HOME » NEWS » District » CONGRESS PROTEST AGAINST SRINGERI RAPE CASE INSPECTOR BM SIDDARAMAIAH SUSPENDED VCTC MAK

ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ತನಿಖಾಧಿಕಾರಿ ಬಿಎಂ ಸಿದ್ದರಾಮಯ್ಯ ಅಮಾನತು

ಬಾಲಕಿಯ ಮೇಲೆ 30ಕ್ಕೂ ಹೆಚ್ಚು ಜನ ಅತ್ಯಾಚಾರ ನಡೆಸಿದ್ದಾರೆ. ಆದರೆ, ಕೇವಲ 17 ಜನರ ಮೇಲೆ ಮಾತ್ರ ಪ್ರಕರಣ ದಾಖಲಾಗಿತ್ತು. ಈ ಪೈಕಿ 8 ಜನ ಆರೋಪಿಗಳ ಸೆರೆಯಾದ್ರು ಉಳಿದವರು ಬಂಧನವಾಗಿರಲಿಲ್ಲ.

news18-kannada
Updated:February 6, 2021, 7:16 AM IST
ಶೃಂಗೇರಿ ಅಪ್ರಾಪ್ತೆ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ತನಿಖಾಧಿಕಾರಿ ಬಿಎಂ ಸಿದ್ದರಾಮಯ್ಯ ಅಮಾನತು
ಅಧಿಕಾರಿ ಬಿಎಂ ಸಿದ್ದರಾಮಯ್ಯ.
  • Share this:
ಚಿಕ್ಕಮಗಳೂರು : ಅದು ಶಾರದಾಂಭೆಯ ಪುಣ್ಯ ಕ್ಷೇತ್ರದಲ್ಲಿ ನಡೆದ ಹೇಯ ಕೃತ್ಯ. ನಾಗರೀಕ ಸಮಾಜ ಊಹಿಸೋದಕ್ಕೂ ಆಗದ  ನೀಚಕೃತ್ಯ. ಪ್ರಕರಣ ಬೆಳಕಿಗೆ ಬಂದು ವಾರವಾದ್ರು ತನಿಖೆಗೆ ಗ್ರಹಣ ಹಿಡಿದಿತ್ತು. ಸ್ವತಃ ಗೃಹ ಸಚಿವರೇ ಪ್ರಕರಣದ ಬಗ್ಗೆ ಕಾಳಜಿ ವಹಿಸಿದ್ರಿಂದ ತನಿಖಾಧಿಕಾರಿ ಅಮಾನತಯಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಪ್ರಕರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೃಂಗೇರಿಯಲ್ಲಿ 15 ವರ್ಷದ ಬಾಲಕಿಯನ್ನ 30ಕ್ಕೂ ಹೆಚ್ಚು ಜನ ಅತ್ಯಾಚಾರ ಎಸಗಿದ್ರು. 5  ತಿಂಗಳಿನಿಂದ ಒಂದ್ ವಿಡಿಯೋವನ್ನ ಇಟ್ಕೊಂಡು  ಬಾಲಕಿಯನ್ನ ಬ್ಲಾಕ್ ಮೇಲ್ ಮಾಡಿ ಕಾಮದಾಹ ತೀರಿಸಿಕೊಂಡಿದ್ದರು. ಕಳೆದ ವಾರವಷ್ಟೇ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ದೂರು ನೀಡಿದ್ದರು. ಇಷ್ಟಾದ್ರು ಆರೋಪಿಗಳ ಬಂಧಿಸುವಲ್ಲಿ ಪೊಲೀಸರು ಕಳ್ಳಾಟ ನಡೆಸಿದ್ರು ಎಂಬ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಶೃಂಗೇರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ರು. ಶೃಂಗೇರಿಯಲ್ಲಿ ಪಾದಯಾತ್ರೆ ನಡೆಸಿ ಠಾಣೆಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿ ಠಾಣೆ ಎದುರೇ 2 ಗಂಟೆಗಳ ಕಾಲ ಕೂತಿದ್ರು. ತನಿಖಾಧಿಕಾರಿಯನ್ನ ಸಸ್ಪೆಂಡ್ ಮಾಡಿ ಅಪ್ರಾಪ್ತೆ ಮೇಲೆ ದೌರ್ಜನ್ಯವೆಸಗಿದ ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದರು.

ಬಾಲಕಿಯ ಮೇಲೆ 30ಕ್ಕೂ ಹೆಚ್ಚು ಜನ ಅತ್ಯಾಚಾರ ನಡೆಸಿದ್ದಾರೆ. ಆದರೆ, ಕೇವಲ 17 ಜನರ ಮೇಲೆ ಮಾತ್ರ ಪ್ರಕರಣ ದಾಖಲಾಗಿತ್ತು. ಈ ಪೈಕಿ 8 ಜನ ಆರೋಪಿಗಳ ಸೆರೆಯಾದ್ರು ಉಳಿದವರು ಬಂಧನವಾಗಿರಲಿಲ್ಲ. ಪ್ರಕರಣದ ತನಿಖಾಧಿಕಾರಿಯಾಗಿದ್ದ ಶೃಂಗೇರಿ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಮಯ್ಯ ಬಿ.ಎಂ ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನ ಬಂಧಿಸೋಕೆ ಮೀನಾಮೇಷ ಎಣಿಸುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: Farmers Protest: ರಿಹಾನಾ, ಗ್ರೇಟಾ ಥನ್ಬರ್ಗ್​ ವಿರುದ್ಧ ಕೇಂದ್ರ ಸರ್ಕಾರ ಸಚಿನ್​ ತೆಂಡೂಲ್ಕರ್​ರನ್ನು ಕಣಕ್ಕಿಳಿಸಿದೆ; ಆರ್​ಜೆಡಿ ಆರೋಪ

ಈ ಬಗ್ಗೆ ನಿನ್ನೆ ಕೂಡ ವಿಧಾನ ಪರಿಷತ್ ನಲ್ಲಿ ಮಾತನಾಡಿದ ಗೃಹಸಚಿವ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳೋಕೆ ಸೂಚನೆ ನೀಡಿದ್ರು. ಇಂದು ಕಾಂಗ್ರೆಸ್ ಕಾರ್ಯಕರ್ತರು ಶೃಂಗೇರಿಯಲ್ಲಿ ಪ್ರತಿಭಟನೆಗೆ ಇಳಿದ ಬೆನ್ನಲ್ಲೇ ತನಿಖಾಧಿ ಕಾರಿಯಾಗಿದ್ದ ಸಿದ್ದರಾಮಯ್ಯರನ್ನ ಸಸ್ಪೆಂಡ್ ಮಾಡಿ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಆದೇಶಿಸಿದ್ದಾರೆ.

ಒಟ್ಟಾರೆ, ಸಾಕ್ಷಾತ್ ಶಾರದಾಂಭೆ ನೆಲೆಸಿರೋ ಶೃಂಗೇರಿಯಲ್ಲಿ ನಡೆದ ಸಮಾಜವೇ ತಲೆತಗ್ಗಿಸುವಂತಹಾ ಅಮಾನವೀಯ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರೋ ಬೆನ್ನಲ್ಲೇ ತನಿಖಾಧಿಕಾರಿಯ ತಲೆದಂಡವಾಗಿದೆ. ಸದ್ಯ ಪ್ರಕರಣದ ತನಿಖೆ ಚಿಕ್ಕಮಗಳೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಹೆಗಲೇರಿದ್ದು, ಸಿದ್ದರಾಮಯ್ಯ ನನ್ನ ಸಸ್ಪೆಂಡ್ ಮಾಡಿ ದಿಟ್ಟತನ ಪ್ರದರ್ಶಿಸಿದ ಸರ್ಕಾರ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಮಾಡಿ ಅಪ್ರಾಪ್ತೆಗೆ ಹೇಗೆ ನ್ಯಾಯ ಕೊಡಿಸುತ್ತೆ ಅನ್ನೋದನ್ನ ಕಾದುನೋಡಬೇಕು.
Published by: MAshok Kumar
First published: February 6, 2021, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories