Consensual Sex: ಸಮ್ಮತಿಯ ಲೈಂಗಿಕ ಸಂಪರ್ಕ ಅತ್ಯಾಚಾರವಲ್ಲ; ನ್ಯಾಯಾಲಯದ ಮಹತ್ವದ ತೀರ್ಪು

ವಿವಾಹಪೂರ್ವದಲ್ಲಿ ಪರಸ್ಪರ ಸಮ್ಮತಿ ಮೇಲೆ ಲೈಂಗಿಕ ಸಂಬಂಧವಿದ್ದು ನಂತರ ವಿವಾಹ ಆಗದಿದ್ದರೆ, ಆ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ, ಈ ಪ್ರಕರಣದಲ್ಲಿ ಅಪರಾಧ ಎಸಗುವ ಉದ್ದೇಶದಿಂದ ಲೈಂಗಿಕ ಸಂಪರ್ಕ ಬೆಳೆಸಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿ ಮಹಿಳಾ ಕಾನ್ಸ್ ಟೇಬಲ್ ದಾಖಲಿಸಿದ್ದ ಅರ್ಜಿ ವಜಾಗೊಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಚಾಮರಾಜನಗರ (ಅ.12) ಸಮ್ಮತಿಯ ಮೇರೆಗೆ ಮಾಡಿದ ಲೈಂಗಿಕ ಸಂಪರ್ಕ(Consensual Sex) ಅತ್ಯಾಚಾರವಲ್ಲ(Rape) ಎಂದು ಚಾಮರಾಜನಗರ (Chamarajanagar) ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ.  ಲೈಂಗಿಕ ಸಂಪರ್ಕಕ್ಕೆ(Sexual Intercourse) ಪೂರ್ವದಲ್ಲಿ ಆಕೆಯ ಸಮ್ಮತಿ ಇರಬೇಕು. ಆದರೆ ಆ ಸಂದರ್ಭದಲ್ಲಿ ಮೋಸದಿಂದ ಒಪ್ಪಿಗೆ ಪಡೆದಿದ್ದರೆ ಅಪರಾಧವಾಗುತ್ತದೆ ಆದರೆ ಈ ಪ್ರಕರಣದಲ್ಲಿ ಒಪ್ಪಿಗೆ ಪಡೆಯುವ ವೇಳೆ ಆರೋಪಿಯು ಅಪರಾಧಿಕ ಮನಸ್ಥಿತಿ ಹೊಂದಿರಲಿಲ್ಲ ಹಾಗಾಗಿ ಪರಸ್ಪರ ಸಮ್ಮತಿಯಿಂದ ಮಾಡಿದ ಲೈಂಗಿಕ ಸಂಪರ್ಕ(Consensual Sex) ಅತ್ಯಾಚಾರವಲ್ಲ ಎಂದು ಪ್ರಧಾನ ಜಿಲ್ಲಾ  ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನ್ ಪುರಿ ತೀರ್ಪು ನೀಡಿದ್ದಾರೆ.

ಪ್ರಕರಣದ ವಿವರ

ಚಾಮರಾಜನಗರ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ ಸ್ಟೇಬಲ್ ಹಾಗೂ  ಅದೇ ಠಾಣೆಯ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಎರಡು ವರ್ಷಗಳಿಂದ  ಪರಸ್ಪರ ಪ್ರೀತಿಸುತ್ತಿದ್ದರು. ಈ ವೇಳೆ ಇಬ್ಬರು ಲೈಂಗಿಕ ಸಂಪರ್ಕ ಹೊಂದಿದ್ದರು. ಆದರೆ ಕೆಲದಿನಗಳ ಬಳಿಕ ಆತ ಬೇರೆಯವರನ್ನ ಮದುವೆಯಾಗಲು ಮುಂದಾಗಿದ್ದರು. ಈ ವೇಳೆ   ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಬಂಧ ಬೆಳೆಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಪುರುಷ ಕಾನ್ ಸ್ಟೇಬಲ್ ವಿರುದ್ದ 2018ರ ಜೂನ್ 6 ರಂದು  ಮಹಿಳಾ ಕಾನ್ ಸ್ಟೇಬಲ್ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸೆಕ್ಷನ್ 164 ರ ಅಡಿಯಲ್ಲಿ ಆಕೆಯ ಹೇಳಿಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನ್ ಪುರಿ, ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಪಡೆದಿದ್ದರೆ ಆರೋಪಿಯು ಅಪರಾಧ ಎಸಗುವ ಉದ್ದೇಶದಿಂದಲೇ ಲೈಂಗಿಕ ಸಂಬಂಧ ಬೆಳೆಸಿಲ್ಲ, ಇನ್ನೊಂದೆಡೆ ಮದುವೆ  ಆಗುತ್ತೇನೆ ಎಂದು ನಂಬಿ ಲೈಂಗಿಕ  ಸಂಪರ್ಕಕ್ಕೆ ಸಮ್ಮತಿ ಕೊಟ್ಟು, ನಂತರ ಮದುವೆ ಆಗಲಿಲ್ಲವಾದರೆ ಅದು ಅತ್ಯಾಚಾರವಲ್ಲ  ಎಂದು ತೀರ್ಪು ನೀಡಿದ್ದಾರೆ ಬೇರೆ ಬೇರೆ ಕಾರಣಗಳಿಗೆ ಮದುವೆಯಾಗದೆ ಇದ್ದರೆ ಅವರ ಒಪ್ಪಿತ ಲೈಂಗಿಕ ಸಂಪರ್ಕವವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು, ವಿವಾಹಪೂರ್ವದಲ್ಲಿ ಪರಸ್ಪರ ಸಮ್ಮತಿ ಮೇಲೆ ಲೈಂಗಿಕ ಸಂಬಂಧವಿದ್ದು ನಂತರ ವಿವಾಹ ಆಗದಿದ್ದರೆ ಆ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ, ಈ ಪ್ರಕರಣದಲ್ಲಿ ಅಪರಾಧ ಎಸಗುವ ಉದ್ದೇಶದಿಂದ ಲೈಂಗಿಕ ಸಂಪರ್ಕ ಬೆಳೆಸಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿ ಮಹಿಳಾ ಕಾನ್ಸ್ ಟೇಬಲ್ ದಾಖಲಿಸಿದ್ದ   ಅರ್ಜಿ ವಜಾಗೊಳಿಸಿದ್ದಾರೆ.

ಇದನ್ನೂ ಓದಿ:Child Marriage| ಬಾಲ್ಯ ವಿವಾಹದಿಂದ ಜಾಗತಿಕವಾಗಿ ದಿನಕ್ಕೆ 60 ಹೆಣ್ಣು ಮಕ್ಕಳ ಸಾವು; ವರ್ಷಕ್ಕೆ 22,000 ಬಾಲಕಿಯರ ಬದುಕು ಅಂತ್ಯ!

“ಮಹಿಳಾ ಕಾನ್ಸ್ ಟೇಬಲ್ ಸುಳ್ಳು  ದೂರು ದಾಖಲಿಸಿದ್ದಾರೆ, ಅವರು ಸಲ್ಲಿಸಿರುವ ಸಾಕ್ಷ್ಯಾಧಾರಗಳು, ದಾಖಲೆಗಳ ಆಧಾರದ ಮೇಲೆ ವಿಚಾರಣೆ ನಡೆಸಲು ಸಾಧ್ಯವಿಲ್ಲ, ಎರಡು ವರ್ಷ ಕಾಲ ಪ್ರೀತಿಸಿ ಪರಸ್ಪರ ಅನುಮತಿಯ ಮೇರೆಗೆ ಲೈಂಗಿಕ ಸಂಬಂಧ ಹೊಂದಿದ್ದರು, ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಪಡೆದಿದ್ದರು ಎಂಬುದು ಸರಿಯಲ್ಲ, ಅದು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ” ಎಂದು ತಾವು ಸಲ್ಲಿಸಿದ್ದ ಅರ್ಜಿಯನ್ನು ಘನ ನ್ಯಾಯಾಲಯ ಪುರಸ್ಕರಿಸ, ಆರೋಪಿಯನ್ನು ಖುಲಾಸೆಗೊಳಸಿದೆ ಎಂದು ಆರೋಪಿ ಪುರುಷ ಕಾನ್ ಸ್ಟೇಬಲ್ ಪರ ವಾದ ಮಂಂಡಿಸಿದ್ದ ವಕೀಲ ಪ್ರಸನ್ನ ಕುಮಾರ್ ನ್ಯೂಸ್ 18 ಗೆ  ಮಾಹಿತಿ ನೀಡಿದ್ದಾರೆ.

ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ  ಪುರುಷ ಕಾನ್ ಸ್ಟೇಬಲ್ ಅವರ ತಂದೆ , ತಾಯಿ, ಹಾಗು ತಾತಾ ಅವರನ್ನು ಸಹ ನ್ಯಾಯಾಲಯ ದೋಷಮುಕ್ತಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
Published by:Latha CG
First published: