ಕೋವಿಡ್ ಚಿಕಿತ್ಸೆಗೆ ಕಾಂಗ್ರೆಸ್ ಏನ್ ಬದ್ನೆಕಾಯಿ ಕೊಟ್ಟಿದೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ

ಆರ್ಥಿಕತೆ, ಬಡವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಗಳು ಒಳ್ಳೆಯ ಪ್ಯಾಕೇಜ್ ಕೊಟ್ಟಿದಾರೆ. ಗರೀಬ್ ಕಲ್ಯಾಣ ಯೋಜನೆಯಲ್ಲಿ ಎರಡು ತಿಂಗಳು ಉಚಿತ ಧಾನ್ಯ ನೀಡ್ತಿದ್ದೇವೆ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದರಲ್ಲಿ ಪೇಟೆಂಟ್ ಪಡೆದಿದೆ. ಹೀಗಾಗಿ ಸುಳ್ಳು ಹೇಳೋದನ್ನೇ ಕಾಯಕ ಮಾಡಿಕೊಂಡಿದೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

  • Share this:
ಹುಬ್ಬಳ್ಳಿ; ಕೋವಿಡ್ ಚಿಕಿತ್ಸೆಗೆ ಕಾಂಗ್ರೆಸ್ ಏನ್ ಬದನೆಕಾಯಿ ಕೊಟ್ಟಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿಯೂ ಕಾಂಗ್ರೆಸ್ ನಿಂದ ಸುಳ್ಳು ಆರೋಪ ನಡೆದಿದೆ. ಕಾಂಗ್ರೆಸ್ ನೂರು ಕೋಟಿ ಕೊಡೋದಾಗಿ ಹೇಳಿದೆ. ಆದರೆ ಎಂಪಿ, ಎಂಎಲ್ಎ ಫಂಡ್ ಯಾರದ್ದು ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಎಂಪಿ, ಎಂಎಲ್ಎ ಫಂಡ್ ಸರ್ಕಾರದ್ದು. ಈ ವರ್ಷ ಸಂಸದರ ನಿಧಿಯನ್ನು ಕೋವಿಡ್ ಗೆ ಬಳಸಿಕೊಳ್ಳುವ ನಿರ್ಧಾರವಾಗಿದೆ. ಅದೇ ರೀತಿ ರಾಜ್ಯದಲ್ಲಿಯೂ ಶಾಸಕರ ನಿಧಿ ಕೊರೋನಾಕೆ ಬಳಸಲು ತೀರ್ಮಾನಿಸಲಾಗಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದವರೇನು ಬದನೆಕಾಯಿ ಕೊಡ್ತಾರೆ ಎಂದು ಜೋಶಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಹುಚ್ಚುಚ್ಚು ಹೇಳಿಕೆ ನೀಡ್ತಿದ್ದಾರೆ. ಕೋವಿಡ್ ವ್ಯಾಕ್ಸಿನ್ ಗೆ ಸಂಬಂಧಿಸಿ 58 ಬಾರಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿಕೆ ನೀಡಿದ್ದರು. ರಾಜಕಾರಣಕ್ಕೆ ಮಾತನಾಡೋಕೆ ಏನೂ ಇಲ್ಲ ಅಂತ ಕೋವಿಡ್ ವಿಚಾರದಲ್ಲಿ ಅಪ ಪ್ರಚಾರ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪಿಎಂ ಕೇರ್ಸ್ ನಿಂದ ಖರೀದಿಸಿದ ವೆಂಟಿಲೇಟರ್​ಗಳ ಬಗ್ಗೆಯೂ ಅಪ ಪ್ರಚಾರ ನಡೆದಿದೆ. ಕಾಂಗ್ರೆಸ್ ನಾಯಕರು ತಜ್ಞರ ಜೊತೆ ಚರ್ಚಿಸಿ ಮಾತನಾಡಲಿ. ಅದನ್ನು ಬಿಟ್ಟು ರಾಹುಲ್ ಗಾಂಧಿ ಅವರ ಮಾತು ಕೇಳಿ ಹೇಳಿಕೆ ನೀಡಬಾರದು. ರಾಹುಲ್ ಗಾಂಧಿಗೆ ಏನೂ ತಿಳಿಯಲ್ಲ. ಪಾಪ ಅಂಥವರ ಮಾತು ಕಟ್ಟಿಕೊಂಡು ಹೇಳಿಕೆ ನೀಡಬೇಡಿ ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಗಿ ಹೇಳಿದರು.

ಕೋವಿಡ್ ಪ್ಯಾಕೇಜ್ ಕುರಿತ ಟೀಕೆಗೆ ಜೋಶಿ ಕಿಡಿ

ಮುಖ್ಯಮಂತ್ರಿಗಳ ಕೋವಿಡ್ ಪ್ಯಾಕೇಜ್ ಗೆ ಕುರಿತ ಕಾಂಗ್ರೆಸ್ ನಾಯಕರ ಟೀಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಮುಖ್ಯಮಂತ್ರಿಗಳು ಪ್ರಕಟಿಸಿರೋ ಪ್ಯಾಕೇಜ್ ನ್ನು ಸ್ವಾಗತಿಸಿದ್ದಾರೆ. ಪ್ಯಾಕೇಜ್ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಿಡಿಕಾರಿದ್ದಾರೆ. ಪ್ಯಾಕೇಜ್ ಅರೆಕಾಸಿನ ಮಜ್ಜಿಗೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ಉದ್ಯೋಗ ಇಲ್ಲದವರು ಮನಸ್ಸಿಗೆ ಬಂದಂತೆ ಏನಾದ್ರು ಮಾತಾಡ್ತಾ ಇರ್ತಾರೆ ಎಂದಿದ್ದಾರೆ.

ಕೋವಿಡ್ ಕಾರಣದಿಂದಾಗಿ ದೇಶ, ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನೂ ನೋಡಬೇಕು. ಆರ್ಥಿಕತೆ, ಬಡವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಗಳು ಒಳ್ಳೆಯ ಪ್ಯಾಕೇಜ್ ಕೊಟ್ಟಿದಾರೆ. ಗರೀಬ್ ಕಲ್ಯಾಣ ಯೋಜನೆಯಲ್ಲಿ ಎರಡು ತಿಂಗಳು ಉಚಿತ ಧಾನ್ಯ ನೀಡ್ತಿದ್ದೇವೆ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದರಲ್ಲಿ ಪೇಟೆಂಟ್ ಪಡೆದಿದೆ. ಹೀಗಾಗಿ ಸುಳ್ಳು ಹೇಳೋದನ್ನೇ ಕಾಯಕ ಮಾಡಿಕೊಂಡಿದೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.

ಇದನ್ನು ಓದಿ: ಗ್ರಾಮೀಣ ಪ್ರದೇಶಗಳಲ್ಲಿ ಮನೆ ಆರೈಕೆ ವ್ಯವಸ್ಥೆ ಇಲ್ಲದಿದ್ದರೆ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲು: ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ವಿವಿಧ ಯೋಜನೆಗಳಿಗೆ ಜೋಶಿ ಚಾಲನೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಗಳಿಗೆ ಚಾಲನೆ ನೀಡಿದರು. ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ 27 ವೆಂಟಿಲೇಟರ್ ಗಳನ್ನು ಹಸ್ತಾಂತರಿಸಿದರು. ಪಿಎಂ ಕೇರ್ಸ್ ಅಡಿ ಖರೀದಿಸಿದ 27 ವೆಂಟಿಲೇಟರ್ ಗಳು ಕಿಮ್ಸ್ ಗೆ ಹಸ್ತಾಂತರ ಮಾಡಿದರು. ನಂತರ ವೇದಾಂತ ಕಂಪನಿಯಿಂದ ನಿರ್ಮಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಸಿ.ಎಸ್.ಆರ್. ಅಡಿ ನಿರ್ಮಿಸುತ್ತಿರುವ ಕೋವಿಡ್ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿ, ಶೀಘ್ರವೇ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದರು.

ಸೇವಾ ಭಾರತಿ ನಡೆಸುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಹಸ್ತಾಂತರ ಮಾಡಿದರು. ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಲ್ಲಿ ನಡೆಯುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಪ್ರೇರಿತಾ ಕ್ಷಮತಾ ಸಂಸ್ಥೆ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯಾಗಿ ನೀಡಿದ್ದು, ಪ್ರಹ್ಲಾದ್ ಜೋಶಿ ಹಸ್ತಾಂತರಿಸಿದರು.

ವರದಿ - ಶಿವರಾಮ ಅಸುಂಡಿ
Published by:HR Ramesh
First published: