ಕೊರೋನಾ ಎಫೆಕ್ಟ್​; ತೆರಿಗೆ ಕಟ್ಟಲಾಗದೆ ಮೈಸೂರಿನಲ್ಲಿ ಸಂಚಾರ ನಿಲ್ಲಿಸಿದ 125 ಖಾಸಗಿ ಬಸ್​ಗಳು

ಮೈಸೂರು-ಚಾಮರಾಜನಗರ-ಟಿ.ನರಸೀಪುರ-ಕೊಳ್ಳೆಗಾಲದ ಕಡೆ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್ ಗಳು ಸಂಚಾರ ನಿಲ್ಲಿಸಿವೆ. ಇದು ಸಾರಿಗೆ ಇಲಾಖೆಗೂ ಸಹ ಲಕ್ಷಾಂತರ ರೂಪಾಯಿ ನಷ್ಟ ತಂದೊಡ್ಡಿದೆ.

ಸಂಚಾರ ನಿಲ್ಲಿಸಿರುವ ಖಾಸಗಿ ಬಸ್​ಗಳು.

ಸಂಚಾರ ನಿಲ್ಲಿಸಿರುವ ಖಾಸಗಿ ಬಸ್​ಗಳು.

  • Share this:
ಮೈಸೂರು: ಮಹಾಮಾರಿ ಕೊರೋನಾ ಸಾಕಷ್ಟು ಜನರ ಬದುಕನ್ನು ಬುಡಮೇಲು‌ ಮಾಡಿದೆ.ಇದೀಗಾ ಅನ್​ಲಾಕ್ ನಂತರ ಕೆಲ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಆದರೆ,‌ ಖಾಸಗಿ ಬಸ್ ಮಾಲೀಕರು ಬಸ್​​ಗಳ ತೆರಿಗೆ ಕಟ್ಟಲಾಗದೆ ತಮ್ಮ ವಾಹನದ ದಾಖಲಾತಿಗಳನ್ನ ಆರ್.ಟಿ.ಓ ಗೆ ಸರೆಂಡರ್ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಂತು ಖಾಸಗಿ ಬಸ್​ಗಳು ಅಲ್ಲೊಂದು ಇಲ್ಲೊಂದು ಸಂಚಾರ ನಡೆಸುತ್ತಿದ್ದು ಇದರಿಂದ ಸಾರಿಗೆ ಇಲಾಖೆ ಆದಾಯ ಕೂಡ ಕಡಿಮೆಯಾಗಿದೆ. ಹೌದು, ಕೊರೋನಾ ಎಷ್ಟೋ ಜನರ ಬದುಕನ್ನೆ ಕಿತ್ತುಕೊಂಡಿದೆ. ಕೇವಲ ಬಡವರ ಬದುಕಲ್ಲ, ಶ್ರೀಮಂತರ ಬದುಕಿಗು ಮುಳ್ಳಾಗಿದೆ. ಅದೇ ರೀತಿ ಖಾಸಗಿ‌ ಬಸ್ ಮಾಲೀಕರದ್ದು ಇದೇ ಪಾಡಾಗಿದೆ. ಲಾಕ್ ಡೌನ್ ನಂತರ ಸಾರಿಗೆ ವ್ಯವಸ್ಥೆ ಮೇಲೆ ಬಾರಿ ಹೊಡೆತ ಬಿದಿದ್ದು ಖಾಸಗಿ ಬಸ್ ಮಾಲೀಕರಂತು ನಷ್ಟದಿಂದ ತಪ್ಪಿಸಿಕೊಳ್ಳು ಬಸ್ ಗಳ ದಾಖಲೆಗಳನ್ನು ಆರ್.ಟಿ.ಓ ಸರೆಂಡರ್ ಮಾಡಿದ್ದಾರೆ.‌

ಹೌದು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ನಡುವೆ ಸಂಚಾರ ಮಾಡುತ್ತಿದ್ದ 150 ಕ್ಕು ಹೆಚ್ಚು ಖಾಸಗಿ ಬಸ್ ಗಳಲ್ಲಿ ಸುಮಾರು 125 ಬಸ್ ಗಳ ದಾಖಲೆಗಳನ್ನು ಆರ್.ಟಿ.ಓ ಗೆ ಸೆರೆಂಡರ್ ಮಾಡಿದ್ದಾರೆ. ಇದರಿಂದ ಸಾವಿರಾರು ಜನರ ಬದುಕು ಕೂಡ ಮೂರಬಟ್ಟೆಯಾಗಿದೆ.ಖಾಸಗಿ ಬಸ್ ಗಳಿಗೆ ಮೂರು ತಿಂಗಳ ತೆರಿಗೆಯನ್ನು ಮೊದಲೆ ಕಟ್ಟಬೇಕಿದೆ. ಅದರಲ್ಲು ರೂಟ್ ಬಸ್ ಗಳಿಗೆ 50 ಸಾವಿರದಷ್ಟು ಕಟ್ಟಬೇಕಿದ್ರೆ, ಟೂರಿಸ್ಟ್ ಬಸ್ ಗಳಿಗೆ 80 ಸಾವಿರ ಕಟ್ಟಬೇಕಿದೆ. ಜನರು ಬಸ್ ಗಳನ್ನ ಹತ್ತಲು ಹಿಂದೇಟು ಹಾಕುತ್ತಿದ್ದಾರೆ‌ ಇಂತಹ ಸಂಧರ್ಭದಲ್ಲಿ ತೆರಿಗೆ ಕಟ್ಟಲು ಹೇಗೆ ಸಾಧ್ಯ ಅಂತಾರೆ ಬಸ್ ಮಾಲೀಕರು.

ಇನ್ನು ಕೆಲವರು ಬಸ್ ಗಳ ದಾಖಲೆಗಳನ್ನು ಬಿಡಿಸಿಕೊಂಡ ಸಂಚಾರಕ್ಕೆ ಅಣಿಯಾಗಿದ್ರು ಜನ ಮಾತ್ರ ಬಸ್ ಗಳತ್ತ ಬರುತ್ತಿಲ್ಲ. ಸಾಮಾಜಿಕ ಅಂತರ, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಕೆ ಇವೇಲ್ಲದರ ಪರಿಣಾಮ ಖಾಸಗಿ ಬಸ್‌ಗಳ ಮೇಲೆ ಬಿದ್ದಿದೆ.  ಇದರಿಂದಾಗಿ ಜನರು ಸಾರ್ವಜನಿಕ ವಾಹನಗಳನ್ನ ಬಿಟ್ಟು ಖಾಸಗಿ ವಾಹನಗಳ ಮೇಲೆ ಅಲಂಬಿತರಾಗುತ್ತಿದ್ದಾರೆ. ದಾಖಲೆಗಳನ್ನು ಆರ್‌ಟಿಓಗೆ ಸೆರೆಂಡರ್ ಮಾಡಿ ಬಸ್ ಗಳನ್ನ ಶೆಡ್ ಗಳು ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದಾರೆ.

ಇದನ್ನೂ ಓದಿ : BTS 2020 - ತಂತ್ರಜ್ಞಾನವೇ ಭವಿಷ್ಯದ ಶಕ್ತಿ: ಬೆಂಗಳೂರು ಟೆಕ್ ಸಮಿಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ

ಇದರಿಂದ ಮೈಸೂರು-ಚಾಮರಾಜನಗರ-ಟಿ.ನರಸೀಪುರ-ಕೊಳ್ಳೆಗಾಲದ ಕಡೆ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್ ಗಳು ಸಂಚಾರ ನಿಲ್ಲಿಸಿವೆ. ಇದು ಸಾರಿಗೆ ಇಲಾಖೆಗೂ ಸಹ ಲಕ್ಷಾಂತರ ರೂಪಾಯಿ ನಷ್ಟ ತಂದೊಡ್ಡಿದೆ.

ಒಟ್ಟಾರೆ ಸಾಕಷ್ಟು ಗಿಜುಗುಡುತ್ತಿದ್ದ ಖಾಸಗಿ ಬಸ್ ನಿಲ್ದಾಣಗಳು ಇದೀಗಾ ಮಾತ್ರ ಪ್ರಯಾಣಿಕರು ಇತ್ತ ಸುಳಿಯುತ್ತಿಲ್ಲ.‌ ಖಾಸಗಿ ಬಸ್ ಮಾಲೀಕರು ಸಾಕಷ್ಟು ತೊಂದರೆಗೊಳಗಾಗಿದ್ದು ಸರ್ಕಾರ ನಮತ್ತವು ತಿರುಗಿ ನೋಡಿ ತೆರಿಗೆ ವಿನಾಯಿತಿ ನೀಡಿಬೇಕು ಅಂತ ಮನವಿ ಮಾಡಿದ್ದಾರೆ. ಕೊರೊನಾ ಏನೆಲ್ಲ ಮಾಡಿದೆ ಅನ್ನೋದಕ್ಕೆ ಈ ಖಾಸಗಿ ಬಸ್‌ಗಳೆ ಪ್ರತ್ಯಕ್ಷ ಉದಾಹರಣೆಯಾಗಿದೆ.
Published by:MAshok Kumar
First published: