ಒಂದರ ಹಿಂದೆ ಒಂದೊಂದಾಗಿ ಬರುತ್ತಿರುವ ಸೈಕ್ಲೋನ್; ಮುಸುಕಿನ ಜೋಳ ರೈತರು ಕಂಗಾಲು

ಮಳೆಯಿಂದ  ಮೇವು ಸಿಗದೆ  ಹೈನುಗಾರಿಕೆಗೆ  ತೊಂದರೆಯಾಗಲಿದೆ. ಇದರ ಜೊತೆ ಕ್ವಿಂಟಾಲ್  ಜೋಳದ  ಬೆಲೆ 2 ಸಾವಿರದಿಂದ 1350 ರೂಪಾಯಿಗೆ  ಕುಸಿದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ  ಗುರಿ ಮಾಡಿದೆ ಎಂದು ನೇರಳಘಟ್ಟ ಗ್ರಾಮದ ರೈತ ಚನ್ನಕೇಶವ ನ್ಯೂಸ್ 18 ಜೊತೆ ಅಳಲು ತೋಡಿಕೊಂಡಿದ್ದಾರೆ. 

ಮಳೆಯಿಂದಾಗಿ ಜಮೀನಿನಲ್ಲಿ ಹಾಳಾಗುತ್ತಿರುವ ಜೋಳ.

ಮಳೆಯಿಂದಾಗಿ ಜಮೀನಿನಲ್ಲಿ ಹಾಳಾಗುತ್ತಿರುವ ಜೋಳ.

  • Share this:
ದೊಡ್ಡಬಳ್ಳಾಪುರ: ಈ ವರ್ಷ ಉತ್ತಮ ಮಳೆಯಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಒಂದರ ಹಿಂದೆ  ಒಂದೊಂದಾಗಿ ಬರುತ್ತಿರುವ ಸೈಕ್ಲೋನ್​ಗಳು ಮುಸುಕಿನ ಜೋಳ ಬೆಳೆದ ರೈತರನ್ನು ಕಂಗಲಾಗಿಸಿದೆ. ಬೆಂಗಳೂರು ಗ್ರಾಮಾಂತರ  ಜಿಲ್ಲೆಯಲ್ಲಿ ಪ್ರಮುಖವಾಗಿ ರಾಗಿ ಮತ್ತು ಜೋಳವನ್ನು ಮಳೆ ನಂಬಿ ಬೆಳೆಯಲಾಗುತ್ತದೆ. ಈ ಬಾರಿ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಶೇಕಡಾ ನೂರರಷ್ಟು  ಬಿತ್ತನೆಯಾಗಿದ್ದು, ಒಳ್ಳೆಯ  ಫಸಲು ಸಹ ಬಂದಿತ್ತು. ಸದ್ಯ ಕೊಯ್ಲು ಕಾರ್ಯ ನಡೆಯುತ್ತಿದೆ. ಆದರೆ ಒಂದರ ಹಿಂದೆ ಒಂದೊಂದಾಗಿ ಬರುತ್ತಿರುವ  ಸೈಕ್ಲೋನ್​ಗಳು ಕೊಯ್ಲು ಕಾರ್ಯಕ್ಕೆ  ಅಡ್ಡಿಯಾಗಿದೆ. ಅಷ್ಟೇ ಅಲ್ಲದೇ ಕೊಯ್ಲಾದ ಬೆಳೆ ಸಂರಕ್ಷಣೆ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.

ವಾರದ ಹಿಂದೆ ನಿವಾರ್ ಈಗ ಬುರೇವಿ ನಂತರ ಅರ್ನಾಬ್  ಸೈಕ್ಲೋನ್  ಬರುವ ಸೂಚನೆ ಹವಾಮಾನ ಇಲಾಖೆ ನೀಡಿದೆ. ಎರಡು ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ  ಇದ್ದು ಆಗಾಗ ಜಡಿ  ಮಳೆ ಸುರಿಯುತ್ತಿದೆ. ಇದರಿಂದ ಮುಸುಕಿನ ಜೋಳ  ಬೆಳೆದ ರೈತರು ಕಂಗಲಾಗಿದ್ದಾರೆ. ಜಡಿ ಮಳೆಯಿಂದ  ಕಟಾವಿಗೆ  ಬಂದಿರುವ ಜೋಳ  ಕೊಯ್ಲು ಮಾಡಲು ಕಷ್ಟವಾಗಿದೆ. ಮಳೆಯಿಂದ ನೆಂದಿರುವ ಜೋಳ ಕೊಳೆಯುತ್ತಿದೆ. ಜೋಳ ಮೊಳಕೆ  ಹೊಡೆಯುತ್ತಿದೆ.

ಇದನ್ನು ಓದಿ: ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು, ಜೆಡಿಎಸ್ ಈ ಮಣ್ಣಿಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ; ಎಚ್.ಡಿ.ಕುಮಾರಸ್ವಾಮಿ

ಜೋಳವನ್ನು ರೈತರು ಪ್ರಮುಖವಾಗಿ ಜಾನುವಾರುಗಳ ಮೇವಿಗಾಗಿ ಮತ್ತು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಆದರೆ ಎಡಬಿಡದೆ  ಸುರಿಯುತ್ತಿರುವ  ಮಳೆಯಿಂದ  ಚೋಳದ ಮೇವು ಹೊಲದಲ್ಲಿ  ಕೊಳೆಯುವಂತಾಗಿದೆ.

ಬೇಸಿಗೆ ಸಮಯದಲ್ಲಿ  ಜೋಳದ ಮೇವು ಜಾನುವಾರುಗಳ ಆಹಾರವಾಗಿತ್ತು. ಆದರೆ ಮಳೆಯಿಂದ  ಮೇವು ಸಿಗದೆ  ಹೈನುಗಾರಿಕೆಗೆ  ತೊಂದರೆಯಾಗಲಿದೆ. ಇದರ ಜೊತೆ ಕ್ವಿಂಟಾಲ್  ಜೋಳದ  ಬೆಲೆ 2 ಸಾವಿರದಿಂದ 1350 ರೂಪಾಯಿಗೆ  ಕುಸಿದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ  ಗುರಿ ಮಾಡಿದೆ ಎಂದು ನೇರಳಘಟ್ಟ ಗ್ರಾಮದ ರೈತ ಚನ್ನಕೇಶವ ನ್ಯೂಸ್ 18 ಜೊತೆ ಅಳಲು ತೋಡಿಕೊಂಡಿದ್ದಾರೆ.
Published by:HR Ramesh
First published: