• Home
  • »
  • News
  • »
  • district
  • »
  • Corona Effect: ಟೊಮ್ಯಾಟೋ ಆಯ್ತು, ಈಗ ಎಲೆಕೋಸು...ಹೊಲದಲ್ಲೇ 50 ಟನ್ ಎಲೆಕೋಸು ನಾಶ ಮಾಡಿದ ರೈತ

Corona Effect: ಟೊಮ್ಯಾಟೋ ಆಯ್ತು, ಈಗ ಎಲೆಕೋಸು...ಹೊಲದಲ್ಲೇ 50 ಟನ್ ಎಲೆಕೋಸು ನಾಶ ಮಾಡಿದ ರೈತ

ಟ್ರಾಕ್ಟರ್ ಓಡಿಸಿ ಬೆಳೆ ನಾಶಪಡಿಸುತ್ತಿರುವ ರೈತ

ಟ್ರಾಕ್ಟರ್ ಓಡಿಸಿ ಬೆಳೆ ನಾಶಪಡಿಸುತ್ತಿರುವ ರೈತ

ತೋಟದಲ್ಲೆ ತರಕಾರಿ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ, ಕೋಲಾರ ತಾಲೂಕಿನ  ವಕ್ಕಲೇರಿ  ಗ್ರಾಮ ಪಂಚಾಯ್ತಿ ಅಧ್ಯಕ್ಷ್ಯ ಮುರಳಿ ಎನ್ನುವರು,  ತಮ್ಮ ಎರಡು ಎಕರೆಯ ಎಲೆಕೋಸು ಬೆಳೆಯನ್ನ,  ತೋಟದಲ್ಲಿ ಟ್ರಾಕ್ಟರ್ ವಾಹನದ ರೋಟರ್ ಸಹಾಯದಿಂದ ಸಮೃದ್ದವಾದ ಬೆಳೆನಾಶ ಪಡಿಸಿದ್ದಾರೆ.

  • Share this:

ಕೋಲಾರ: ಕೊರೊನಾ ಲಾಕ್ ಡೌನ್ ನಿಂದ ಚಿನ್ನದನಾಡು ಕೋಲಾರದ ರೈತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕಳೆದ ವರ್ಷದ ಲಾಕ್ ಡೌನ್ ನಿಂದ ಲಕ್ಷ ಲಕ್ಷ ಬಂಡವಾಳ ಕಳೆದುಕೊಂಡಿದ್ದ, ರೈತರು ಇದೀಗ ಕಂಗಾಲಾಗಿದ್ದಾರೆ,  ಕೊರೊನಾ ಎರಡನೇ ಅಲೆ  ಭೀಕರತೆ ಕಾರಣ ನೆರೆಯ ರಾಜ್ಯಗಳು ಲಾಕ್ ಡೌನ್ ಹಾಗು ಸೆಮಿ ಲಾಕ್ ಡೌನ್ ಮೊರೆ ಹೋಗಿದೆ, ಹೀಗಾಗಿ ಸರಕು ಸೇವೆ ಸಾಗಾಟಕ್ಕು ಇದು ಹೊಡೆತ ಬಿದ್ದಿದ್ದು, ಸಾಮಾನ್ಯವಾಗಿ ಬೇಡಿಕೆ ಕುಸಿತದಿಂದ  ಬೆಲೆಯೂ ಇಳಿಕೆಯಾಗಿದೆ ತರಕಾರಿಯನ್ನ ಕೇಳೋರೆ ಇಲ್ಲದಂತಾಗಿದೆ.


ಈಗಾಗಲೇ ಕೋಲಾರ ಜಿಲ್ಲೆಯಲ್ಲಿ  ಬೆಲೆಯಿಲ್ಲದೆ ಟೊಮೆಟೊ ವನ್ನ ರಸ್ತೆ ಬದಿ ಸುರಿಯುತ್ತಿರೊ ರೈತರು, ಇದೀಗ ತೋಟದಲ್ಲೆ ತರಕಾರಿ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ, ಕೋಲಾರ ತಾಲೂಕಿನ  ವಕ್ಕಲೇರಿ  ಗ್ರಾಮ ಪಂಚಾಯ್ತಿ ಅಧ್ಯಕ್ಷ್ಯ ಮುರಳಿ ಎನ್ನುವರು,  ತಮ್ಮ ಎರಡು ಎಕರೆಯ ಎಲೆಕೋಸು ಬೆಳೆಯನ್ನ,  ತೋಟದಲ್ಲಿ ಟ್ರಾಕ್ಟರ್ ವಾಹನದ ರೋಟರ್ ಸಹಾಯದಿಂದ ಸಮೃದ್ದವಾದ ಬೆಳೆನಾಶ ಪಡಿಸಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನಲೆ,  ತಮಿಳುನಾಡು ಮತ್ತು ಆಂಧ್ರದ ದಳ್ಳಾಳಿಗಳು ವ್ಯಾಪಾರಕ್ಕೆ ಬಾರದ ಹಿನ್ನಲೆ ಎಲೆಕೋಸು  ರವಾನೆಯಾಗುತ್ತಿಲ್ಲ.


ಇದನ್ನೂ ಓದಿ: https://kannada.news18.com/news/state/bengaluru-urban-5-police-staff-were-felicitated-and-welcomed-warmly-in-yelahanka-bengaluru-on-rejoining-duty-after-defeating-corona-infection-sktv-564943.html


ಜೊತೆಗೆ ಹೋಟೆಲ್, ಡಾಬಾ, ತಿಂಡಿ ತಿನಿಸುಗಳ ಮಳಿಗೆಗಳು ಬಾಗಿಲು ಮುಚ್ಚಿರುವ ಕಾರಣ ಎಲೆಕೋಸು ತರಕಾರಿಗೆ ಬೇಡಿಕೆಯಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 3 ರಿಂದ 4 ರೂಪಾಯಿ ಸಿಗುವುದು ಕಷ್ಟಕರವಾಗಿದೆ. ಹಾಗೆ ತೋಟದಲ್ಲಿ ಬಿಟ್ಟರೆ ಹುಳು ಬಾದೆಯಿಂದ ಅಕ್ಕ ಪಕ್ಕದ ಬೆಳೆಗಳಿಗೂ ಕೀಟ ಬಾದಿಸುವ ಭೀತಿಯಿಂದ,  50  ಟನ್ ಗಿಂತ ಹೆಚ್ಚು ತೂಕದ ಬೆಳೆಯನ್ನ ರೈತನೇ ನಾಶ ಪಡಿಸಿದ್ದಾನೆ, ಇದೇ ವೇಳೆ ಮಾತನಾಡಿರುವ ರೈತರು,  ರಾಜ್ಯ ಸರ್ಕಾರ ತರಕಾರಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.


ಸಂಕಷ್ಟದಲ್ಲಿದ್ದಾರೆ ಹೂ ಬೆಳೆಗಾರರುಕೊರೊನಾ ಸೆಮಿ ಲಾಕ್ ಡೌನ್ ಹಿನ್ನಲೆ, ಕೋಲಾರ ಜಿಲ್ಲೆಯಲ್ಲಿ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಅತಿಹೆಚ್ಚು ಹೂವು ಬೆಳೆಯುವ ಬೆಳೆಗಾರರಿದ್ದು, ಚೆಂಡು ಹೂ, ಸೇವಂತಿಗೆ, ಮಲ್ಲಿಗೆ, ಕನಕಾಂಬರ ಹೂವಿಗೆ ಬೇಡಿಕೆ ಕುಸಿತದಿಂದ ಬೆಲೆ ಪಾತಾಳಕ್ಕೆ ಕುಸಿದಿದೆ. ಗಿಡಗಳಲ್ಲಿ ಹೂ ಹಾಗೆ ಬಿಟ್ಟಲ್ಲಿ ಹೂಗಿಡ ಬೆಳವಣಿಗೆ ಕುಂಠಿತ ಆಗುವ ಭೀತಿ ಹಿನ್ನಲೆ, ಪ್ರತಿದಿನ ಹೂಗಳನ್ನ ಬಿಡಿಸಿಕೊಂಡು ಸಿಕ್ಕ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.


ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಂಗವಾದಿ ಗ್ರಾಮದಲ್ಲಿ, ರೈತ ನಂದೀಶರೆಡ್ಡಿ ಎನ್ನುವವರು ತಾವು ಬೆಳೆದ  ಚೆಂಡು ಹೂವನ್ನು  ಟ್ರಾಕ್ಟರ್ ಸಹಾಯದಿಂದ ನಾಶ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು, ಇದೀಗ ಹೂಗಳನ್ನ ಯಾರು ಕೊಳ್ಳುತ್ತಿಲ್ಲ ಹಾಗಾಗಿ, ಹೂವು ಬೆಳೆಗಾರರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಲಿ ಎಂದು ರೈತರು ಆಗ್ರಹಿಸಿದ್ದಾರೆ.


ಒಟ್ಟಿನಲ್ಲಿ ಕೊರೊನಾ ತಡೆಗಟ್ಟಲು ಲಾಕ್ ಡೌನ್ ಅತಿ ಅವಶ್ಯಕ‌ ಆಗಿದ್ದರು, ದುಡಿಯುವ ಕೈಗಳನ್ನ ನಂಬಿ ಲಕ್ಷ ಲಕ್ಷ ಬಂಡವಾಳ ಹಾಕಿದ್ದ ಕೋಲಾರದ ರೈತರೀಗ, ಸಾಲು ಸಾಲು ನಷ್ಟ ನೋಡುವಂತಾಗಿದೆ, ರಾಜ್ಯ ಸರ್ಕಾರ  ಇನ್ನಾದರು ತರಕಾರಿ ಹಾಗು ಹೂ ಬೆಳೆಗಾರರಿಗೆ ಸೂಕ್ತ  ಪರಿಹಾರ ನೀಡಲಿ ಎಂದು ರೈತರು ಆಗ್ರಹಿಸಿದ್ದಾರೆ.

Published by:Soumya KN
First published: