HOME » NEWS » District » CORONA INFECTED WOMEN GIVES BIRTH TO CHILD IN CHIKKAMAGALURU GNR

ಚಿಕ್ಕಮಗಳೂರು: ತಾಯಿ ತೀರಿದ ದಿನವೇ ಹೆಣ್ಣು ಮಗಳಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಗರ್ಭಿಣಿ

ತಾಯಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾದ ಬಳಿಕ ಅಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಈ ಮಧ್ಯೆ ತುಂಬು ಗರ್ಭಿಣಿ ಅಮ್ಮನನ್ನ ಕಳೆದುಕೊಂಡ ನೋವಿನ ಮಧ್ಯೆಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

news18-kannada
Updated:July 17, 2020, 12:37 PM IST
ಚಿಕ್ಕಮಗಳೂರು: ತಾಯಿ ತೀರಿದ ದಿನವೇ ಹೆಣ್ಣು ಮಗಳಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಗರ್ಭಿಣಿ
ಸಾಂದರ್ಭಿಕ ಚಿತ್ರ.
  • Share this:
ಚಿಕ್ಕಮಗಳೂರು(ಜು.17): ಕೊರೋನಾ ಸೋಂಕಿತ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಚಿಕ್ಕಮಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ನಡೆದಿದೆ. ಇಂದು ದುರದೃಷ್ಟವಶಾತ್ ಸೋಂಕಿತ ಗರ್ಭಿಣಿ ತಾಯಿ ಕೊರೋನಾ ಸೋಂಕಿನಿಂದಲೇ ತೀರಿಕೊಂಡಿದ್ದರು. ತನ್ನ ತಾಯಿ ತೀರಿದ ದಿನವೇ ಈಕೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ತಾಯಿ ತನ್ನ ಹೊಟ್ಟೆಯಲ್ಲೇ ಹುಟ್ಟಿದ್ದಾಳೆಂದು ಗರ್ಭಿಣಿ ಭಾವಿಸಿದ್ದಾಳೆ. 

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ 23 ವರ್ಷದ ತುಂಬು ಗರ್ಭಿಣಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ನಿನ್ನೆ ಚಿಕ್ಕಮಗಳೂರಿನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗರ್ಭಿಣಿಯ ತಾಯಿಗೆ ಶೀತ, ಕೆಮ್ಮು, ಜ್ವರ ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇವರ ತಾಯಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾದ ಬಳಿಕ ಅಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಈ ಮಧ್ಯೆ ತುಂಬು ಗರ್ಭಿಣಿ ಅಮ್ಮನನ್ನ ಕಳೆದುಕೊಂಡ ನೋವಿನ ಮಧ್ಯೆಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ವೈದ್ಯರು ಇಬ್ಬರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿರೋ ತುಂಬು ಗರ್ಭಿಣಿ ನನ್ನ ಅಮ್ಮ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಾರೆ ಎಂದು ಭಾವಿಸಿದ್ದಾರೆ.

ಇನ್ನೊಂದೆಡೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ನಾಲ್ಕೇ ದಿನದಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಗುರುವಾರವೂ ಕೋವಿಡ್-19 ವೈರಸ್​ಗೆ ಒಂದು ಸಾವು ಸಂಭವಿಸಿದ್ದು, 30 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೀರೂರಿನ 63 ವರ್ಷದ ವೃದ್ಧೆ 3 ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಸಾವಪ್ಪಿದ್ದಾರೆ. ಶೀತ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೃದ್ಧೆ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕು ದೃಢಪಟ್ಟಿತ್ತು.

ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆ, ನೇಕಾರ ಬೀದಿ, ಕೆಂಪನಹಳ್ಳಿ, ಮುಗುಳವಳ್ಳಿ, ಲಕ್ಯಾ, ದರ್ಜಿ ಬೀದಿ, ಕಳಸಾಪುರ ಸೇರಿದಂತೆ ತಾಲೂಕಿನಲ್ಲಿ 14, ಮೂಡಿಗೆರೆ-2, ತರೀಕೆರೆ ತಾಲೂಕಿನ ಬಾವಿಕೆರೆ, ಕರಕುಚ್ಚಿ ಕಾಲೊನಿಯಲ್ಲಿ 3, ಕೊಪ್ಪ ತಾಲೂಕಿನ ಕೆಸವೆ ರಸ್ತೆ, ಸುಭಾಷ್ ರಸ್ತೆ, ಜಯಪುರದಲ್ಲಿ 3, ಕಡೂರು ತಾಲೂಕಿನ ಮೊದಲಿಯಾರ್ ಕಾಲೊನಿ, ಬೀರೂರಿನ ಹಳೆಪೇಟೆಯಲ್ಲಿ 7, ಅಜ್ಜಂಪುರದ ಶಾರದಾ ವಿಲಾಸ ರಸ್ತೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: PU Lecturers Recruitment: ಪಿಯು ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಗ್ರೀನ್​ ಸಿಗ್ನಲ್​​​: ಕೌನ್ಸೆಲಿಂಗ್​​​ ದಿನಾಂಕ ನಾಳೆ ಪ್ರಕಟ

ಜಿಲ್ಲೆಯಲ್ಲಿ ಇದುವರೆಗೆ 198 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 123 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 68 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ನಗರದ ಮಾಜಿ ಸದಸ್ಯ ಎಚ್.ಡಿ.ತಮ್ಮಯ್ಯ, ಸಿಡಿಎ ಅಧ್ಯಕ್ಷ ಆನಂದ್ ಸೇರಿದಂತೆ 22 ಮಂದಿ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Published by: Ganesh Nachikethu
First published: July 17, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories