HOME » NEWS » District » CONGRESS PROTEST AGAINST PRIVATIZATION OF MANGALORE AIRPORT KKM HK

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ತೀವ್ರ ವಿರೋಧ ; ಕಾಂಗ್ರೆಸ್ ನಿಂದ ಪ್ರತಿಭಟನೆ

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ಆಗಿರುವುದನ್ನು ವಿರೋಧಿಸಿ ಬಜ್ಪೆಯ ಕೆಂಜಾರು ಬಳಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು

news18-kannada
Updated:November 9, 2020, 7:00 PM IST
ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ತೀವ್ರ ವಿರೋಧ ; ಕಾಂಗ್ರೆಸ್ ನಿಂದ ಪ್ರತಿಭಟನೆ
ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು
  • Share this:
ಮಂಗಳೂರು(ನವೆಂಬರ್​. 09): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗಿ ತೆಕ್ಕೆಗೆ ಜಾರಿದೆ‌. ಮಂಗಳೂರು ವಿಮಾನ‌ ನಿಲ್ದಾಣವನ್ನು ಅದಾನಿ ಗ್ರೂಪ್ ಬಿಡ್ ಮೂಲಕ ಪಡೆದುಕೊಂಡಿದೆ. ದೇಶದ ಪ್ರಸಿದ್ಧ ಏರ್ ಪೋರ್ಟ್ ಖಾಸಗೀಕರಣವಾಗಿರುವುದನ್ನು ವಿರೋಧಿಸಿ ಕಾಂಗ್ರೆಸ್ ಹೋರಾಟದ ಹಾದಿ ಹಿಡಿದಿದೆ. ದೇಶದ ಹಳೆಯ ಮತ್ತು ಪ್ರತಿಷ್ಠಿತ ವಿಮಾನ ನಿಲ್ದಾಣ ಖಾಸಗಿ ತೆಕ್ಕೆಗೆ ಜಾರಿದೆ. ಇದರ ಮುಂದುವರಿದ ಭಾಗವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದ ಹೆಸರಿನ ಫಲಕವೂ ಬದಲಾಗಿದೆ. ಅದಾನಿ ಏರ್ ಪೋರ್ಟ್ ಅಂತಾ ಹೊಸ ಹೆಸರಿನ ಬೋರ್ಡ್ ಹಾಕಲಾಗಿದೆ. ಇಡಿ ನಿಲ್ದಾಣದ ನಿರ್ವಹಣೆ ಅದಾನಿ ಗ್ರೂಪ್ ಮಾಡುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ವಿಮಾನ ನಿಲ್ದಾಣ ಖಾಸಗೀಕರಣವಾಗಿದೆ. ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ಆಗಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಇಂದು ಪ್ರತಿಭಟನೆ ಮಾಡಿದೆ. ವಿಮಾನ ನಿಲ್ದಾಣವಿರುವ ಬಜ್ಪೆಯ ಕೆಂಜಾರು ಬಳಿ ಕಾಂಗ್ರೆಸ್ ನಾಯಕರು ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವರಾದ ರಮಾನಾಥ್ ರೈ, ಅಭಯ್ ಚಂದ್ರ ಜೈನ್ ಸೇರಿದಂತೆ ಪ್ರಮುಖರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಹಾಕಿದ್ದರು. ಪ್ರತಿಭಟನೆ ಆರಂಭದಲ್ಲಿ ಮಕ್ಕಳ ಕೈಯಲ್ಲಿ ಕಾಂಗ್ರೆಸ್ ಬಾವುಟ ಕೊಟ್ಟು ಪ್ರತಿಭಟನೆಗೆ ಬಳಕೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರಿಗೇ ತೀವ್ರ ಮುಜುಗರ ಉಂಟಾಯಿತು. ಮಾಧ್ಯಮಗಳ ಕ್ಯಾಮೆರಾ ಕಣ್ಣು ಮಕ್ಕಳ ಮೇಲೆ ಫೋಕಸ್ ಮಾಡುತ್ತಿದ್ದಂತೇ ಎಚ್ಚೆತ್ತ ನಾಯಕರು ಪ್ರತಿಭಟನೆಯಿಂದ ಮಕ್ಕಳನ್ನು ಎಬ್ಬಿಸಿ ಹಿಂದೆ ಕಳುಹಿಸಿದರು.

ಅದಾನಿ ಏರ್ ಪೋರ್ಟ್


ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಅದಾನಿ ಏರ್ ಪೋರ್ಟ್ ಅಂತಾ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. 1951 ರಿಂದ ಮಂಗಳೂರಿನ ಏರ್ ಪೋರ್ಟ್ ಕಾರ್ಯಾಚರಣೆ ಮಾಡುತ್ತಿದ್ದು, ಇದೀಗ ಹೆಸರು ಬದಲಾಯಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇದನ್ನೂ ಓದಿ : Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿಯಿಂದ ಅಧಿಕಾರ ಸ್ವೀಕಾರ ; ದಲಿತ ಶಾಸಕರು ಅಧ್ಯಕ್ಷರಾದ ಬಳಿಕ ಪರಿಸ್ಥಿತಿ ತಿಳಿ

ಮಂಗಳೂರು ಏರ್ ಪೋರ್ಟ್ ಗೆ ತುಳುನಾಡಿನ ಪವಾಡ ಪುರುಷರಾದ ಕೋಟಿ ಚನ್ನಯ್ಯರ ಹೆಸರು ಇಡುವಂತೆ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿಗೆ ಟ್ವೀಟ್ ಕೂಡಾ ಮಾಡಲಾಗಿದೆ.ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಅತೀ ಹೆಚ್ಚಾಗಿ ವಿಮಾನಯಾನ ಸೇವೆ ಮಾಡುವ ಮಂಗಳೂರು ಏರ್ ಪೋರ್ಟ್ ಖಾಸಗಿಕರಣವಾಗುವ ಮೂಲಕ ಸರ್ಕಾರಿ ಸ್ವಾಮ್ಯದ ಸಂಸ್ಥೆ ಯೊಂದು ಖಾಸಗಿ ಪಾಲಾಗಿದೆ.

ಕಾಂಗ್ರೆಸ್ ಖಾಸಗೀಕರಣ ಪ್ರಕ್ರಿಯೆಗೆ ರಾಜಕೀಯ ಟಚ್ ನೀಡುವ ಮೂಲಕ ಜನಾಕ್ರೋಶಕ್ಕೆ ಪುಷ್ಠಿ ನೀಡಿದ್ದು ಖಾಸಗಿ ಪ್ರಾಬಲ್ಯದ ಮುಂದೆ ಇದೆಲ್ಲಾ ವರ್ಕೌಟ್ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ..
Published by: G Hareeshkumar
First published: November 9, 2020, 6:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories