• Home
  • »
  • News
  • »
  • district
  • »
  • ಕೊಡಗು: ಊಟ ತಿಂಡಿ ಸರಿ ಇಲ್ಲ ಎಂದು ಕೋವಿಡ್ ಕೇರ್​ನಲ್ಲಿ ಗಲಾಟೆ ಮಾಡಿದ ಸೋಂಕಿತರು

ಕೊಡಗು: ಊಟ ತಿಂಡಿ ಸರಿ ಇಲ್ಲ ಎಂದು ಕೋವಿಡ್ ಕೇರ್​ನಲ್ಲಿ ಗಲಾಟೆ ಮಾಡಿದ ಸೋಂಕಿತರು

ವ್ಯರ್ಥವಾದ ಊಟ.

ವ್ಯರ್ಥವಾದ ಊಟ.

ಹಿಂದೆ ಹೊರಗಿನಿಂದ ಕೋವಿಡ್ ಕೇರ್ ಗಳಿಗೆ ಊಟ ತಿಂಡಿ ಪಾರ್ಸಲ್ ಮಾಡಿ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಸೋಂಕಿತರಿಗೆ ಊಟ ತಿಂಡಿ ಸಾಕಾಗುತ್ತಿಲ್ಲ ಎಂಬ ದೂರುಗಳು ಬಂದಿದ್ದರಿಂದ ಜಿಲ್ಲಾಡಳಿತವೇ ಸ್ವತಃ ಅಡುಗೆ ಮಾಡಿಸಿ ಕೊಡಲು ಆರಂಭಿಸಿತ್ತು.

  • Share this:

ಕೊಡಗು : ಕೊಡಗು ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಎಷ್ಟೇ ಜಾಸ್ತಿಯಾಗುತ್ತಿದ್ದರು, ಜಿಲ್ಲಾಡಳಿತ ಎಲ್ಲೆಡೆ ಕೊವಿಡ್ ಕೇರ್ ಸೆಂಟರ್ ಗಳನ್ನು ತೆರೆದು ಎಲ್ಲರಿಗೂ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದೆ. ಎಲ್ಲೆಡೆ ಉತ್ತಮ ಆಹಾರವನ್ನು ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಎಲ್ಲವೂ ಚೆನ್ನಾಗಿದ್ದರೂ ಊಟ ತಿಂಡಿ ಚನ್ನಾಗಿಲ್ಲ ಎಂದು ಗಲಾಟೆ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ ಎನ್ನೋ ಅನುಮಾನ ಮೂಡಿದೆ. ಹೌದು ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿರುವ ನವೋದಯ ವಸತಿ ಶಾಲೆಯಲ್ಲಿ ತೆರೆದಿರುವ ಕೊವಿಡ್ ಕೇರ್ ಸೆಂಟರ್ ನಲ್ಲಿ ಸೋಮವಾರ ಬೆಳಿಗ್ಗೆ ತಿಂಡಿಗೆ ಕೊಟ್ಟಿದ್ದ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ. ಹೀಗೆ ಮಾಡಿದರೆ ನಾವು ಚೇತರಿಸಿಕೊಳ್ಳೋದು ಹೇಗೆ ಎಂದು ಸೋಂಕಿತರು ವೈದ್ಯರ ಮೇಲೆಯೇ ಗಲಾಟೆ ಮಾಡಿದ್ದರು.


ವಯಸ್ಸಾದವರು ಇದ್ದಾರೆ, ಅಂತವರೆಲ್ಲ ಹೇಗೆ ಚೇತರಿಸಿಕೊಳ್ಳೋದು. ನಾವೇನು ನಮ್ಮ ನಾಲ್ಕು ಜನರಿಗಾಗಿ ಕೇಳುತ್ತಿಲ್ಲ ಎಂದು ಕೊವಿಡ್ ಕೇರ್ ಸೆಂಟರ್ ನಲ್ಲಿ ಇರುವ ವೈದ್ಯರೊಂದಿಗೆ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡುವುದನ್ನು ವಿಡಿಯೋ ಮಾಡಿ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಹಾಳಾಗಿರುವ ಉಪ್ಪಿಟ್ಟಿನ ಪ್ಯಾಕ್ ಗಳ ಫೋಟೋಗಳನ್ನು ವೈರಲ್ ಮಾಡಿದ್ದರು. ಈ ಕುರಿತು ಕೊವಿಡ್ ಕೇರ್ ಸೆಂಟರ್ ನ ಉಸ್ತುವಾರಿ ಒತ್ತಿರುವ ಕೊಡಗು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ಅವರನ್ನು ಕೇಳಿದಾಗ ಕಥೆ ಬೇರೆದೇ ಇರೋದು ಗೊತ್ತಾಗಿದೆ.


ಹಿಂದೆ ಹೊರಗಿನಿಂದ ಕೋವಿಡ್ ಕೇರ್ ಗಳಿಗೆ ಊಟ ತಿಂಡಿ ಪಾರ್ಸಲ್ ಮಾಡಿ ಸೋಂಕಿತರಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಸೋಂಕಿತರಿಗೆ ಊಟ ತಿಂಡಿ ಸಾಕಾಗುತ್ತಿಲ್ಲ ಎಂಬ ದೂರುಗಳು ಬಂದಿದ್ದರಿಂದ ಜಿಲ್ಲಾಡಳಿತವೇ ಸ್ವತಃ ಅಡುಗೆ ಮಾಡಿಸಿ ಕೊಡಲು ಆರಂಭಿಸಿತ್ತು. ನಾವು ಬೆಳಿಗ್ಗೆ ಸೋಂಕಿತರಿಗೆ ಉಪ್ಪಿಟ್ಟು ಕೊಟ್ಟಿರದೆ, ಚಿತ್ರಾನ್ನ ಕೊಟ್ಟಿದ್ದೆವು. ಆದರೆ ಕೊಟ್ಟಿರುವ ಉಪ್ಪಿಟ್ಟು ಸಂಪೂರ್ಣ ಉಪ್ಪಾಗಿದೆ ಎಂದು ಗಲಾಟೆ ಮಾಡಿದ್ದಾರೆ.


ಚಿತ್ರಾನ್ನಕ್ಕೆ ಹುಳಿಯನ್ನು ಸರಿಯಾಗಿ ಮಿಕ್ಸ್ ಮಾಡದಿದ್ದರಿಂದ ಕೆಲವು ಪ್ಯಾಕ್ ಗಳಲ್ಲಿ ಹುಳಿ ಜಾಸ್ತಿಯಾಗಿದ್ದರೆ, ಕೆಲವು ಪ್ಯಾಕ್ ಗಳಲ್ಲಿ ಸಪ್ಪೆಯಾಗಿತ್ತು ಎನ್ನೋದು ಸತ್ಯ. ಇದು ಗೊತ್ತಾದ ಕೂಡಲೇ, ಅದನ್ನು ಬದಲಾಯಿಸಿ ಚಪಾತಿ ಮತ್ತು ಕೋಸು ಪಲ್ಯ ಕೊಟ್ಟಿದ್ದೇವೆ. ಇಷ್ಟಾದರೂ ಕೆಲವರು ಉದ್ದೇಶ ಪೂರ್ವಕವಾಗಿ ವೈದ್ಯರ ಕೊಠಡಿ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೆ ಯಾವುದೋ ಸಂದರ್ಭದ ಉಪ್ಪಿಟ್ಟಿನ ಪ್ಯಾಕ್ ಗಳನ್ನು ವೈರಲ್ ಮಾಡಿ ಕೆಟ್ಟ ಹೆಸರು ತರುವ ಹುನ್ನಾರ ಮಾಡಿದ್ದಾರೆ ಎನ್ನುತ್ತಿದ್ದಾರೆ.


ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೂಡ ನಾನು ಪದೇ ಪದೇ ಕೋವಿಡ್ ಕೇರ್ ಸೆಂಟರ್ ಗೆ ಹೋಗಿ ಪರಿಶೀಲಿಸುತ್ತಿದ್ದೇನೆ. ಎಲ್ಲವೂ ಚೆನ್ನಾಗಿದ್ದರೂ ಒಳ್ಳೆಯ ಕೆಲಸವನ್ನು ಗುರುತ್ತಿಸುತ್ತಿಲ್ಲ. ಕೆಲವು ನಾಲ್ಕು ಜನರು ಪದೇ ಪದೇ ಸುಳ್ಳು ವಿಷಯಗಳನ್ನು ರೈಸ್ ಮಾಡಿಸುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದಿದ್ದಾರೆ.


ಭಾರತದಲ್ಲಿ ಕೊರೋನಾ ಅಬ್ಬರ:ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷಕ್ಕಿಂತಲೂ ಕಡಿಮೆ ಜನ ಸೋಂಕು ಪೀಡಿತರಾಗುತ್ತಿದ್ದಾರೆ.


ಇದನ್ನೂ ಓದಿ: Karnataka LockDown: ಕೊರೋನಾ ಅಬ್ಬರ; ರಾಜ್ಯದಲ್ಲಿ ಮೇ.24 ರಿಂದ ಮತ್ತೆ 14 ದಿನಗಳ ಲಾಕ್​ಡೌನ್ ಸಾಧ್ಯತೆ?


ಭಾನುವಾರ 2,81,386 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,78,741 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,49,65,463ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಭಾನುವಾರ 4,106 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,74,390ಕ್ಕೆ ಏರಿಕೆ ಆಗಿದೆ.


ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.

Published by:MAshok Kumar
First published: