ಕುಂಬಾರರ ಬದುಕು ಅತಂತ್ರಗೊಳಿಸಿದ ಕೊರೋನಾ ; ಮಣ್ಣಿನ ಕುಡಿಕೆಯಲ್ಲಿ ಟೀ ಮಾರಿ ಯುವಕ ಮಾದರಿ
ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಮರಿಸ್ವಾಮಿ ಎಂಬುವವರು ಸಣ್ಣ ಕುಡಿಕೆಗಳ ಮೂಲಕ ಲೆಮನ್ ಟೀ ನೀಡುತ್ತಿದ್ದು, ಇದು ಇಂದಿನ ಕೊರೋನಾ ಸೋಂಕನ್ನು ತಡೆಯಲು ಸಹ ರೋಗ ನಿರೋಧಕ ಶಕ್ತಿಯಾಗಿ ಬಳಕೆಯಾಗುತ್ತಿದೆ.
news18-kannada Updated:August 25, 2020, 5:57 PM IST

ಟೀ ಅಂಗಡಿ
- News18 Kannada
- Last Updated: August 25, 2020, 5:57 PM IST
ರಾಮನಗರ(ಆಗಸ್ಟ್. 25): ಆಧುನಿಕ ಜೀವನಕ್ಕೆ ಕಾಲಿಟ್ಟ ಮನುಷ್ಯ, ದಿನೇ ದಿನೇ ಉತ್ತಮ ಆರೋಗ್ಯಕ್ಕೆಂದೇ ಬಳಸುತ್ತಿದ್ದ ಮಣ್ಣಿನ ಮಡಿಕೆಗಳನ್ನು ಬದಿಗೊತ್ತಿದ್ದಾನೆ. ಸ್ಟೀಲ್, ಪ್ಲಾಸ್ಟಿಕ್ ಗೆ ಒಗ್ಗಿಕೊಂಡು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ, ಜೊತೆಗೆ ತಲತಲಾಂತರಿಂದ ಕುಲ ಕಸುಬನ್ನೇ ತನ್ನ ಜೀವನಕ್ಕಾಗಿ ರೂಪಿಸಿಕೊಂಡು ಬರುತ್ತಿದ್ದ, ಅನೇಕ ಕುಟುಂಬಗಳು ಬೀದಿಗೆ ಬರುವಂತಾಯಿತು. ಕೊರೋನಾ ಸಂದರ್ಭದಲ್ಲಿಯಂತೂ ಕುಂಬಾರರನ್ನು ಕೇಳುವವರಿಲ್ಲದೆ ಬದುಕು ಮೂರಾ ಬಟ್ಟೆಯಾಗಿತ್ತು. ಇಂತಹ ಸಂದರ್ಭದಲ್ಲಿ ಕುಂಬಾರರಿಗೆ ಅನುಕೂಲವಾಗುವಂತೆ ಯುವಕನೋರ್ವ ಮಣ್ಣಿನ ಕುಡಿಕೆಗಳಲ್ಲಿ ಟೀ ನೀಡುವ ಮೂಲಕ ಮಾದರಿಯಾಗಿದ್ದಾನೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊರವಲಯದಲ್ಲಿರುವ ಸಾತನೂರು ರಸ್ತೆಯ ಹೌಸಿಂಗ್ ಬೋರ್ಡ್ ಬಳಿಯಿರುವ ಕಲ್ಪತರು ಹೋಟೆಲ್ ನಲ್ಲಿ ಯುವಕನೋರ್ವ ಟೀ ಮಾರಾಟ ಮಾಡುತ್ತಿದ್ದಾನೆ. ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಮರಿಸ್ವಾಮಿ ಎಂಬುವವರು ಸಣ್ಣ ಕುಡಿಕೆಗಳ ಮೂಲಕ ಲೆಮನ್ ಟೀ ನೀಡುತ್ತಿದ್ದು, ಇದು ಇಂದಿನ ಕೊರೋನಾ ಸೋಂಕನ್ನು ತಡೆಯಲು ಸಹ ರೋಗ ನಿರೋಧಕ ಶಕ್ತಿಯಾಗಿ ಬಳಕೆಯಾಗುತ್ತಿದೆ. ಕಾಫಿ ಡೇ ಗೆ ಮುಗಿ ಬೀಳುತ್ತಿದ್ದ ಅನೇಕ ಯುವಕರು, ಹೆದ್ದಾರಿಯ ಪ್ರಯಾಣಿಕರು ಹಾಗೂ ಸ್ಥಳೀಯರು ಸಹ ಬಂದು ಇಲ್ಲಿ ಟೀ ಸವಿಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಾಗಿ ಮರಿಸ್ವಾಮಿ ಸಂತಸ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ : ಅತಿವೃಷ್ಟಿ: ಹೆಚ್ಚಿನ ಪರಿಹಾರ ಕೋರಲು ಮುಂದಿನ ವಾರ ದೆಹಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ದಿನನಿತ್ಯ ಈ ಟೀ ಸ್ಟಾಲ್ ನಲ್ಲಿ 200 - 300 ಕುಡಿಕೆ ಟೀ ಮಾರಾಟವಾಗುತ್ತಿದೆ. ಜೊತೆಗೆ ಈ ಲೆಮೆನ್ ಟೀ ನಲ್ಲಿ ಜೇನುತುಪ್ಪ, ನಿಂಬೆಹುಳಿ, ಜೀರಿಗೆ, ಮೆಣಸು, ಶುಂಠಿಯನ್ನ ಬಳಸಲಾಗುತ್ತೆ. ಇದರಿಂದಾಗಿ ಆರೋಗ್ಯಕ್ಕೂ ಒಳ್ಳೆಯದು. ಇದರ ಜೊತೆಗೆ ಲಾಕ್ ಡೌನ್ ನಿಂದ ಕುಂಬಾರರ ಬದುಕು ಕಷ್ಟವಾಗಿತ್ತು. ಆದರೆ, ಈ ಟೀ ಸ್ಟಾಲ್ ಗೆ ವಾರಕ್ಕೆ 500 - 600 ಕುಡಿಕೆ ಬೇಕಾಗಿದ್ದು, ಈ ಟೀ ಸ್ಟಾಲ್ ನಿಂದಾಗಿ ಕುಂಬಾರರ ಬದುಕು ಸಹ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.
ಒಟ್ಟಾರೆಯಾಗಿ, ಕಷಾಯ ಕುಡಿಯಬೇಕು ಎಂದು ಅರೋಗ್ಯ ಇಲಾಖೆ ಸಿಬ್ಬಂದಿಗಳು ಸಹ ಎಲ್ಲರಿಗೂ ಸಲಹೆ ಕೊಡುತ್ತಿದ್ದರು. ಆದರೆ, ಮರಿಸ್ವಾಮಿ ಲೆಮೆನ್ ಟೀ ಕೊಡುವ ಮೂಲಕ ಅದರಲ್ಲಿಯೇ ಕಷಾಯ ತಯಾರು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ನಿಜಕ್ಕೂ ಶ್ಲಾಘಿಸಲೇಬೇಕು. ಇನ್ನು ಇದನ್ನೇ ಎಲ್ಲಾ ಟೀ ಸ್ಟಾಲ್ ಗಳು ಅಳವಡಿಸಿಕೊಂಡರೆ ಕುಂಬಾರ ಬದುಕು ಉತ್ತಮವಾಗಿರಲಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊರವಲಯದಲ್ಲಿರುವ ಸಾತನೂರು ರಸ್ತೆಯ ಹೌಸಿಂಗ್ ಬೋರ್ಡ್ ಬಳಿಯಿರುವ ಕಲ್ಪತರು ಹೋಟೆಲ್ ನಲ್ಲಿ ಯುವಕನೋರ್ವ ಟೀ ಮಾರಾಟ ಮಾಡುತ್ತಿದ್ದಾನೆ. ಚನ್ನಪಟ್ಟಣ ತಾಲೂಕಿನ ನೇರಳೂರು ಗ್ರಾಮದ ಮರಿಸ್ವಾಮಿ ಎಂಬುವವರು ಸಣ್ಣ ಕುಡಿಕೆಗಳ ಮೂಲಕ ಲೆಮನ್ ಟೀ ನೀಡುತ್ತಿದ್ದು, ಇದು ಇಂದಿನ ಕೊರೋನಾ ಸೋಂಕನ್ನು ತಡೆಯಲು ಸಹ ರೋಗ ನಿರೋಧಕ ಶಕ್ತಿಯಾಗಿ ಬಳಕೆಯಾಗುತ್ತಿದೆ.