ರಾಯಚೂರು: ಓರ್ವ ಸೋಂಕಿತಳಿಂದ 30 ಜನರಿಗೆ ಸೋಂಕು, ಜಿಲ್ಲಾಡಳಿತಕ್ಕೆ ಹೊಸ ತಲೆನೋವು

ಜೂ.20 ರಂದು ಮಸ್ಕಿ ತಾಲೂಕಿನ‌ 35 ವರ್ಷದ ಮಹಿಳೆಗೆ ಸೋಂಕು ದೃಡ ಪಟ್ಟಿದೆ. ಈ‌ ಮಹಿಳೆ ಕೊಪ್ಪಳ ಜಿಲ್ಲೆಯ ಮರಳಿಯಲ್ಲಿಯ ಸಂಬಂಧಿಕರ ಮದುವೆಗೆ ಹೋಗಿ ಬಂದಿದ್ದಳು ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡಿದ್ದರು.

news18-kannada
Updated:July 5, 2020, 3:40 PM IST
ರಾಯಚೂರು: ಓರ್ವ ಸೋಂಕಿತಳಿಂದ 30 ಜನರಿಗೆ ಸೋಂಕು, ಜಿಲ್ಲಾಡಳಿತಕ್ಕೆ ಹೊಸ ತಲೆನೋವು
ಸಾಂದರ್ಭಿಕ ಚಿತ್ರ.
  • Share this:
ರಾಯಚೂರು (ಜುಲೈ 05): ರಾಜ್ಯದಲ್ಲಿ ಕೊರೋನಾ ಸೋಂಕಿತರು ಮಾರ್ಚ್‌ ತಿಂಗಳಿನಿಂದ ಪತ್ತೆಯಾಗುತ್ತಿದ್ದರೂ ರಾಯಚೂರು ಜಿಲ್ಲೆಗೆ ಸೋಂಕು ಎಂಟ್ರಿ ಕೊಟ್ಟಿದ್ದು ಮೇ 17 ರ ನಂತರವೇ. ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಆಗಮಿಸುತ್ತಿದ್ದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಯಿತು. ಆದರೆ, ಇದೀಗ ಜಿಲ್ಲೆಯಲ್ಲಿ ಓರ್ವ ಮಹಿಳೆಯಿಂದ ಬರೋಬ್ಬರಿ 30 ಜನರಿಗೆ ಸೋಂಕು ಹರಡಿರುವುದು ಇಡೀ ಜಿಲ್ಲಾಡಳಿತಕ್ಕೆ ತಲೆನೋವಿನ ಸಂಗತಿಯಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಮೇ 17 ರಿಂದ ಜೂ.18 ರವರೆಗೆ ನಿತ್ಯ 2 ರಿಂದ 88 ರವರೆಗೂ ಸೋಂಕು ತಗುಲಿರುವುದು ದೃಡವಾಗಿತ್ತು, ಜೂ.18 ರ ನಂತರ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ 0-15 ರೊಳಗೆ ಇದ್ದ ಸಂಖ್ಯೆ ಶನಿವಾರ ಒಂದೇ ದಿನ 41 ಜನರಿಗೆ ಸೋಂಕು ದೃಡಪಟ್ಟಿದೆ. 41 ಜನರಲ್ಲಿ ಒಬ್ಬ ಸೋಂಕಿತ ಮಹಿಳೆಯಿಂದ 26 ಜನರಿಗೆ ಸೋಂಕು ಬಂದಿರುವುದು ದೃಡಪಟ್ಟಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಒಟ್ಟು 559 ಸೋಂಕಿತರು ಪತ್ತೆಯಾಗಿದ್ದು ಈಗ 131 ಸಕ್ರಿಯ ಪ್ರಕರಣಗಳಿವೆ ಎನ್ನಲಾಗುತ್ತಿದೆ.

ಜೂ.20 ರಂದು ಮಸ್ಕಿ ತಾಲೂಕಿನ‌ 35 ವರ್ಷದ ಮಹಿಳೆಗೆ ಸೋಂಕು ದೃಡ ಪಟ್ಟಿದೆ. ಈ‌ ಮಹಿಳೆ ಕೊಪ್ಪಳ ಜಿಲ್ಲೆಯ ಮರಳಿಯಲ್ಲಿಯ ಸಂಬಂಧಿಕರ ಮದುವೆಗೆ ಹೋಗಿ ಬಂದಿದ್ದಳು ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅನಾರೋಗ್ಯದ ಮಧ್ಯೆಯೂ ಸಿಂಧನೂರಿನಲ್ಲಿ ಪ್ರಸಿದ್ದ ಬಟ್ಟೆ ಅಂಗಡಿಯಾದ ಅಮರದೀಪ ಕ್ಲಾತ್ ಸೆಂಟರ್ ಬಟ್ಟೆ ಖರೀದಿಸಿದ್ದಳು.

ಆಕೆಗೆ ಸೋಂಕು ದೃಡಪಟ್ಟ ನಂತರ ಐಸೋಲೆಷನ್ ಮಾಡಲಾಗಿದೆ. ಆಕೆಯ ಸಂಪರ್ಕಿತರ ಪತ್ತೆ ಮಾಡಿ ಸ್ವ್ಯಾಬ್ ತೆಗೆಯಲಾಗಿದೆ. ಅಮರದೀಪ ಕ್ಲಾತ್ ಸೆಂಟರ್ ಒಂದರಲ್ಲಿಯೇ ಒಟ್ಟು 15 ಜನರಿಗೆ ಸೋಂಕು ತಗುಲಿದೆ. ಇನ್ನೂ ಖಾಸಗಿ ಆಸ್ಪತ್ರೆಯ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಇದೇ ಮಹಿಳೆಯಿಂದ ಸಾಲಗುಂದಾ, ಗೊರೇಬಾಳದಲ್ಲಿಯೂ ಸೋಂಕು ತಗುಲಿದೆ. ಈ ಮಹಿಳೆಯ ಸಂಪರ್ಕದಿಂದಾಗಿ‌ ಮಾನವಿ ತಾಲೂಕಿನಲ್ಲಿ ಜೂ.27 ರಂದು 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಇದನ್ನೂ ಓದಿ : Coronavirus Updates: ಭಾರತದಲ್ಲಿ ಕೋವಿಡ್​-19 ಕಾವು: ಒಂದೇ ದಿನದಲ್ಲಿ 24 ಸಾವಿರ ಕೇಸ್​​ ಪತ್ತೆ, 6,73,165 ಸೋಂಕಿತರು

ಈ ಮಹಿಳೆಯಿಂದ ನಿನ್ನೆ ಮಾನವಿಯಲ್ಲಿ ಒಂದೇ ಕುಟುಂಬದ 8 ಜನರಿಗೆ ಹಾಗೂ ಉಮಳಿ ಹೊಸೂರು ಸಂಗಾಪುರದಲ್ಲಿ ಒಬ್ಬೊಬ್ಬರಿಗೆ ಸೋಂಕು ದೃಡಪಟ್ಟಿದೆ. ಈಗ ಹೊಸ ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರ ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಓರ್ವ ಮಹಿಳೆಯಿಂದ ಈಗ ಸೋಂಕು ಹರಡುತ್ತಿರುವದರಿಂದ ಜಿಲ್ಲೆಯ ಜನತೆ ಹಾಗು ಜಿಲ್ಲಾಡಳಿತ ಆತಂಕಕ್ಕೊಳಗಾಗಿದೆ. ಹೀಗಾಗಿ ಜಿಲ್ಲಾಡಳಿತ ಆದಷ್ಟು ಶೀಘ್ರದಲ್ಲಿ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರನ್ನು ಪತ್ತೆ ಸ್ವ್ಯಾಬ್ ಟೆಸ್ಟ್ ಮಾಡಿಸಬೇಕಾಗಿದೆ ಹಾಗು ಸೋಂಕು ಹರಡುವುದನ್ನು ತಡೆಗಟ್ಟಬೇಕಾಗಿದೆ.
Published by: MAshok Kumar
First published: July 5, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading