Temple locked: ದುಡ್ಡು ಕೊಟ್ಟವರಿಗಷ್ಟೆ ಪೂಜೆ ಮಾಡ್ತಿದ್ದ ಅರ್ಚಕ, ವಜಾಗೊಳಿಸಿದ ಕೋಪಕ್ಕೆ ಏನು ಮಾಡಿದ ಗೊತ್ತಾ?

ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ  ಬಯಲು ಬಸವಣ್ಣ ದೇವಸ್ಥಾನದಲ್ಲಿ ದೇವರಿಗೆ 2 ದಿನಗಳಿಂದ ಪೂಜೆಯೇ ಇಲ್ಲದಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೊಡ್ಡಬಳ್ಳಾಪುರ (ಫೆ.24): ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳಲ್ಲೂ (Temple) ಅಕ್ರಮಗಳು ಹೆಚ್ಚಾಗಿದೆ. ಅರ್ಚಕರು ಹಾಗೂ ಟ್ರಸ್ಟ್​ (Trust) ನಡುವಿನ ಕಿತ್ತಾಟ ಹೊಸದೇನಲ್ಲಾ ಹಲವು ಕಡೆ ನಡೆಯುತ್ತಲೇ ಇರುತ್ತೆ. ದೇವರನ್ನೇ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡ್ತಾರೆ ನಮ್ಮ ಜನ. ದೇವರ ಪೂಜೆ ವಿಚಾರದಲ್ಲಿ ಅನೇಕ ಗಲಾಟೆಗಳು ನಡೆದಿರೋದನ್ನು ನಾವು ನೋಡೇ ಇರ್ತೀವಿ. ದೊಡ್ಡಬಳ್ಳಾಪುರದಲ್ಲೂ (Doddaballapur)  ಇಂತಹದಲ್ಲೆ ಗಲಾಟೆ ನಡೆದಿದೆ. ಅರ್ಚಕರು (Priest) ಮತ್ತು ಟ್ರಸ್ಟಿ ಸದಸ್ಯರ ನಡುವಿನ ಜಗಳದಿಂದ ದೇವರಿಗೆ (God) ಪೂಜೆಯೇ ಇಲ್ಲದಂತಾಗಿದೆ. ಹುಂಡಿ  ಹಣದಲ್ಲಿ ವಂಚನೆ ಹಿನ್ನೆಲೆ ಟ್ರಸ್ಟ್ ನವರು ಅರ್ಚಕನನ್ನ ವಜಾ ಮಾಡಿದ್ದರು. ಕೋಪಕ್ಕೆ ಅರ್ಚಕ ಏನ್​ ಮಾಡಿದ್ದಾನೆ ಗೊತ್ತಾ? ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ

    ದೇವಸ್ಥಾನದ ಹುಂಡಿ ಹಣದಲ್ಲಿ ವಂಚನೆ

    ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ  ಬಯಲು ಬಸವಣ್ಣ ದೇವಸ್ಥಾನದಲ್ಲಿ ದೇವರಿಗೆ 2 ದಿನಗಳಿಂದ ಪೂಜೆಯೇ ಇಲ್ಲದಂತಾಗಿದೆ. ದೇವರ ಪೂಜಾ ಕಾರ್ಯದಲ್ಲಿ ಭಕ್ತರ ನಡುವೆ  ತಾರತಮ್ಯ ಮತ್ತು ಭಕ್ತರ ಹುಂಡಿ ಹಣದಲ್ಲಿ ವಂಚನೆ ಹಿನ್ನೆಲೆ ಟ್ರಸ್ಟ್ ನವರು ಅರ್ಚಕನನ್ನ ವಜಾ ಮಾಡಿದ್ದರು, ಹೀಗಾಗಿ ಕೋಪಗೊಂಡ ಅರ್ಚಕ  ದೇವಾಲಯಕ್ಕೆ  ಬಾಗಿಲು ಹಾಕಿ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದ ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ  ಬಯಲು ಬಸವಣ್ಣ ದೇವಸ್ಥಾಕ್ಕೆ ಆರ್ಚಕ ಹೆಚ್.ವಿ. ಕೃಷ್ಣಮೂರ್ತಿ  ಬಾಗಿಲು ಹಾಕಿ ಎರಡು ದಿನದಿಂದ ಭಕ್ತರಿಗೆ ದೇವರ ದರ್ಶನ ಸಿಗದಂತೆ ಮಾಡಿದ್ದ.

    ಇದನ್ನೂ ಓದಿ: Tirupati: ತಿರುಪತಿಯಲ್ಲಿ ಪ್ರಸಾದದ ಬೆಲೆ ₹500ಕ್ಕೆ ಏರಿಕೆ! ಯಾವುದಕ್ಕೆ ಎಷ್ಟು ಬೆಲೆ ನಿಗದಿ ಮಾಡಿದೆ ಟಿಟಿಡಿ?

    ಮಿತಿ ಮೀರಿತ್ತು ಅರ್ಚಕನ ವರ್ತನೆ

    ಐತಿಹಾಸಿಕ  ಹಿನ್ನೆಲೆಯುಳ್ಳ ಬಯಲು ಬಸವಣ್ಣ ದೇವಸ್ಥಾನಕ್ಕೆ ಪೂಜೆ ಮಾಡಲು ಅರ್ಚಕರೇ ಇರಲಿಲ್ಲ. ಬಯಲು ಬಸವಣ್ಣ ದೇವಸ್ಥಾನದ  ಸೇವಾ ಟ್ರಸ್ಟ್ ನವರು 11 ವರ್ಷಗಳ ಹಿಂದೆ ಗೌರಿಬಿದನೂರು ಮೂಲದ ಹೆಚ್ ವಿ ಕೃಷ್ಣಮೂರ್ತಿಯನ್ನ ಅರ್ಚಕರನ್ನಾಗಿ  ನೇಮಿಸಿದರು,
    ದಿನ ಕಳೆದಂತೆ ಅರ್ಚಕ ದೇವಸ್ಥಾನವನ್ನು ತನ್ನ ಸ್ವತ್ತು ಎಂಬಂತೆ ವರ್ತಿಸತೊಡಗಿದ. ದೇವಾಸ್ಥಾನಕ್ಕೆ  ಬರುವ ಭಕ್ತರ ನಡುವೆ ತಾರತಮ್ಯ  ಮಾಡತೋಡಗಿದ, ಹಣ ಕೊಟ್ಟವರಿಗೆ ಪೂಜೆ ಮಾಡ್ತಿದ್ದ.

    ಹಣ ಕೊಡದಿದ್ದವರಿಗೆ ಪೂಜೆ ಮಾಡಿ ಕೊಡುತ್ತಿರಲಿಲ್ಲ. ಕಾಣಿಕೆ ಹುಂಡಿ ಮೇಲೆ ಆರತಿ ತಟ್ಟಿ ಇಟ್ಟು  ಭಕ್ತರು ಕಾಣಿಕೆ ಹಣವನ್ನ ತಾನೇ ಪಡೆಯುತ್ತಿದ್ದ ಎಂದು ಹಲವರು ಆರೋಪಿಸಿದ್ದಾರೆ. ಇನ್ನೂ ಟ್ರಸ್ಟ್  ನವರು ಗಮನಕ್ಕೂ ತರದೆ ಮುಜರಾಯಿ  ಇಲಾಖೆ ಅಧಿಕಾರಿಗಳನ್ನ ಕರೆದು ಹುಂಡಿ ಹಣ ಎಣಿಕೆ ಮಾಡಿದ್ದಾನೆಂದು ಟ್ರಸ್ಟ್  ನವರು ಗಂಭೀರ ಆರೋಪ ಮಾಡಿದ್ದಾರೆ.

    ದೇವಸ್ಥಾನದ ಅರ್ಚಕ ವಜಾ

    ಅರ್ಚಕನ ನಡೆಗೆ ಭಕ್ತರ ಆಕ್ರೋಶ ಅರ್ಚಕನ ವರ್ತನೆಯಿಂದ ಬೇಸತ್ತ ಟ್ರಸ್ಟ್  ನವರು ಸರ್ವಾನುಮತದಿಂದ ವಜಾ ಮಾಡಿದ್ದಾರೆ.  ಬಯಲು ಬಸವಣ್ಣ ದೇವಸ್ಥಾನಕ್ಕೆ ಸಂಬಂಧಿಸಿದಂತೆ  ಸರ್ವೆ ನಂಬರ್ 54ರಲ್ಲಿ 37 ಗುಂಟೆ ಜಮೀನು  ಇದೆ,  ಟ್ರಸ್ಟ್  ಅನ್ನು ಮುಜರಾಯಿ ಇಲಾಖೆಗೆ ಸೇರಿಸಿದ್ರೆ.

    ಇಡೀ ದೇವಸ್ಥಾನ ತನಗೆ ಸಿಗುತ್ತೆ ಎಂಬ ಕಾರಣಕ್ಕೆ  ಮುಜರಾಯಿ ಇಲಾಖೆಗೆ ದೂರು ನೀಡಿರುವ ಅರ್ಚಕ ಟ್ರಸ್ಟ್  ನವರು ದೇವಸ್ಥಾನದ  ಜಾಗದಲ್ಲಿ ವಾಣಿಜ್ಯ  ಮಳಿಗೆ ನಿರ್ಮಿಸಿ ಹಣ ದೋಚುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಮಳಿಗೆ ನಿರ್ಮಾಣ  ಮಾಡಿಲ್ಲವೆಂದು  ವರದಿ ನೀಡಿದ್ದಾರೆಂದು ಟ್ರಸ್ಟ್  ನವರು ಅರ್ಚಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: Anjanadri Betta: ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳ, ಶೀಘ್ರವೇ ಸರ್ಕಾರದಿಂದ ಘೋಷಣೆ ಸಾಧ್ಯತೆ

    ಹೊಸ ಅರ್ಚಕನ ನೇಮಕಕ್ಕೆ ತೀರ್ಮಾನ

    ಕಮಿಟಿ ಹೊಸ ಅರ್ಚಕನ ನೇಮಕ ಮಾಡುವ ಮನಸ್ಸು ಮಾಡಿದ್ದು, ಈಗಿರುವ ಅರ್ಚಕನನ್ನು ಒಮ್ಮತ ಮನಸ್ಸಿನಿಂದ ವಜಾಗೊಳಿಸಲಾಗಿದೆ. ಹೀಗಾಗಿ ಕಮಿಟಿ ಹೊಸ ಅರ್ಚಕನ ನೇಮಕ ಮಾಡುವ ಮನಸ್ಸು ಮಾಡಿದೆ. ಕೊನೆಗೆ ಊರಿನವರು ಬೀಗ ತೆಗೆಯುವನನ್ನು ಕರೆಸಿ ದೇವಾಲಯದ ಬಾಗಿಲು ತೆಗೆಸಿದ್ದಾರೆ

    ವರದಿ: ಮನುಕುಮಾರ್​
    Published by:Pavana HS
    First published: