• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಆರ್ಥಿಕ ಸಂಕಷ್ಟದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದ ಸಹಕಾರಿ ಸಕ್ಕರೆ ಕಾರ್ಖಾನೆಗಳು; ಬೀದಿಗೆ ಬಿದ್ದ ಕಾರ್ಮಿಕರ ಬದುಕು

ಆರ್ಥಿಕ ಸಂಕಷ್ಟದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದ ಸಹಕಾರಿ ಸಕ್ಕರೆ ಕಾರ್ಖಾನೆಗಳು; ಬೀದಿಗೆ ಬಿದ್ದ ಕಾರ್ಮಿಕರ ಬದುಕು

ಗೋವಿಂದ ಕಾರಜೋಳ.

ಗೋವಿಂದ ಕಾರಜೋಳ.

ಕೆಲಸ ಕಳೆದುಕೊಂಡು  ನಾವು ಬೀದಿಗೆ ಬಿದ್ದಿದ್ದೇವೆ, 6 ತಿಂಗಳಿನಿಂದ ನಮಗೆ ವೇತನ ಇಲ್ಲ, ಜೀವನ ನಡೆಸುವುದು ಕಷ್ಟವಾಗಿದೆ. ಪತ್ನಿ ತಾಳಿ (ಮಾಂಗಲ್ಯ) ಮಾರಿ ಜೀವನ ನಡೆಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲ. ನಮ್ಮ ಪರಿಸ್ಥಿತಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿದರುವ ಬಾಗಲಕೋಟೆ ಜಿಲ್ಲೆಯ ಏಕೈಕ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರು ಬೀದಿಗೆ ಬಿದ್ದಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ನಮಗೆ ನ್ಯಾಯ ಕೊಡಿಸಿ,ಇಲ್ಲವೇ ವಿಷ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರ ಬಳಿಯ ರನ್ನ ನಗರದಲ್ಲಿರುವ  ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಸರ್ಕಾರ ಸಕ್ಕರೆ ಕಾರ್ಖಾನೆ ಲೀಜ್ ಕೊಡಲು ಮುಂದಾಗಿದ್ದರೆ, ಮತ್ತೊಂದೆಡೆ ಕಾರ್ಮಿಕರು  ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ  285 ಖಾಯಂ ಹಾಗೂ117  ಗುತ್ತಿಗೆ ಆಧಾರದ ನೌಕರರು ಸೇರಿ ಒಟ್ಟು 567ಜನ ಕಾರ್ಮಿಕರು ದುಡಿಯುತ್ತಿದ್ದರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಾರ್ಖಾನೆ ಬಂದ್ ಆಗಿದ್ದು, ಕಳೆದ  6ತಿಂಗಳ ವೇತನ ನೀಡಿಲ್ಲ. ಮುಂಚಿತವಾಗಿ  ಕಾರ್ಮಿಕರಿಗೆ  ಯಾವುದೇ ನೋಟೀಸ್ ನೀಡದೇ ದಿಢೀರ್ ರಾತ್ರೋರಾತ್ರಿ  ಜನೇವರಿ 6ರಂದು ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ನೋಟಿಸ್ ಅಂಟಿಸಿದ್ದಾರೆ.  ಇದರಿಂದ ಕಂಗಾಲಾಗಿರುವ ಕಾರ್ಮಿಕರು ಹೊಟ್ಟೆಚೀಲ ತುಂಬಿಸಿಕೊಳ್ಳಲು ಹೆಣಗುವಂತಾಗಿದೆ.


ದುಷ್ಟ ರಾಜಕಾರಣಿ ಕೈಯಲ್ಲಿ ಸಿಲುಕಿ ಕಾರ್ಖಾನೆ ಹಾಳು:


ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಡಿಸಿಎಂ ಗೋವಿಂದ ಕಾರಜೋಳ ಆಪ್ತ.  ಈ ಹಿಂದೆ ಗೋವಿಂದ ಕಾರಜೋಳ ಈ ಕಾರ್ಖಾನೆ ಅಧ್ಯಕ್ಷರಾಗಿದ್ದರು. ಆ ಬಳಿಕ ರಾಮಣ್ಣ ತಳೇವಾಡ ಸತತ ಇಪ್ಪತ್ತು ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ‌. ಆದರೆ ಇದೀಗ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಖಾನೆ ಲೀಜ್ ನಲ್ಲಿ ಕೊಡುವ ಚರ್ಚೆ ನಡೆಯುತ್ತಿದೆ. ಆದರೆ ಅದು ವಿಳಂಬವಾಗುತ್ತಿದ್ದು,ಇತ್ತ ಕಾರ್ಖಾನೆ ಕಾರ್ಮಿಕರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ಜೀವನ ನಡೆಸುತ್ತಿದ್ದಾರೆ.


ಇದನ್ನೂ ಓದಿ: Crime News: ಆಸ್ತಿ ವಿಚಾರಕ್ಕೆ ಗಲಾಟೆ; ತಾಯಿ, ತಮ್ಮನ ಹೆಂಡತಿ ಹಾಗೂ 4 ವರ್ಷದ ಮಗುವನ್ನೂ ಇರಿದ ಪಾಪಿ ಮಗ!


ಕೆಲಸ ಕಳೆದುಕೊಂಡು  ನಾವು ಬೀದಿಗೆ ಬಿದ್ದಿದ್ದೇವೆ, 6 ತಿಂಗಳಿನಿಂದ ನಮಗೆ ವೇತನ ಇಲ್ಲ, ಜೀವನ ನಡೆಸುವುದು ಕಷ್ಟವಾಗಿದೆ. ಪತ್ನಿ ತಾಳಿ (ಮಾಂಗಲ್ಯ) ಮಾರಿ ಜೀವನ ನಡೆಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲ. ನಮ್ಮ ಪರಿಸ್ಥಿತಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ದುಷ್ಟ ರಾಜಕಾರಣಿ,ಹಿಟ್ಲರ್ ಅನ್ನು ನಾವು ನೋಡಿಲ್ಲ. ಆತನ ಆಡಳಿತ ಬಗ್ಗೆ ಕೇಳಿದ್ದೇವೆ. ಅದೇ ರೀತಿ ರಾಮಣ್ಣ ತಳೇವಾಡ ಹಿಟ್ಲರ್ ಆಡಳಿತ ನಡೆಸಿ, ಕಾರ್ಖಾನೆ ಹಾಳು ಮಾಡಿ ನಮ್ಮ ಬದುಕು ಬೀದಿಗೆ ತಂದಿದ್ದಾರೆ.


ಇನ್ನು ಕ್ಷೇತ್ರದ ಶಾಸಕ ಡಿಸಿಎಂ ಗೋವಿಂದ ಕಾರಜೋಳ ಭೇಟಿ ಮಾಡಿದ್ರೂ ,ಸರ್ಕಾರಕ್ಕೂ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸಂಬಂಧ ಇಲ್ಲದಂತೆ ಮಾತನಾಡಿ, ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ನೊಂದ ಕಾರ್ಮಿಕರಾದ,ನಾಗಪ್ಪ ಕೆಳಗಡೆ, ಪ್ರಕಾಶ್ ಕಬ್ಬೂರ, ಅಳಲು ತೋಡಿಕೊಂಡಿದ್ದಾರೆ. ಒಂದು ವೇಳೆ ನಮ್ಮನ್ನ ಮರಳಿ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಜಿಲ್ಲಾಧಿಕಾರಿ ಕಛೇರಿಗೆ ಕುಟುಂಬ ಸಮೇತರಾಗಿ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು