HOME » NEWS » District » CORONA DEATH 4 DEAD IN CHITRADURGA HOSPITAL DUE TO OXYGEN SHORTAGE PEOPLE BLAME GOVERNMENT VTC SKTV

Corona Death: ಮುಂದುವರೆದ ಕೊರೊನಾ ಮಾರಣಹೋಮ, ಆಕ್ಸಿಜನ್ ಕೊರತೆಯಿಂದ ಚಿತ್ರದುರ್ಗದಲ್ಲಿ 3 ಸಾವು !

ಒಂದೇ ದಿನದಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಮೃತಪಟ್ಟಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಕೊರತೆ ಇಲ್ಲ ಅಂತ ಹೇಳುತ್ತಿದ್ದಾರೆ. ಆದರೇ ಜೀವ ರಕ್ಷಣಗೆ ಬೇಕಿದ್ದ ಆಕ್ಸಿಜನ್ ಸಿಗದೆ ಅನೇಕರು ಸಾವನ್ನಪ್ಪುತ್ತಿದ್ದಾರೆ. 

news18-kannada
Updated:May 14, 2021, 7:32 AM IST
Corona Death: ಮುಂದುವರೆದ ಕೊರೊನಾ ಮಾರಣಹೋಮ, ಆಕ್ಸಿಜನ್ ಕೊರತೆಯಿಂದ ಚಿತ್ರದುರ್ಗದಲ್ಲಿ 3 ಸಾವು !
ಆಕ್ಸಿಜನ್ ಕೊರತೆಯಿಂದ ರೋಗಿಗಳ ನರಳಾಟ
  • Share this:
ಚಿತ್ರದುರ್ಗ: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಸೋಂಕು ಬೆನ್ನು ಬಿಡದ ಭೂತದಂತೆ ಜನರನ್ನ ಬದುಕಲು ಬಿಡದೆ ಜೀವ ಹಿಂಡಿ ಹಿಪ್ಪೆ ಮಾಡುತ್ತಿದೆ. ಇದರ ಕೆನ್ನಾಲಿಗೆಗೆ ಸಿಕ್ಕವರು ಆಸ್ಪತ್ರೆಗೆ  ಸೇರಿ ಜೀವ ಉಳಿಸಿಕೊಳ್ಳೋಕೆ ಹರಸಾಹಸ ಮಾಡುತ್ತಿದ್ದಾರೆ. ಆದರೂ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಅದೆಷ್ಟೋ ಜನರು ಜೀವ ತೆತ್ತಿದ್ದಾರೆ. ಒಂದೇ ದಿನದಲ್ಲಿ ಆಕ್ಸಿಜನ್ ಕೊರತೆಯಿಂದ ನಾಲ್ವರು ಮೃತಪಟ್ಟಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಯಾವ ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಕೊರತೆ ಇಲ್ಲ ಅಂತ ಹೇಳುತ್ತಿದ್ದಾರೆ. ಆದರೇ ಜೀವ ರಕ್ಷಣಗೆ ಬೇಕಿದ್ದ ಆಕ್ಸಿಜನ್ ಸಿಗದೆ ಅನೇಕರು ಸಾವನ್ನಪ್ಪುತ್ತಿದ್ದಾರೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ಗ್ರಾಮದ 75 ವರ್ಷ ವಯಸ್ಸಿನ ರಾಮಪ್ಪ ನಿನ್ನೆ ಉಸಿರಾಟ ಸಮಸ್ಯೆಯಿಂದ ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ಬಂದಿದ್ರು. ಆ ಸಂದರ್ಭಕ್ಕೆ ಅವರ ಸ್ಥಿತಿ ಚಿಂತಾಜನಕವಾಗಿ ಆಕ್ಸಿಜನ್ ಬೆಡ್ ಬೇಕಾಗಿತ್ತು. ಆಗ ಅವರನ್ನ ಬದುಕಿಸಿಕೊಳ್ಳೋ ಪ್ರಯತ್ನಕ್ಕೆ ಕೈ ಹಾಕಿದ ಮೊಮ್ಮಗಳು THO, DHO, MP, PA ಸೇರಿದಂತೆ ಎಲ್ಲರಿಗೂ ಕರೆ ಮಾಡಿ ತಾತನನ್ನ ಉಳಿಸಿಕೊಡಿ ಎಂದು ಅಂಗಲಾಚಿದ್ದಾರೆ. ಆದರೂ ಆಸ್ಪತ್ರೆ ನರ್ಸ್ಗಳು ಕ್ಯಾರೆ ಎನ್ನದೇ ಕೇವಲ ಹತ್ತು ನಿಮಿಷ ಆಕ್ಸಿಜನ್ ನೀಡಿ  ಬಳಿಕ ತಗೆದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ‌. ಇದರಿಂದ ಆಸ್ಪತ್ರೆ ವ್ಯವಸ್ಥೆ ಹಾಗೂ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ರಾಮಪ್ಪನ ಮೊಮ್ಮಗಳು ವಸಂತಕುಮಾರಿ,  ನನ್ನ ತಾತನನ್ನ ಉಳಿಸಿಕೊಳ್ಳೋಕೆ ಶಾಸಕರು,ಸಂಸದರು, ಯಾರೂ ಸ್ಪಂದಿಸಲಿಲ್ಲ. ಆಸ್ಪತ್ರೆ ಸಿಬ್ಬಂದಿಗಳು, ಅಂಬುಲೆನ್ಸ್ ಡ್ರೈವರ್  ಸೇರಿದಂತೆ ಅನೇಕರಿಗೆ ಕರೆ ಮಾಡಿದೆ, ಯಾರಿಬ್ಬರೂ ಸಹಾಯ ಮಾಡಲೇ ಇಲ್ಲ.

ವಯಸ್ಸಾಗಿತ್ತು ಬಿಡಿ, ನಾವು ಅವರ ಸಂಪರ್ಕದಲ್ಲಿ ಇದ್ದೇವೆ ನಮಗೂ ಪಾಸಿಟೀವ್ ಬರುತ್ತದೆ ನಮಗೂ ಇದೇ ಪರಿಸ್ಥಿತಿ ಬರುತ್ತದೆ. ಹೀಗೆ ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂದು ಮೃತ ತಾತನ ಶವದ ಬಳಿ ನಿಂತು ಸೆಲ್ಪಿ ವೀಡಿಯೋ ಮಾಡಿ ಕಣ್ಣೀರು ಹಾಕಿದ್ದಾಳೆ. ಇನ್ನೂ ಈ ಪ್ರಕರಣ ಮರೆಯುವ ಮುನ್ನವೆ ಮಧ್ಯಾಹ್ನದ ವೇಳೆಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಸಾರಿ ವಾರ್ಡ್ ಸೇರಿದಂತೆ ಹಲವು ವಾರ್ಡ್ಗಳಲ್ಲಿ ಆಕ್ಸಿಜನ್ ಸಪ್ಲೆ ಇಲ್ಲದೇ ರೋಗಿಗಳು ನರಳಾಡಿದ್ದಾರೆ. ಸರಿ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚಿನ ಹೊತ್ತು ಆಕ್ಸಿಜನ್ ಕೊರತೆ ಎದುರಾಗಿ ರೋಗಿಗಳ ಸಂಬಂಧಿಕರು ಒಂದು ಕ್ಷಣ ತಲ್ಲಣಿಸಿ ಹೋಗಿದ್ದರು.

ಇದನ್ನೂ ಓದಿhttps://kannada.news18.com/news/explained/explained-how-to-register-online-for-corona-vaccine-registration-through-cowin-portal-sktv-563303.html

ರೋಗಿಗಳ ನರಳಾಟ ಕಂಡು ಗಾಳಿ ಬೀಸುತ್ತಾ ಹರಸಾಹಸವನ್ನೇ ಪಡಬೇಕಾಯ್ತು. ಅಷ್ಟೊತ್ತಿಗೆ ಆಕ್ಸಿಜನ್ ಸಪ್ಲೆ ಸರಿಯಾಗಿದೆ ಅನ್ನೋ ಸಮಾಧಾನದ ಸುದ್ದಿ ತಿಳಿದು ಕೊಂಚ ರಿಲಾಕ್ಸ್ ಆದ್ರು. ಆದರೂ ಆಕ್ಸಿಜನ್ ಸಪ್ಲೆ ಇಲ್ಲದೇ ಚಿಕಿತ್ಸೆ ಪಡೆಯುತ್ತಿದ್ದ ಮೂರು ಜನ ರೋಗಿಗಳು ಜಿಲ್ಲಾ ಆಸ್ಪತ್ರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ರು. ಅದರಲ್ಲಿ ಚಿತ್ರದುರ್ಗ ನಗರದ  ಬ್ಯಾಂಕ್ ಕಾಲೋನಿ ನಿವಾಸಿ ಶಂಕ್ರಪ್ಪ( 57 ),ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅಳೆಹಳ್ಳಿ ನಿವಾಸಿ ಲೋಕೇಶಪ್ಪ (60) .ಹೊಸದುರ್ಗ ತಾಲ್ಲೂಕು ಸೋಮಸಂದ್ರ ನಿವಾಸಿ ಪುಟ್ಟಮ್ಮ (55) ಆಕ್ಸಿಜನ್ ಸಮಸ್ಯೆಯಿಂದ ಮೃತಪಟ್ಟಿದ್ದರು. ಇದನ್ನ ಕೇಳಿದ ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆ ಸಿಬ್ವಂಧಿ ಅಧಿಕಾರಿಗಳು ಆಕ್ಸಿಜನ್ ಕೊರತೆಯೇ ಆಗಿಲ್ಲ ಅಂತ ಹಾರಿಕೆ ಉತ್ತರ ನೀಡಿ ಬೇಜವಬ್ದಾರಿ ತೋರಿದ್ದಾರೆ.
Youtube Video

ಆಕ್ಸಿಜನ್ ಕೊರತೆಯಿಂದ ತಾಯಿಯನ್ನ ಕಳೆದುಕೊಂಡ  ಪುಟ್ಟಮ್ಮ ಮಗ ಮಾತನಾಡಿ ಕಳೆದ ೧೨ ದಿನಗಳಿಂದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆವು ,ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಯಾರೂ ಸರಿಯಾಗಿ ಕೇರ್ ತಗೊಳಲ್ಲ. ಪ್ರತಿನಿತ್ಯ ರೋಗಿಗಳು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದಾರೆ, ಸಿಬ್ಬಂದಿಗಳು ಯಾರೂ ರೋಗಿಗಳ ನರಳಾಟಕ್ಕೆ ಕ್ಯಾರೇ ಅನ್ನಲ್ಲ. ಡಿಎಸ್ ಬಸವರಾಜ್ ಗೆ ಕಾಲ್ ಮಾಡಿ ಹೇಳಿದ್ರೆ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಇಂದು ನನ್ನ ತಾಯಿ ಸಾವಿಗೆ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣ ಎಂದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ದ ಮೃತ ಪುಟ್ಟಮ್ಮನ ಮಗ ನಿತೀನ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾನೆ.
Published by: Soumya KN
First published: May 14, 2021, 7:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories