ಕೊರೋನಾತಂಕ: ಚಾಮರಾಜನಗರ ಜಿಲ್ಲೆಯಲ್ಲಿ ಶಾಲಾ ದಾಖಲಾತಿ ಕುಸಿತ

ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳಿಗಿಂತ  ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಕುಸಿದಿರುವುದು ಕಂಡು ಬಂದಿದೆ  ಎಂದು  ಚಾಮರಾಜನಗರ ಡಿಡಿಪಿಐ. ಜವರೇಗೌಡ ತಿಳಿಸಿದ್ದಾರೆ.

news18-kannada
Updated:October 22, 2020, 4:08 PM IST
ಕೊರೋನಾತಂಕ: ಚಾಮರಾಜನಗರ ಜಿಲ್ಲೆಯಲ್ಲಿ ಶಾಲಾ ದಾಖಲಾತಿ ಕುಸಿತ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ಅಕ್ಟೋಬರ್22) : ಕೊರೋನಾ ಭೀತಿಯಿಂದಾಗಿ ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ, ಹೇಗೆ ಆರಂಭಿಸಬೇಕು ಎಂಬ ಗೊಂದಲ ಮುಂದುವರಿದಿದೆ. ಈ ನಡುವೆ  ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಳೆದ ಬಾರಿಗಿಂತ ಈ ವರ್ಷ ದಾಖಲಾತಿ ಪ್ರಮಾಣ ಕುಸಿದಿದೆ. ಕೊರೋನಾ ಭೀತಿಯಿಂದ ಚಾಮರಾಜನಗರ ಜಿಲ್ಲೆಯೊಂದರಲ್ಲೇ ಈ ಬಾರಿ 4605 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.  ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿದೆ. ದಿನೇದಿನೆ ಏರುತ್ತಿರುವ ಕೊರೋನಾ  ಈ ಬಾರಿ ಶಾಲಾ ದಾಖಲಾತಿಯ ಮೇಲು ಪರಿಣಾಮ ಬೀರಿದೆ. ರಾಜ್ಯ ಸರ್ಕಾರ  ಶಾಲೆಗಳನ್ನು ಆರಂಭಿಸುವ ಬಗ್ಗೆ ಇದುವರೆಗು ಸ್ಪಷ್ಟ ನಿರ್ದಾರ ಕೈಗೊಂಡಿಲ್ಲದಿದ್ದರು  ಸೆಪ್ಟೆಂಬರ್ 30 ರೊಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಮುಗಿಸಬೇಕು ಎಂದು ಆದೇಶ ಹೊರಡಿಸಿತ್ತು. ನಂತರ ಈ ದಿನಾಂಕವನ್ನು ಅಕ್ಟೋಬರ್ 16 ರವರೆಗು ವಿಸ್ತರಿಸಿತ್ತು. ಇದೀಗ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಳೆದ ಬಾರಿಗಿಂತ ಈ ಬಾರಿ ದಾಖಲಾತಿ ಪ್ರಮಾಣ ಕುಸಿದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ ಸರ್ಕಾರಿ ಹಾಗು ಖಾಸಗಿ ಶಾಲೆಗಳಲ್ಲಿ 1,26,994 ಮಕ್ಕಳು ದಾಖಲಾಗಿದ್ದರು . ಆದರೆ ಈ ಬಾರಿ ಅಂದರೆ 2020-21 ನೇ ಸಾಲಿಗೆ 1,22,389 ಮಕ್ಕಳು ದಾಖಲಾಗಿದ್ದು ಈ ಬಾರಿ 4605 ಮಕ್ಕಳು ಶಾಲೆಗಳಿಗೆ ಪ್ರವೇಶ ಪಡೆದಿಲ್ಲ. ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ  ಸರ್ಕಾರಿ ಶಾಲೆಗಳಲ್ಲಿ 129, ಅನುದಾನಿತ ಖಾಸಗಿ ಶಾಲೆಗಳಲ್ಲಿ 1164, ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 2582, ಸಮಾಜ ಕಲ್ಯಾಣ ಇಲಾಖೆ ಹಾಗು ಪರಿಶಿಷ್ಠ ಪಂಗಡಗಳ ಇಲಾಖೆಯಡಿ ಬರುವ ವಸತಿ ಹಾಗು ಆಶ್ರಮ ಶಾಲೆಗಳಲ್ಲಿ 652 ಮಕ್ಕಳು ಶಾಲೆಗಳಿಗೆ ದಾಖಲಾಗಿಲ್ಲ.

ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳಿಗಿಂತ  ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಕುಸಿದಿರುವುದು ಕಂಡು ಬಂದಿದೆ  ಎಂದು  ಚಾಮರಾಜನಗರ ಡಿಡಿಪಿಐ. ಜವರೇಗೌಡ ತಿಳಿಸಿದ್ದಾರೆ

ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಕೊರೋನಾ ಸೋಂಕು ತಗುಲಬಹುದೆಂಬ ಭೀತಿ ಪೋಷಕರನ್ನು ಕಾಡುತ್ತಿದೆ,  ಇನ್ನೊಂದೆಡೆ ಲಾಕ್ ಡೌನ್ ಪರಿಣಾಮ ಆರ್ಥಿಕ ಸಂಕಷ್ಟವೂ ಎದುರಾಗಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಪೋಷಕರು ಹಿಂದೇಟು ಹಾಕಿದ್ದಾರೆ, ಜೀವ ಉಳಿದರೆ ಸಾಕು, ಒಂದು ವರ್ಷ ಹೋದರು ಪರವಾಗಿಲ್ಲ ಮುಂದಿನ ವರ್ಷ ಶಾಲೆಗೆ ಸೇರಿಸೋಣ ಎಂಬ ತೀರ್ಮಾನಕ್ಕು ಕೆಲವು ಪೋಷಕರು ಬಂದಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ತಮ್ಮ ಮಕ್ಕಳನ್ನು ಮುಂದಿನ ತರಗತಿಗೆ  ಪಾಸ್ ಮಾಡುತ್ತಾರೆ , ಶುಲ್ಕಕಟ್ಟಿ ದಾಖಲು ಮಾಡುವುದು ವ್ಯರ್ಥ,  ಎಂಬುದು  ಪೋಷಕರ  ಭಾವನೆಯಾಗಿದೆ ಎನ್ನುತ್ತಾರೆ ಬಂಜಾರ  ಎಜುಕೇಷನ್  ಮತ್ತು ಸೋಶಿಯಲ್ ಟ್ರಸ್ಟ್ ಸಂಸ್ಥಾಪಕ ಮೋಹನ್ ಮೆಘಾವತ್.

ಇದನ್ನೂ ಓದಿ : ಕಟೀಲ್​ ಒಬ್ಬ ಕಾಡು ಮನುಷ್ಯ, ಸಂಘ ಪರಿವಾರದಲ್ಲಿ ಮಾನವಂತರಿದ್ದರೆ ಅವರಿ​ಗೆ ಬುದ್ಧಿಹೇಳಿ; ಸಿದ್ದರಾಮಯ್ಯ ಕಿಡಿ

ನನ್ನ ಮಗ ಈಗ ಎರಡನೇ ತರಗತಿ, ಅವನನ್ನು ಶಾಲೆಗೆ ಕಳುಹಿಸಿ ಏನಾದರು ಹೆಚ್ಚುಕಮ್ಮಿ ಆದರೆ ಎಂಬ ಭಯವಿದೆ ಅಲ್ಲದೆ ನಮ್ಮ ಯಜಮಾನರು ಆಟೋ ಓಡಿಸುತ್ತಾರೆ, ಇತ್ತೀಚೆಗೆ ಸಂಪದಾನೆ ಕಮ್ಮಿ ಆಗಿದೆ, ಹಾಗಾಗಿ ಶಾಲೆಗೆ ಶುಲ್ಕ ಪಾವತಿಸುವದು ಕಷ್ಟವಾಗಿದೆ ಆದ್ದರಿಂದ ಈ ವರ್ಷ ನನ್ನ ಮಗನನ್ನು ಶಾಲೆಗೆ ದಾಖಲು ಮಾಡಿಲ್ಲ ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸುತ್ತಾರೆ ಚಾಮರಾಜನಗರ ನಾಯಕರ ಬಡಾವಣೆಯ ದೀಪ.
ಇನ್ನೊಂದೆಡೆ ಒಟ್ಟಾರೆ ಶಾಲಾ ದಾಖಲಾತಿ ಕುಸಿತದ ನಡುವೆಯು  ಈ ವರ್ಷ ಸರ್ಕಾರಿ ಶಾಲೆಗಳ ಪ್ರವೇಶಾತಿ ಹೆಚ್ಚಳವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 769 ಕ್ಕು ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳಲ್ಲಿ  ಪ್ರವೇಶಾತಿ ಪಡೆದಿದ್ದಾರೆ. ಒಟ್ಟಾರೆ ಕೋವಿಡ್-19 ನಾನಾ ಆವಾಂತರಗಳನ್ನು  ಸೃಷ್ಟಿಸುತ್ತಿದ್ದು ಶೈಕ್ಷಣಿಕ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.
Published by: MAshok Kumar
First published: October 22, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading