ಕೊರೋನಾ ರೋಗಿಗಳ ನಿರ್ಲಕ್ಷ್ಯ ಆರೋಪ ; ಚಿಕಿತ್ಸೆ ಸಿಗದೆ ಬೇಸತ್ತು ಸಾರ್ವಜನಿಕ ವಾಹನದಲ್ಲಿ ತೆರಳಿದ ಸೋಂಕಿತರು

ಹೋಂ ಐಸೋಲೇಷನ್ ಗೆ ಪ್ರತ್ಯೇಕ ವಾಹನದಲ್ಲಿ ಕಳುಹಿಸದ ಕಾರಣ ಇಬ್ಬರು ರೋಗಿಗಳು ತಮ್ಮ ಸಂಬಂಧಿಕರೊಂದಿಗೆ ಸಾರ್ವಜನಿಕ ವಾಹನದಲ್ಲಿಯೇ ತಮ್ಮೂರಿಗೆ ತೆರಳಿದ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

news18-kannada
Updated:July 31, 2020, 9:37 AM IST
ಕೊರೋನಾ ರೋಗಿಗಳ ನಿರ್ಲಕ್ಷ್ಯ ಆರೋಪ ; ಚಿಕಿತ್ಸೆ ಸಿಗದೆ ಬೇಸತ್ತು ಸಾರ್ವಜನಿಕ ವಾಹನದಲ್ಲಿ ತೆರಳಿದ ಸೋಂಕಿತರು
ಪ್ರಾತಿನಿಧಿಕ ಚಿತ್ರ
  • Share this:
ವಿಜಯಪುರ(ಜು. 31): ಈ ಘಟನೆ ಕೊರೊನಾ ಸೋಂಕಿತರ ಬಗ್ಗೆ ಆರೋಗ್ಯ ಇಲಾಖೆ ನಡೆದುಕೊಳ್ಳುತ್ತಿರುವ ವರ್ತನೆಗೆ ಸಾಕ್ಷಿ ಎಂಬಂತಿದೆ. ಚಿಕಿತ್ಸೆ ಸಿಗದೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ಸುಸ್ತಾದ ರೋಗಿಗಳು ತಮ್ಮ ಸಂಬಂಧಿಕರೊಂದಿಗೆ ಸಾರ್ವಜನಿಕ ವಾಹನಗಳಲ್ಲಿಯೇ ತಮ್ಮೂರಿಗೆ ತೆರಳಿರುವ ಘಟನೆ ಈಗ ಆತಂಕ ಮೂಡಿಸಿದೆ.

ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ. ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಕೊರೋನಾ ಸೋಂಕಿತರು ಸಾರ್ವಜನಿಕರ ವಾಹನದಲ್ಲಿಯೇ ತಮ್ಮೂರಿಗೆ ತೆರಳಿದ ಆತಂಕಕಾರಿ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಕೊರೋನಾ ಪಾಸಿಟಿವ್ ಟೆಸ್ಟ್​​ಗೆ ಕರೆಯಿಸಿದ ಅಧಿಕಾರಿಗಳು ನಂತರ ಅವರನ್ನು ಚಿಕಿತ್ಸೆಗೆ ಪ್ರತ್ಯೇಕ ವಾನಹನದಲ್ಲಿ ಕಳುಹಿಸಿದ ಕಾರಣ ರೋಗಿಗಳು ಸುಸ್ತಾಗಿದ್ದಾರೆ.  ಹೋಂ ಐಸೋಲೇಷನ್ ಗೆ ಪ್ರತ್ಯೇಕ ವಾಹನದಲ್ಲಿ ಕಳುಹಿಸದ ಕಾರಣ ಇಬ್ಬರು ರೋಗಿಗಳು ತಮ್ಮ ಸಂಬಂಧಿಕರೊಂದಿಗೆ ಸಾರ್ವಜನಿಕ ವಾಹನದಲ್ಲಿಯೇ ತಮ್ಮೂರಿಗೆ ತೆರಳಿದ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ರ್ಯಾಪಿಡ್ ಟೆಸ್ಟಿಂಗ್ ನಡೆಯುತ್ತಿದೆ.  ಅಂಜುಟಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ಹೆಂಡತಿ ಮತ್ತು ಮಗಳನ್ನು ಟೆಸ್ಟ್ ಗೆ ಬರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ತಾಯಿ ಮತ್ತು ಮಗಳು ಇಂಡಿ ತಾಲೂಕಾ ಆಸ್ಪತ್ರೆಗೆ ಬಂದಿದ್ದರು.

ಇದೇ ವೇಳೆ ರ‍್ಯಾಪಿಡ್ ಟೆಸ್ಟಿಂಗ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ ಇಟ್ಟುಕೊಂಡಿದ್ದ ತಾಲೂಕು ವೈದ್ಯಾಧಿಕಾರಿ ಡಾ. ಅರ್ಚನಾ ಕುಲಕರ್ಣಿ ಮತ್ತು ವೈದ್ಯಾಧಿಕಾರಿಗಳು ಅದರಲ್ಲಿ ಬ್ಯೂಸಿಯಾಗಿದ್ದರು. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರನ್ನು ಕರೆಯಿಸಿ ಲ್ಯಾಬ್ ಉದ್ಘಾಟನೆ ಮಾಡಿಸಿದ್ದರು.

ಇದನ್ನೂ ಓದಿ : ಬಕ್ರೀದ್ ಹಬ್ಬಕ್ಕೆ ತಂದಿದ್ದ 45 ಜಾನುವಾರುಗಳ ರಕ್ಷಣೆ - ನಾಲ್ಕು ವಾಹನ ಜಪ್ತಿ, ಐವರು ಪೊಲೀಸರ ವಶಕ್ಕೆ

ಈ ಸಂದರ್ಭದಲ್ಲಿ ಟೆಸ್ಟ್ ಮಾಡಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ. ಆಗ, ಅಲ್ಲಿಯೇ ಚಿಕಿತ್ಸೆಗೆ ಬಂದಿದ್ದ ಇಂಡಿ ಪಟ್ಟಣದ ವ್ಯಕ್ತಿಯೊಬ್ಬನ ಆರೋಗ್ಯ ವಿಚಾರಿಸಿದಾಗ ತನಗೆ ಎರಡು ದಿನಗಳಿಂದ ಜ್ವರ ಇದೆ. ಹುಷಾರಿಲ್ಲ ಎಂದಿದ್ದಾರೆ. ಹಾಗಾದರೆ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ಆತನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೇ ವೇಳೆ ಅಂಜುಟಗಿಯಿಂದ ಬಂದಿದ್ದ ಮಗಳಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಆದರೆ, ಆಕೆಯ ತಾಯಿಗೆ ನೆಗೆಟಿವ್ ಬಂದಿದೆ.

ಈ ಸಂದರ್ಭದಲ್ಲಿ ಇಂಡಿ ತಾಲೂಕಾಧಿಕಾರಿಗಳು ಕೊರೋನಾ ಪಾಸಿಟಿವ್ ಬಂದವರನ್ನು ನಿರ್ಲಕ್ಷಿಸಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆಯನ್ನೂ ನೀಡಿಲ್ಲ.  ಮಾತ್ರೆಗಳನ್ನೂ ನೀಡಿಲ್ಲ.  ಅಸಿಂಪ್ಟೋಮೇಟಿಕ್ ಇದ್ದಿದ್ದರಿಂದ ಕ್ಯಾರೆ ಎಂದಿಲ್ಲ. ಬಳಿಕ ಕಾದು ಕಾದು ಸುಸ್ತಾದ ಸೋಂಕಿತ ಮಗಳು ಮತ್ತು ಆಕೆಯೊಂದಿಗೆ ಬಂದಿದ್ದ ತಾಯಿ ಹಾಗೂ ಇಂಡಿಯ ವ್ಯಕ್ತಿ ಸಾರ್ವಜನಿಕ ವಾಹನ ಟಂಟಂ ಹತ್ತಿ ತಮ್ಮ ಮನೆಗೆ ತೆರಳಿದ್ದಾರೆ.  ಇದು ಈಗ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂಡಿ ತಾಲೂಕು ಆರೋಗ್ಯಾಧಿಕಾರಿ ಡಾ. ಅರ್ಚನಾ ಕುಲಕರ್ಣಿ ಹಾಗೂ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published by: G Hareeshkumar
First published: July 31, 2020, 9:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading