HOME » NEWS » District » CORONA EFFECT BITTER TO THE SUGARCANE GROWERS OF THE COAST MAK

ಕೊರೋನಾ ಎಫೆಕ್ಟ್‌; ಕರಾವಳಿಯ ಕಬ್ಬು ಬೆಳೆಗಾರರಿಗೆ ಕಹಿ ತಂದ ಸಾಂಕ್ರಾಮಿಕ ರೋಗ

ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಡಿಮ್ಯಾಂಡ್ ಮಂಗಳೂರು ತಾಲೂಕಿನ ಬಳ್ಕುಂಜೆ ಗ್ರಾಮದ ಕಬ್ಬಿಗೆ ಇದೆ. ಇಲ್ಲಿ ಸುಮಾರು 45 ಕುಟುಂಬಗಳು ಕಬ್ಬು ಬೆಳೆ ಮೇಲೆ ಅವಲಂಬಿತವಾಗಿದೆ. ಸುಮಾರು 15 ಎಕರೆ ಜಾಗದಲ್ಲಿ ಈಗಾಗಲೇ ಕಬ್ಬು ಬೆಳೆದು ನಿಂತಿದೆ. ಬೆಳೆಗಾರ ಕಷ್ಟಪಟ್ಟು ಫಸಲು ತೆಗೆದರೂ ಕೊರೋನಾ ಸಂಕಷ್ಟವನ್ನು ತಂದೊಡ್ಡಿದೆ.

news18-kannada
Updated:August 14, 2020, 9:38 PM IST
ಕೊರೋನಾ ಎಫೆಕ್ಟ್‌; ಕರಾವಳಿಯ ಕಬ್ಬು ಬೆಳೆಗಾರರಿಗೆ ಕಹಿ ತಂದ ಸಾಂಕ್ರಾಮಿಕ ರೋಗ
ಕರಾವಳಿಯಲ್ಲಿ ಬೆಳೆಯಲಾಗಿರುವ ಕಬ್ಬು.
  • Share this:
ಮಂಗಳೂರು: ಈ ಬಾರಿಯ ಚೌತಿ ಹಬ್ಬ ಕಬ್ಬು ಬೆಳೆಗಾರರ ಪಾಲಿಗೆ ಕಹಿ ತಂದಿದೆ. ಕೊರೋನಾ ಮಹಾಮಾರಿಯ ಕಾರಣ ಹಬ್ಬವನ್ನು ಬಹಳ ಸರಳವಾಗಿ ಮಾಡುತ್ತಿರುವುದರಿಂದ ಕರಾವಳಿಯ ಕಬ್ಬು ಬೆಳೆಗಾರರಿಗೆ ಖರೀದಿದಾರರೇ ಸಿಕ್ಕಿಲ್ಲ. ಇದರಿಂದ ಚೌತಿ ಹಬ್ಬಕ್ಕೆಂದೇ ವಿಶೇಷವಾಗಿ ಬೆಳೆದಿರುವ ಸಿಹಿಯಾದ ಕಬ್ಬುಗಳನ್ನು ಯಾರು ಕೇಳುವವರಿಲ್ಲದಂತಾಗಿದೆ.

ಕರಾವಳಿ ಪ್ರದೇಶಗಳಲ್ಲಿ ಕಬ್ಬು ಬೆಳೆ ಅತೀ ವಿರಳವಾಗಿದರೂ ಮಂಗಳೂರಿನ ಹಲವೆಡೆ ಕಬ್ಬು ಬೆಳೆಯನ್ನು ಬೆಳೆಯಲಾಗುತ್ತಿದೆ. ಕೂಲಿಯಾಳುಗಳ ಕೊರತೆಯ ನಡುವೆಯೇ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಬೆಳೆಗಾರ ಈ ಬಾರಿ ಕೊರೋನಾ ಕಾರಣದಿಂದ ನಿರಾಶೆಗೊಂಡಿದ್ದಾನೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಬ್ಬು ಬೆಳೆಗೆ ಹೆಸರಾದ ಬಳ್ಕುಂಜೆ ಊರಿನ ಕಬ್ಬಿಗೂ ಈ ಬಾರಿ ಡಿಮ್ಯಾಂಡ್ ಇಲ್ಲದಂತಾಗಿದೆ. ಕೊರೋನಾ ಕಾರಣದಿಂದ ಮಧ್ಯವರ್ತಿಗಳು ಖರೀದಿಗೆ ಬಾರದಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಡಿಮ್ಯಾಂಡ್ ಮಂಗಳೂರು ತಾಲೂಕಿನ ಬಳ್ಕುಂಜೆ ಗ್ರಾಮದ ಕಬ್ಬಿಗೆ ಇದೆ. ಇಲ್ಲಿ ಸುಮಾರು 45 ಕುಟುಂಬಗಳು ಕಬ್ಬು ಬೆಳೆ ಮೇಲೆ ಅವಲಂಬಿತವಾಗಿದೆ. ಸುಮಾರು 15 ಎಕರೆ ಜಾಗದಲ್ಲಿ ಈಗಾಗಲೇ ಕಬ್ಬು ಬೆಳೆದು ನಿಂತಿದೆ. ಬೆಳೆಗಾರ ಕಷ್ಟಪಟ್ಟು ಫಸಲು ತೆಗೆದರೂ ಕೊರೋನಾ ಸಂಕಷ್ಟವನ್ನು ತಂದೊಡ್ಡಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಅತಿವೃಷ್ಟಿಯಿಂದ 1685 ಕಿ.ಮೀ. ರಸ್ತೆ , 456 ಸೇತುವೆ ಹಾನಿ; ಡಿಸಿಎಂ ಗೋವಿಂದ ಕಾರಜೋಳ

ಇಲ್ಲಿ ಕಬ್ಬಿನ ತೋಟಕ್ಕಾಗಿ ಚಿನ್ನಾಭರಣ, ಜಾಗ ಅಡವಿಟ್ಟವರೂ ಇದ್ದಾರೆ. ಹೀಗಾಗಿ ಸರಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿ ಇಲ್ಲಿನ ಕಬ್ಬು ಬೆಳೆಗಾರರು ಇದ್ದಾರೆ.
ಒಟ್ಟಿನಲ್ಲಿ ವಿಘ್ನ ನಿವಾರಕ ವಿನಾಯಕನ ಹಬ್ಬ ಆಚರಣೆಗೆಯೇ ಕೊರೊನಾ ವಿಘ್ನ ತಂದಿದೆ. ಕಬ್ಬು ಬೆಳೆಗಾರರ ಮುಖದಲ್ಲಿ ಸಂತಸ ಮಾಯವಾಗಿದೆ. ಕೊರೋನಾದಿಂದಾಗಿ ಕಬ್ಬಿಗೆ ಬೇಡಿಕೆಯಿಲ್ಲದೆ ಕಬ್ಬು ರೈತರಿಗೆ ಕಹಿ ತಂದಿದೆ ಎಂದರೆ ತಪ್ಪಾಗಲಾರದು.
Published by: MAshok Kumar
First published: August 14, 2020, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories