ಕೋವಿಡ್ ರೋಗಿಗಳಿಗೆ ನೀಡಿದ ಬೆಡ್ ಗಳ ತಿರಸ್ಕಾರ ; ರಸ್ತೆ ಮೇಲೆಯೇ ಬೆಡ್ ಮೇಲೆ ಮಲಗಿ ಕಾಂಗ್ರೆಸ್ ಪ್ರತಿಭಟನೆ

ಬೆಡ್ ಗಳನ್ನು ತಿರಸ್ಕರಿಸಿರುವ ಕ್ರಮ ಖಂಡಿಸಿ, ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ವಿನೂತನವಾಗಿ ಪ್ರತಿಭಟಿಸಲಾಯಿತು

news18-kannada
Updated:August 3, 2020, 3:29 PM IST
ಕೋವಿಡ್ ರೋಗಿಗಳಿಗೆ ನೀಡಿದ ಬೆಡ್ ಗಳ ತಿರಸ್ಕಾರ ; ರಸ್ತೆ ಮೇಲೆಯೇ ಬೆಡ್ ಮೇಲೆ ಮಲಗಿ ಕಾಂಗ್ರೆಸ್ ಪ್ರತಿಭಟನೆ
ಬೆಡ್ ಮೇಲೆ ಮಲಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು
  • Share this:
ಕಲಬುರ್ಗಿ(ಆಗಸ್ಟ್ .03): ಕಲಬುರ್ಗಿಯಲ್ಲಿ ಕೊರೋನಾ ಸೋಂಕು ದಿನೇ ದಿನೇ ವ್ಯಾಪಕ ಸ್ವರೂಪ ಪಡೆದುಕೊಳ್ಳುತ್ತಿದೆ. ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿಢೀರ್ ಏರಿಕೆಯಾಗಿರುವುದಕ್ಕೆ ಜಿಲ್ಲಾಡಳಿತ ದಿಕ್ಕುತಪ್ಪಿದ ಸ್ಥಿತಿಯಲ್ಲಿದೆ. ಬೆಡ್ ಗಳು ಸಿಗುತ್ತಿಲ್ಲವೆಂದು ರೋಗಿಗಳನ್ನು ಬೇರೆ ಕಡೆ ಕಳುಹಿಸಿಕೊಡುತ್ತಿರುವ ಸಂದರ್ಭದಲ್ಲಿಯೇ  ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ವತಿಯಿಂದ ನೀಡಿದ್ದ 550 ಬೆಡ್ ಗಳನ್ನು ತಿರಸ್ಕರಿಸುವುದು ಚರ್ಚೆಗೆ ಗ್ರಾಸವಾಗಿದೆ. 

ಬೆಡ್ ಗಳನ್ನು ತಿರಸ್ಕರಿಸಿರುವ ಕ್ರಮ ಖಂಡಿಸಿ, ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ವಿನೂತನವಾಗಿ ಪ್ರತಿಭಟಿಸಲಾಯಿತು. ಜಗತ್ ವೃತ್ತದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಕೋವಿಡ್ ಸೋಂಕಿತರಿಗೆ ನೆರವಾಗಲೆಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಕಳುಹಿಸಿಕೊಟ್ಟ 550 ಬೆಡ್ ಗಳನ್ನು ತಿರಸ್ಕರಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು.ಜಿಲ್ಲಾಡಳಿತ ತೆಗೆದುಕೊಳ್ಳದೆ ವಾಪಸ್ ಕಳುಹಿಸಿದ ಬೆಡ್ ಗಳನ್ನೇ ರಸ್ತೆಯ ಮೇಲೆ ಹಾಕಿ, ಅದರ ಮೇಲೆ ಮಲಗುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು. ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಕೋವಿಡ್ ಹೆಸರಲ್ಲಿ ಸರ್ಕಾರದಿಂದ ಹಗಲು ದರೋಡೆ ನಡೆದಿಸಿದೆ ಎಂದು ಆರೋಪಿಸಲಾಯಿತು.

ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ವತಿಯಿಂದ ಜಿಲ್ಲೆಗೆ 550 ಬೆಡ್ ಪೂರೈಕೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಕಳಿಸಿದೆ ಎಂಬ ಕಾರಣಕ್ಕೆ ಬೆಡ್ ಸ್ವೀಕರಿಸಿಲ್ಲ. ಮತ್ತೊಂದೆಡೆ ಜಿಲ್ಲೆಯಲ್ಲಿ ಬೆಡ್ ಸಿಗದೆ ಸೋಂಕಿತರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಬಿಜೆಪಿ ಈ ರೀತಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.ಬೇಕಿದ್ದರೆ ಬೆಡ್ ಗಳಿಗೆ ಕೇಸರಿ ಬಣ್ಣ ಹಚ್ಚಿ ಕೊಡುತ್ತೇವೆ. ಬೆಡ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಫೋಟೋ ಹಾಕಿ ಕೊಡುತ್ತೇವೆ. ನಮಗೆ, ನಮ್ಮ ಪಕ್ಷಕ್ಕೆ ಕ್ರೆಡಿಟ್ ಬೇಕಿಲ್ಲ. ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗಲಿ ಅಂತ ಬೆಡ್ ಕೊಟ್ಟಿದ್ದೇವೆ. ಈಗಲಾದರು ರಾಜಕಾರಣ ಮಾಡುವುದನ್ನು ಕೈಬಿಟ್ಟು, ಕೋವಿಡ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಡಬೇಕು. ಕೋವಿಡ್ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.ಇದನ್ನೂ ಓದಿ : ಕರ್ನಾಟಕ ರಾಜ್ಯದ ಹಿತಕ್ಕಾಗಿ ಡಿಕೆ ಶಿವಕುಮಾರ್​ ಮತ್ತು ಸಿದ್ಧರಾಮಯ್ಯ ಜೈಲಿಗೆ ಹೋಗಲೂ ಸಿದ್ಧ ; ಸಂಸದ ಡಿ.ಕೆ.ಸುರೇಶ್

ಕಲಬುರ್ಗಿಯ ಇಎಸ್ಐ ಆಸ್ಪತ್ರೆಯಲ್ಲಿ ಅವ್ಯವಸ್ಥೆಯಾಗಿರುವುದನ್ನು ಸರಿಪಡಿಸುವುದಾಗಿ ಸಂಸದ ಉಮೇಶ್ ಜಾಧವ್ ತಿಳಿಸಿದ್ದಾರೆ. ವೆಂಟಿಲೇಟರ್ ಗಳ ಸಮಸ್ಯೆಯಿಂದಾಗಿ ಹಲವರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಎಸ್ಐ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಲ್ಯಾಬ್ ಆರಂಭಗೊಳ್ಳದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಜಾಧವ್, ಈಗಾಗಲೇ ಲ್ಯಾಬ್ ಉಪಕರಣಗಳು ಬಂದಿವೆ. ಅದನ್ನು ಜೋಡಿಸುವ ಕಾರ್ಯ ಪ್ರಾರಂಭಗೊಂಡಿದೆ. ಎರಡು-ಮೂರು ದಿನಗಳಲ್ಲಿ ಇಎಸ್ಐ ಆಸ್ಪತ್ರೆಯಲ್ಲಿ ಲ್ಯಾಬ್ ಕಾರ್ಯಾರಂಭ ಮಾಡಲಾಗಿದೆ. ಇಎಸ್ಐ ಯಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಅದನ್ನೂ ಸರಿಪಡಿಸಲಾಗುವುದು. ಕೋವಿಡ್ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡುವುದಾಗಿ ಜಾಧವ್ ತಿಳಿಸಿದ್ದಾರೆ.
Published by: G Hareeshkumar
First published: August 3, 2020, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading