• Home
  • »
  • News
  • »
  • district
  • »
  • ಕೊರೋನಾ ಸೋಂಕಿತ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡಿಸಿದ ವೈದ್ಯ!

ಕೊರೋನಾ ಸೋಂಕಿತ ಸಿಬ್ಬಂದಿಯಿಂದಲೇ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡಿಸಿದ ವೈದ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸ್ಪತ್ರೆಯ ವೈದ್ಯಾಧಿಕಾರಿ ಚೇತನ್ ಅವರ ಗಮನಕ್ಕೆ ತಂದಾಗ ಅವರು ವೈದ್ಯ ಜೀವನ್ ಅವರಿಗೆ ಬುದ್ಧಿ ಹೇಳಿ ಪಾಸಿಟಿವ್ ಇದ್ದರೂ ಬಂದು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಆಗಲೂ ಅವರಿಗೆ ಪಾಸಿಟಿವ್ ಇರೋದು ದೃಢಪಟ್ಟಿದೆ. ಹೀಗಾಗಿ ಕೂಡಲೇ ಆ ಸಿಬ್ಬಂದಿಯನ್ನು ಕುಶಾಲನಗರದ ಕೂಡಿಗೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿದ್ದಾರೆ.

ಮುಂದೆ ಓದಿ ...
  • Share this:

ಕೊಡಗು: ಟೆಕ್ನಿಷಿಯನ್ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಇದ್ದರೂ ಗುಣಮುಖವಾಗುವ ಮೊದಲೇ ಅದೇ ಸಿಬ್ಬಂದಿಯಿಂದ ವೈದ್ಯರು ಕರ್ತವ್ಯ ಮಾಡಿಸಿ ಎಡವಟ್ಟು ಮಾಡಿದ್ದಾರೆ. ಆದರೆ ಇದನ್ನು ವಿಚಾರಿಸಲು ಹೋದ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರ ಮೇಲೆ ಆ ವೈದ್ಯ ಕರ್ತವ್ಯಕ್ಕೆ ಅಡ್ಡಿ ಎಂದು ಪೊಲೀಸರಿಗೆ ದೂರು ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪದ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಆದರೆ ಅವರು ಕೋವಿಡ್ ಸೋಂಕಿನಿಂದ ಗುಣಮುಖರಾಗುವ ಮೊದಲೇ ಸಿಬ್ಬಂದಿ ಕೊರತೆ ಇದೆ ಎಂದು ಅವರಿಂದಲೇ ಕೆಲಸ ಮಾಡಿಸಿದ್ದಾರೆ. ಈ ವಿಷಯ ಸುಂಟಿಕೊಪ್ಪದ ಆಸ್ಪತ್ರೆಗೆ ಬರುವ ಕೆಲವರಿಗೆ ಗೊತ್ತಾಗುತ್ತಿದ್ದಂತೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ಈ ವಿಷಯವನ್ನು ತಂದಿದ್ದಾರೆ. ಹೋಬಳಿ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಆಗಿರುವ ಪಂಚಾಯಿತಿ ಸದಸ್ಯರು ಈ ವಿಷಯವನ್ನು ಆಸ್ಪತ್ರೆಯ ವೈದ್ಯರಾಗಿದ್ದ ಜೀವನ್ ಎಂಬುವರರನ್ನು ವಿಚಾರಿಸಿದ್ದಾರೆ. ಅಷ್ಟೇ ವೈದ್ಯ ಜೀವನ್ ಅವರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.


ಸುಂಟಿಕೊಪ್ಪ ಪೊಲೀಸರು ಟಾಸ್ಕ್ ಸದಸ್ಯರೂ ಆಗಿರುವ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರನ್ನು ಠಾಣೆಗೆ ಕರೆಸಿ ಮೂರ್ನಾಲ್ಕು ಗಂಟೆಗಳ ಕಾಲ ಕೂರಿಸಿದ್ದಾರೆ. ಜೊತೆಗೆ ಪಂಚಾಯಿತಿ ಸದಸ್ಯರನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಪಂಚಾಯಿತಿ ಸದಸ್ಯರೇ ದೂರಿದ್ದಾರೆ. ಬಳಿಕ ಪಂಚಾಯಿತಿ ಆಡಳಿತ ಮಂಡಳಿ ಸಭೆ ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಿ ಪಾಸಿಟಿವ್ ಇರುವ ಸಿಬ್ಬಂದಿಯಿಂದ ಕರ್ತವ್ಯ ಮಾಡಿಸಿದ ವೈದ್ಯರು ಮತ್ತು ಪಾಸಿಟಿವ್ ಬಂದಿದ್ದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಂಚಾಯಿತಿ ಆಡಳಿತ ಮಂಡಳಿಯೇ ದೂರು ನೀಡಿದ್ದರೂ ಠಾಣಾಧಿಕಾರಿ ಪುನೀತ್ ದೂರು ಸ್ವೀಕರಿಸುವ ಬದಲು ರಾಜಿ ಮಾಡಿ ಕಳುಹಿಸಿದ್ದಾರೆ. ಅಲ್ಲದೇ, ನೀವು ಆಸ್ಪತ್ರೆ ಕಡೆಗೂ ಹೋಗಬಾರದು, ಠಾಣೆ ಕಡೆಗೂ ಬರಬಾರದು ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎನ್ನೋದು ಪಂಚಾಯಿತಿ ಉಪಾಧ್ಯಕ್ಷರಾದ ಪ್ರಸಾದ್ ಕುಟ್ಟಪ್ಪ ಅವರ ಗಂಭೀರ ಆರೋಪವಾಗಿದೆ.


ಇದನ್ನು ಓದಿ: ಇಷ್ಟು ದೊಡ್ಡ ರಾಜ್ಯಕ್ಕೆ ಕೇವಲ 1200 ಕೋಟಿ ಪರಿಹಾರ ಸಾಕೇ?; ವಿಶೇಷ ಪ್ಯಾಕೇಜ್ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ


ಬಳಿಕ ಆಸ್ಪತ್ರೆಯ ವೈದ್ಯಾಧಿಕಾರಿ ಚೇತನ್ ಅವರ ಗಮನಕ್ಕೆ ತಂದಾಗ ಅವರು ವೈದ್ಯ ಜೀವನ್ ಅವರಿಗೆ ಬುದ್ಧಿ ಹೇಳಿ ಪಾಸಿಟಿವ್ ಇದ್ದರೂ ಬಂದು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಆಗಲೂ ಅವರಿಗೆ ಪಾಸಿಟಿವ್ ಇರೋದು ದೃಢಪಟ್ಟಿದೆ. ಹೀಗಾಗಿ ಕೂಡಲೇ ಆ ಸಿಬ್ಬಂದಿಯನ್ನು ಕುಶಾಲನಗರದ ಕೂಡಿಗೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿದ್ದಾರೆ. ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಇದ್ದರೂ ಕರ್ತವ್ಯ ಮಾಡಿಸಲಾಗುತ್ತಿತ್ತು. ಬಳಿಕ ನಾವೆಲ್ಲರೂ ಹೋಗಿ ಪರಿಶೀಲಿಸಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಿರುವುದಾಗಿ ಪಂಚಾಯಿತಿ ಪಿಡಿಓ ವೇಣುಗೋಪಾಲ್ ಹೇಳಿದ್ದಾರೆ.


ಒಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದ ಆರೋಗ್ಯ ಇಲಾಖೆ ಸಿಬ್ಬಂದಿಯೇ ಕೋವಿಡ್ ಪಾಸಿಟಿವ್ ಇದ್ದರೂ ನಿಯಮ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಸಾರ್ವಜನಿಕರು ಆಕ್ರೋಶಗೊಳ್ಳುವಂತೆ ಮಾಡಿದೆ.

Published by:HR Ramesh
First published: