಗಳಿಗೆ ಅಡಿಕೆ ರಫ್ತು ಮಾಡುವ ಅಡಿಕೆ ಬೆಳೆಗಾರರ ಸಹಕಾರಿ ಸಂಘ ಕ್ಯಾಂಪ್ಕೋದಲ್ಲಿ ಈ ಬದಲಾವಣೆಗಳು ಕಂಡು ಬಂದಿದೆ. ಈ ಬಾರಿಯ ಅಡಿಕೆ ಕೊಯ್ಲು ಇದೀಗ ಮಾರಾಟಕ್ಕೆ ಸಿದ್ಧವಾಗಿದ್ದು, ಕೆಲವರು ಈಗಾಗಲೇ ಮಾರಾಟ ಮಾಡಿದ್ದಾರೆ. ಆದರೆ ಇದೀಗ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗುತ್ತದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆಯೇ ಅಡಿಕೆಯನ್ನು ಮಾರುಕಟ್ಟೆಗೆ ತರುವುದನ್ನೇ ಬೆಳೆಗಾರರು ನಿಲ್ಲಿಸಿದ್ದಾರೆ. ಈ ಬೆಳವಣಿಗೆಗೆ ಮುಖ್ಯ ಕಾರಣ ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಾದ ಅಡಿಕೆ ಧಾರಣೆಯ ಏರಿಕೆಯೇ ಕಾರಣವಾಗಿದೆ.


ಅಡಿಕೆ ಬೆಳೆಗಾರನ ಈ ವರ್ತನೆ ಈಗಾಗಲೇ ಮಾರುಕಟ್ಟೆಯಲ್ಲಿ ಹಳೆ ಅಡಿಕೆಯ ಅಭಾವಕ್ಕೆ ಕಾರಣವಾಗಿದೆ. ಬೆಳೆಗಾರ ಅಡಿಕೆಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡದೇ ಅಡಿಕೆ ಮಾರುಕಟ್ಟೆಯೂ ತಲ್ಲಣಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ. ಇದೇ ರೀತಿಯ ಅಭಾವ ಸೃಷ್ಟಿಯಾದಲ್ಲಿ, ಅಡಿಕೆಯನ್ನು ಹೆಚ್ಚಾಗಿ ಉಪಯೋಗಿಸುವ ಉತ್ತರ ಭಾರತದ ಜನ ಅಡಿಕೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.

Published by:HR Ramesh
First published: