ಕಲಬುರ್ಗಿಯಲ್ಲಿ ಕೊರೋನಾ ದಿಢೀರ್ ಏರಿಕೆ; ಮಾಸ್ಕ್ ಹಾಕದೆ ಇರೋರಿಗೆ ನೋ ಎಂಟ್ರಿ ಎಂದ ಪಾಲಿಕೆ

ಜನರ ವರ್ತನೆ ಹೀಗೆ ಮುಂದುವರೆದಲ್ಲಿ ಜಿಲ್ಲೆಯಲ್ಲಿ ಮತ್ತೆ ಲಾಂಕ್ ಡೌನ್ ಚಿಂತನೆಯನ್ನು ಜಿಲ್ಲಾಡಳಿತ ನಡೆಸಿದೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಸೇರಿದಂತೆ ಸರ್ಕಾರದ ಮಾರ್ಗಸೂಚಿ ಪಾಲಿಸದೇ ಇದ್ದಲ್ಲಿ ಕೊರೋನಾ ಮತ್ತಷ್ಟು ವ್ಯಾಪಕಗೊಳ್ಳೋ ಆತಂಕ ಎದುರಾಗಿದ್ದು, ಜನ ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.

ಕೊರೋನಾ ಸಾಂದರ್ಭಿಕ ಚಿತ್ರ

ಕೊರೋನಾ ಸಾಂದರ್ಭಿಕ ಚಿತ್ರ

  • Share this:
ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಳವಾಗಿದೆ. ಸೋಂಕಿತರ ಸಂಖ್ಯೆ ದಿನೇದಿನೆ ಏರಿಕೆಯಾಗಲಾರಂಭಿಸಿದ್ದು, 2ನೆಯ ಅಲೆ ಅಬ್ಬರಿಸೋ ಆತಂಕ ಎದುರಾಗಿದೆ. ಕಳೆದ ವರ್ಷ ಇದೇ ಮಾರ್ಚ್ ತಿಂಗಳಲ್ಲಿ ದೇಶದ ಮೊದಲ ಕೊರೋನಾ ಸಾವು ಕಲಬುರ್ಗಿಯಲ್ಲಿ ಸಂಭವಿಸಿತ್ತು. ಇದೀಗ ಇದೇ ತಿಂಗಳು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರೋದು ಆತಂಕಕ್ಕೆ ಕಾರಣವಾಗಿದೆ. ಕಲಬುರ್ಗಿ ಜಿಲ್ಲೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡೆ ಇರುವುದರಿಂದಾಗಿ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯದೇ ಇರುವುದರಿಂದ ಮಹಾರಾಷ್ಟ್ರದಿಂದ ಅನಾಯಾಸವಾಗಿ ಜನ ಜಿಲ್ಲೆಯನ್ನು ಪ್ರವೇಶ ಮಾಡ್ತಿದ್ದಾರೆ.

ಒಂದು ವಾರದ ಹಿಂದೆಯಷ್ಟೇ ಮುಂಬಯಿಯಿಂದ ಬಂದಿದ್ದ ವ್ಯಕ್ತಿಯೊಬ್ಬರಿಂದ ಒಂದೇ ಶಾಲೆಯ ಹದಿನೈದು ಜನ ಮಕ್ಕಳಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಈ ಘಟನೆಯಿಂದಾಗಿ ಶಾಲೆಗಳ ಮೇಲೆ ಕೊರೋನಾ ಕಾರ್ಮೋಡ ಕವಿಯುವಂತೆ ಆಗಿತ್ತು. ಇದರಿಂದ ಹೊರ ಬರುವಷ್ಟರಲ್ಲಿಯೇ ಮತ್ತೆ ಕೊರೋನಾ ಎರಡನೆಯ ಅಲೆ ಅಬ್ಬರಿಸಲಾರಂಭಿಸಿದೆ.
ಈ ಹಿನ್ನೆಲೆಯಲ್ಲಿ ಮಾಸ್ಕ್ ಇಲ್ಲದಿದ್ದರೆ‌ ಗ್ರಾಹಕರಿಗೆ ಪ್ರವೇಶ‌ ನೀಡದಂತೆ ಸೂಚನೆ ನೀಡಲಾಗಿದೆ. ವಾಣಿಜ್ಯ ಅಂಗಡಿ‌ ಮಾಲೀಕರಿಗೆ ಕಲಬುರ್ಗಿ ಮಹಾನಗರ ಪಾಲಿಕೆಯಿಂದ ಖಡಕ್ ಸೂಚನೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯ ಶಾಪಿಂಗ್‌ ಮಾಲ್, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರು  ಮಾಸ್ಕ್ ಧರಿಸದಿದ್ದರೆ‌ ಪ್ರವೇಶ‌ ನಿಷೇಧಿಸುವಂತೆ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ‌  ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮಾಸ್ಕ್ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪ್ರವೇಶ ನೀಡಿದಲ್ಲಿ  ವಾಣಿಜ್ಯ ಅಂಗಡಿಗಳ‌ ಮಾಲೀಕರಿಗೆ ದಂಡ ವಿಧಿಸೋ ಎಚ್ಚರಿಕೆಯನ್ನೂ ನೀಡಿದ್ದಾರೆ. ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 43 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ. ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ದಿನೆ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಇದನ್ನು ಓದಿ: Karnataka Coronavirus: ನಾಳೆ ಪ್ರಧಾನಿ ಮೋದಿ ಜೊತೆ ಚರ್ಚಿಸಿ ಕೊರೋನಾ ನಿಯಂತ್ರಣ ಕ್ರಮದ ಬಗ್ಗೆ ತೀರ್ಮಾನ; ಸಚಿವ ಡಾ. ಕೆ. ಸುಧಾಕರ್

ಡೋಂಟ್ ಕೇರ್ ಅಂತಿರೋ ಜನ

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳವಾಗಿದ್ರೂ ಸಹ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ಮಾಸ್ಕ್ ಇಲ್ಲದೆ ಬೈಕ್ ಸವಾರರ ಸಂಚಾರ ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದರೂ ಜನ ಡೋಂಟ್ ಕೇರ್ ಅನ್ತಿದಾರೆ. ನಗರದ ಹಲವೆಡೆ ಜನ ಮಾಸ್ಕ್ ಧರಿಸದೆ ಸಂಚರಿಸುತ್ತಿರೋ ದೃಶ್ಯ ಸಾಮಾನ್ಯವಾಗಿದೆ.

ಸೂಪರ್ ಮಾರುಕಟ್ಟೆ ಮತ್ತಿತರರ ಜನ ನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಅಡ್ಡಾಟ ನಡೆಸಿರೋದು ಸಾಮಾನ್ಯವಾಗಿದೆ. ಮಾಸ್ಕ್ ಕಡ್ಡಾಯ ಮಾಡಿದರೂ ಜನರ ಮಾತ್ರ  ಮಾಸ್ಕ್ ಧರಿಸುತ್ತಿಲ್ಲ. ಮಹಾನಗರ ಪಾಲಿಕೆಯಿಂದಲೂ ಸಾರ್ವಜನಿಕರು ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. ಮಾಸ್ಕ್ ಹಾಕಿದವರಿಗೆ ಮಾತ್ರ ವಾಣಿಜ್ಯ ಮಳಿಗೆಗಳಿಗೆ ಎಂಟ್ರಿ ಅಂದ್ರೂ ಜನ ಲೆಕ್ಕಿಸ್ತಿಲ್ಲ. ಇದು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಜನರ ವರ್ತನೆ ಹೀಗೆ ಮುಂದುವರೆದಲ್ಲಿ ಜಿಲ್ಲೆಯಲ್ಲಿ ಮತ್ತೆ ಲಾಂಕ್ ಡೌನ್ ಚಿಂತನೆಯನ್ನು ಜಿಲ್ಲಾಡಳಿತ ನಡೆಸಿದೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಸೇರಿದಂತೆ ಸರ್ಕಾರದ ಮಾರ್ಗಸೂಚಿ ಪಾಲಿಸದೇ ಇದ್ದಲ್ಲಿ ಕೊರೋನಾ ಮತ್ತಷ್ಟು ವ್ಯಾಪಕಗೊಳ್ಳೋ ಆತಂಕ ಎದುರಾಗಿದ್ದು, ಜನ ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.

ವರದಿ - ಶಿವರಾಮ ಅಸುಂಡಿ
Published by:HR Ramesh
First published: