• Home
  • »
  • News
  • »
  • district
  • »
  • Coronavirus: ಕೊರೊನಾ, ಪ್ರಕೃತಿ ವಿಕೋಪ, ಬಡತನ, ನಿರುದ್ಯೋಗ... ಎಲ್ಲವೂ ಸೇರಿ ಈ ಕುಟುಂಬದ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ !

Coronavirus: ಕೊರೊನಾ, ಪ್ರಕೃತಿ ವಿಕೋಪ, ಬಡತನ, ನಿರುದ್ಯೋಗ... ಎಲ್ಲವೂ ಸೇರಿ ಈ ಕುಟುಂಬದ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ !

ಸಂತ್ರಸ್ತ ಕುಟುಂಬ

ಸಂತ್ರಸ್ತ ಕುಟುಂಬ

ಮರ ಬಿದ್ದು ಮನೆ ಹಾನಿಗೊಳಗಾದ ಬಳಿಕ ಈ ಕುಟುಂಬ ಇತರೆಡೆ ತೆರಳಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ಇದರ ಮಧ್ಯೆ ಕೊರೋನಾ ಮಹಾಮಾರಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸವೂ ಇಲ್ಲದಂತಾಗಿದೆ. ಕೈಯಲ್ಲಿ ದುಡ್ಡಿಲ್ಲದೆ ಮನೆ ಬಾಡಿಗೆಯನ್ನೂ ಕಟ್ಟಲಾಗದ ಪರಿಸ್ಥಿತಿ. `ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷೀಲಿ...' ಎಂಬಂತೆ ಈ ಬಡ ಕುಟುಂಬಕ್ಕೆ ದುಡಿದು ನೆಮ್ಮದಿಯಿಂದ ಬದುಕುವ ಅವಕಾಶವನ್ನೂ ವಿಧಿ ಕಿತ್ತುಕೊಂಡಿದೆ.

ಮುಂದೆ ಓದಿ ...
  • Share this:

ಪುತ್ತೂರು (ಏಪ್ರಿಲ್ 09): ಆಗಲೋ ಈಗಲೋ ಬೀಳುವಂತಿರುವ ಮಣ್ಣಿನ ಗೋಡೆಯ ಮನೆ, ವಿದ್ಯುತ್ ಸಂಪರ್ಕವೇ ಇಲ್ಲದೆ ದೀಪದ ಬೆಳಕಿನಲ್ಲಿ ಮನೆಯ ಕತ್ತಲು ಹೋಗಲಾಡಿಸುವ ಈ ಕುಟುಂಬಕ್ಕೆ ದೇಹಬಾಧೆಯನ್ನು ತೀರಿಸಲು ಶೌಚಾಲಯದ ವ್ಯವಸ್ಥೆಯೂ ಇಲ್ಲದಂತಹ ಪರಿಸ್ಥಿತಿ. ರಸ್ತೆಯ ಸೌಕರ್ಯವಿಲ್ಲದೆ ಸುಮಾರು ಒಂದೂವರೆ ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕಾದಂತಹ ದುಃಸ್ಥಿತಿ. ಇದು ಬುದ್ಧಿವಂತರ ಜಿಲ್ಲೆಯೆಂದೆನಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ವಾಸಿಸುತ್ತಿರುವ ಮೂಲಭೂತ ಸೌಲಭ್ಯ ವಂಚಿತ ಕುಟುಂಬವೊಂದರ ಕಣ್ಣೀರ ಕಥೆ.


ಪತಿ ನಾರಾಯಣ ನಾಯ್ಕ್, ಪತ್ನಿ ಹರಿಣಾಕ್ಷಿ ಮತ್ತು ಓರ್ವ ಪುತ್ರಿ ಪ್ರತಿಜ್ಞಾ ಅವರನ್ನು ಒಳಗೊಂಡಿರುವ ಬಡ ಕುಟುಂಬಕ್ಕೆ ಕೂಲಿ ಕೆಲಸವೇ ಜೀವನಾಧಾರ. ತಂದೆ-ತಾಯಿ ಕೂಲಿ ಕೆಲಸ ಮಾಡಿ ಸಂಪಾದಿಸಿದರೆ ಅಂದಿನ ದಿನಕ್ಕೆ ಹೊಟ್ಟೆಗೆ ಯಾವುದೇ ತತ್ವಾರ ಇರುವುದಿಲ್ಲ. ನಿತ್ಯದ ದುಡಿಮೆಯಿಂದ ಒಂದಿಷ್ಟು ಉಳಿತಾಯ ಮಾಡಿ ತಮ್ಮ ಪುತ್ರಿಗೆ ಶಿಕ್ಷಣ ನೀಡುತ್ತಿದ್ದಾರೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ತರಗತಿಯಲ್ಲಿರುವ ಪ್ರತಿಜ್ಞಾಗೆ ಆನ್‍ಲೈನ್ ಮೂಲಕ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ. ಆದರೆ, ಮನೆಗೆ ವಿದ್ಯುತ್ ಇಲ್ಲದಿದ್ದರೆ ಮೊಬೈಲ್ ಚಾರ್ಚ್ ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.


ಈ ಪರಿಸ್ಥಿತಿಯ ನಡುವೆ ಪುತ್ತೂರು ತಾಲೂಕಿನಾದ್ಯಂತ ಸುರಿದ  ಭಾರೀ ಮಳೆಯೂ ಈ ಕುಟುಂಬದ ಗಾಯಕ್ಕೆ ಬರೆ ಎಳೆದಿದೆ.  ಭಾರೀ ಮಳೆ-ಗಾಳಿಗೆ ಈ ಬಡ ಕುಟುಂಬದ ಮನೆಯ ಮೇಲೆ ಮರವೊಂದು ಬಿದ್ದ ಕಾರಣ ಮನೆಯ ಛಾವಣಿ ಭಾಗಶಃ ಹಾನಿಗೊಳಗಾಗಿದೆ. ಈ ಸಂದರ್ಭದಲ್ಲಿ ತಾಯಿ, ಮಗಳು ಮನೆಯೊಳಗಡೆ ಇದ್ದರೂ,ಯಾವುದೇ ಹಾನಿಯಾಗದೆ ಅಪಾಯದಿಂದ ಪಾರಾಗಿದ್ದರು. ಇದಾದ ಬಳಿಕ ಸ್ಥಳೀಯ  ಪಂಚಾಯತ್‍ನವರು ಬಂದು ಮನೆಯ ಫೋಟೋ ತೆಗೆದುಕೊಂಡು ಹೋದರು. ಮನೆ ಹಾನಿಗೆ ಸರಕಾರದಿಂದ ಪರಿಹಾರ ಸಿಗುತ್ತದೆ ಎಂದೆಲ್ಲಾ ಹೇಳಿ ಹೋದರು. ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರಕುವುದೆಂಬ ನಿರೀಕ್ಷೆಯಲ್ಲಿ ಈ ಬಡ ಕುಟುಂಬ ದಿನ ಲೆಕ್ಕ ಹಾಕಲಾರಂಭಿಸಿತು. ಈ ಘಟನೆ ನಡೆದು ಸುಮಾರು ಎರಡೂವರೆ ತಿಂಗಳಾಗುತ್ತಾ ಬಂದಿದ್ದು, ಇದುವರೆಗೂ ಚಿಕ್ಕಾಸೂ ಸರಕಾರದಿಂದ ದೊರಕಲಿಲ್ಲ.


ಇದನ್ನೂ ಓದಿhttps://kannada.news18.com/news/coronavirus-latest-news/new-chinese-vaccine-sinopharm-gets-who-emergency-approval-sktv-561999.html


ಮರ ಬಿದ್ದು ಮನೆ ಹಾನಿಗೊಳಗಾದ ಬಳಿಕ ಈ ಕುಟುಂಬ ಇತರೆಡೆ ತೆರಳಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ಇದರ ಮಧ್ಯೆ ಕೊರೋನಾ ಮಹಾಮಾರಿಯಿಂದಾಗಿ ದುಡಿಯುವ ಕೈಗಳಿಗೆ ಕೆಲಸವೂ ಇಲ್ಲದಂತಾಗಿದೆ. ಕೈಯಲ್ಲಿ ದುಡ್ಡಿಲ್ಲದೆ ಮನೆ ಬಾಡಿಗೆಯನ್ನೂ ಕಟ್ಟಲಾಗದ ಪರಿಸ್ಥಿತಿ. `ಹೋದೆಯಾ ಪಿಶಾಚಿ ಅಂದರೆ ಬಂದೆಯಾ ಗವಾಕ್ಷೀಲಿ...' ಎಂಬಂತೆ ಈ ಬಡ ಕುಟುಂಬಕ್ಕೆ ದುಡಿದು ನೆಮ್ಮದಿಯಿಂದ ಬದುಕುವ ಅವಕಾಶವನ್ನೂ ವಿಧಿ ಕಿತ್ತುಕೊಂಡಿದೆ. ಅತ್ತ ಮನೆಯೂ ದುರಸ್ತಿಯಾಗದೆ, ಇತ್ತ ಬಾಡಿಗೆ ಮನೆಯ ಬಾಡಿಗೆ ಕಟ್ಟಲು ದುಡಿದು ಸಂಪಾದಿಸುವ ಎಂದರೆ ಕೆಲವೂ ಇಲ್ಲದಂತಾಗಿದೆ.


ಮಳೆಯಿಂದ ಕಡು ಬಡವರ ಮನೆ ಹಾನಿಗೊಳಗಾಗಿದ್ದರೂ ಅದಕ್ಕೆ ತಕ್ಷಣ ಪರಿಹಾರ ಒದಗಿಸಿಕೊಡುವಂತಹ ಮಾನವೀಯತೆ ಅಧಿಕಾರಿ ವರ್ಗದಲ್ಲಿ ಇಲ್ಲದಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಆ ಮನೆಯನ್ನು ಕಂಡಾಗಲೇ ಬಡತನದ ಭೀಕರತೆ ಸಾಕ್ಷಿಯನ್ನು ಹೇಳುತ್ತದೆ. ಆದರೆ, ಪಂಚಾಯತ್‍ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಫೋಟೋ ತೆಗೆದುಕೊಂಡು ಹೋದವರ ಪತ್ತೆಯೇ ಇಲ್ಲದಂತಾಗಿದೆ. ಈ ಕುರಿತು ವಿಚಾರಿಸಿದರೆ ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬ ಅಧಿಕಾರಿಯ ಹೆಗಲ ಮೇಲೆ ಜಾರಿಸಿಬಿಡುತ್ತಿದ್ದಾರೆ. ಜನಪ್ರತಿನಿಧಿಗಳಿಗೂ ಈ ಕುಟುಂಬದ ಕಣ್ಣೀರ ಕಥೆ ಕಣ್ಣೆದುರು ಬಾರದೇ ಇರುವುದು ವಿಷಾದನೀಯವೇ ಸರಿ...!


ಸಂಘನೆಯೊಂದರ ಪ್ರಮುಖರೋರ್ವರು ಈ ಕುಟುಂಬದ ನರಕಯಾತನೆಯನ್ನು ಕಂಡು ಜಿಲ್ಲಾಧಿಕಾರಿ, ಎಸ್ಪಿಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಎಸ್ಪಿ ಅವರು ತಕ್ಷಣವೇ ಪುತ್ತೂರು ನಗರ ಠಾಣೆ ಅಧಿಕಾರಿಗೆ ದೂರವಾಣಿ ಮಾಡಿ ಕ್ರಮಕ್ಕೆ ಸೂಚಿಸಿದ್ದರು. ಈ ಕುಟುಂಬವನ್ನು ಬೇರೆಡೆ ಸ್ಥಳಾಂತರಿಸಲಾಯಿತಾದರೂ ಅದೇನೂ ಶಾಶ್ವತ ಪರಿಹಾರವಾಗಿರಲಿಲ್ಲ. ಅಂದಿನಿಂದ ಇಂದಿನವರೆಗೂ ಈ ಕುಟುಂಬ ಮನೆ ರಿಪೇರಿಗಾಗಿ ಸರಕಾರದ ಸಹಾಯದ ನಿರೀಕ್ಷೆಯಲ್ಲೇ ದಿನಗಳೆಯುತ್ತಿದೆ.

Published by:Soumya KN
First published: