ಮಂಡ್ಯದಲ್ಲಿ ಸಮುದಾಯಕ್ಕೆ ಹಬ್ಬಿದ ಕೊರೋನಾ; ಜಿಲ್ಲೆಯ 7 ತಾಲೂಕಿನ ಗ್ರಾಮೀಣ ಭಾಗದಲ್ಲೂ ಹರಡಿರುವ ಸೋಂಕು

ಅತ್ತ ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಪೇದೆಗೆ ಸೋಂಕು ತಗುಲಿದ್ದು, ಪೊಲೀಸ್ ಕ್ವಾಟರ್ಸ್​​ನ್ನು  ಸೀಲ್​ಡೌನ್​ ಮಾಡಲಾಗಿದೆ. ಅಲ್ಲದೇ ಮದ್ದೂರಿನ KSRTC ಬಸ್ ಚಾಲಕನಿಗೂ ಸೋಂಕು ತಗುಲಿದೆ. ಇದಲ್ಲದೇ ಜಿಲ್ಲೆಯ‌ ನಾಗಮಂಗಲದಲ್ಲಿ ಜೆಡಿಎಸ್​ ಮುಖಂಡರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

news18-kannada
Updated:July 6, 2020, 8:19 AM IST
ಮಂಡ್ಯದಲ್ಲಿ ಸಮುದಾಯಕ್ಕೆ ಹಬ್ಬಿದ ಕೊರೋನಾ; ಜಿಲ್ಲೆಯ 7 ತಾಲೂಕಿನ ಗ್ರಾಮೀಣ ಭಾಗದಲ್ಲೂ ಹರಡಿರುವ ಸೋಂಕು
ಸಾಂದರ್ಭಿಕ ಚಿತ್ರ.
  • Share this:
ಮಂಡ್ಯ(ಜು.06): ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಈಗಾಗಲೇ ಜಿಲ್ಲೆಯಾದ್ಯಂತ ತನ್ನ ಕದಂಬಬಾಹು ಚಾಚಿರುವ ಕೊರೋನಾ ಮತ್ತಷ್ಟು ಆತಂಕ ಮೂಡಿಸುತ್ತಿದೆ. ಸದ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ. ಇದುವರೆಗೂ ಜಿಲ್ಲೆಯಲ್ಲಿ ಮೊದಲನೇ ಮತ್ತು ಎರಡನೇ ಹಂತದಲ್ಲಿದ್ದ ಸೋಂಕು ಇದೀಗ  ಮೂರನೇ ಹಂತಕ್ಕೆ ಕಾಲಿಟ್ಟಿದೆ. ಆ ಮೂಲಕ ಸಮುದಾಯಕ್ಕೆ ಸೋಂಕು ಹರಡಲು ಶುರುವಾಗಿದೆ. ಈ ಕಾರಣದಿಂದಾಗಿಯೇ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.

ಹೌದು, ಇದುವರೆಗೂ ಟ್ರಾವೆಲ್ ಹಿಸ್ಟರಿ ಸಿಕ್ತಿದ್ದ ಪ್ರಕರಣಗಳಿಗೆ ಇದೀಗ ಟ್ರಾವೆಲ್ ಹಿಸ್ಟ್ರಿ ಸಿಗದ ಹಾಗೆ ಆಗಿದೆ. ಜಿಲ್ಲೆಯ 7 ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಮೂಲಕ ಕೊರೋನಾ ಜಿಲ್ಲೆಯಲ್ಲಿ ಸಮುದಾಯಕ್ಕೆ ಹಬ್ಬಿದ್ದಂತಾಗಿದೆ. ಈ ಮಾತನ್ನು  ಜಿಲ್ಲೆಯ ಜನಪ್ರತಿನಿಧಿಗಳೇ ಹೇಳುತ್ತಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡುತ್ತಿದ್ದಾರೆ.

ಚಿತ್ರದುರ್ಗದಲ್ಲಿ ನ್ಯಾಯಲಯದ ಟೈಪಿಸ್ಟ್​​ಗೆ ಕೊರೋನಾ; 23 ಜನರೊಂದಿಗೆ ಪ್ರಾಥಮಿಕ ಸಂಪರ್ಕ; ಜಿಲ್ಲೆಯ ಜನರಲ್ಲಿ ಆತಂಕ

ಇನ್ನು, ಜಿಲ್ಲೆಯಲ್ಲಿ ಸಮುದಾಯಕ್ಕೆ  ಹರಡಿರುವ ಸೋಂಕಿನಿಂದಾಗಿ  ಎಲ್ಲಾ ಕಡೆ ಸೋಂಕು ಪತ್ತೆಯಾಗ್ತಿದೆ. ಸಮುದಾಯದ ಸೋಂಕಿನಿಂದ ಪ್ರತಿದಿನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಕೆ.ಆರ್.ಪೇಟೆ ಪುರಸಭೆಯ 6 ಪೌರಕಾರ್ಮಿಕರಿಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಪುರಸಭೆ ಸೇರಿದಂತೆ ಅವರು ವಾಸಿಸುತ್ತಿದ್ದ ಏರಿಯಾವನ್ನು ಕೂಡ ಸೀಲ್​ಡೌನ್​ ಮಾಡಲಾಗಿದೆ.

ಇನ್ನು, ಅತ್ತ ಮಂಡ್ಯದ ಸಶಸ್ತ್ರ ಮೀಸಲು ಪಡೆಯ ಪೇದೆಗೆ ಸೋಂಕು ತಗುಲಿದ್ದು, ಪೊಲೀಸ್ ಕ್ವಾಟರ್ಸ್​​ನ್ನು  ಸೀಲ್​ಡೌನ್​ ಮಾಡಲಾಗಿದೆ. ಅಲ್ಲದೇ ಮದ್ದೂರಿನ KSRTC ಬಸ್ ಚಾಲಕನಿಗೂ ಸೋಂಕು ತಗುಲಿದೆ. ಇದಲ್ಲದೇ ಜಿಲ್ಲೆಯ‌ ನಾಗಮಂಗಲದಲ್ಲಿ ಜೆಡಿಎಸ್​ ಮುಖಂಡರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಮಂಡ್ಯ ಕೋವಿಡ್ ಆಸ್ಪತ್ರೆಗೆ ಪ್ರಯಾಸದಿಂದ ಕರೆದೊಯ್ಯಲಾಗಿದೆ. ನಾಗಮಂಗಲ ತಾಲೂಕಿನಲ್ಲೂ ಕೂಡ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಜನರು ಆತಂಕಗೊಂಡಿದ್ದಾರೆ.

ಒಟ್ಟಾರೆ, ಸಕ್ಕರೆನಾಡು ಮಂಡ್ಯದಲ್ಲಿ ಕೊರೋನಾ ಮಹಾಮಾರಿ ರಣಕೇಕೆ ಹಾಕುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 500ರ ಗಡಿ ದಾಟಿ‌ ಮುನ್ನುಗುತ್ತಿರುವ ಕೊರೋನಾ, ಇದೀಗ ಸಮುದಾಯಕ್ಕೂ ಹರಡಿದೆ. ಹೀಗಾಗಿ ಮುಂದಿನ ದಿನಗಳ ಬಗ್ಗೆ ಜಿಲ್ಲಾಡಳಿತಕ್ಕೆ ಆತಂಕ ಹೆಚ್ಚಾದರೆ, ಜಿಲ್ಲೆಯ ಗ್ರಾಮೀಣ ಭಾಗದ ಜನರು ಕಂಗಾಲಾಗಿದ್ದಾರೆ.
Published by: Latha CG
First published: July 6, 2020, 8:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading