news18-kannada Updated:December 10, 2020, 7:20 AM IST
ಹೆಚ್.ಡಿ. ಕುಮಾರಸ್ವಾಮಿ.
ಕೋಲಾರ; ರಾಜ್ಯ ಹಾಗೂ ದೇಶದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೋಲಾರದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಾನು ಯಾವೊಂದು ಪಕ್ಷದ ಗುಲಾಮನಲ್ಲ, ದೇಶದ ರಾಜಕೀಯಲ್ಲಿ ನಾನು ಅತಿ ಸೂಕ್ಷ್ಮವಾಗಿ ಮುಂದೆ ಸಾಗುತ್ತಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಸೋಲಲು ಕಾಂಗ್ರೆಸ್ ಕಾರಣ. ಜೆಡಿಎಸ್ ಗೆ ಮತ ಕೊಡಬೇಡಿ. ಅದು ಬಿಜೆಪಿಯ ಬೀ ಟೀಂ ಎಂದು ಮುಸ್ಲಿಂ ಸಮುದಾಯ ಜನರಿಗೆ ಚುನಾವಣೆ ವೇಳೆ ಅಪ ಪ್ರಚಾರ ಮಾಡಿದ್ದು ಕಾಂಗ್ರೆಸ್ ಪಕ್ಷದ ನಾಯಕರು. ಕಾಂಗ್ರೆಸ್ ಈ ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಚುನಾವಣೆ ನಂತರ ಕೊನೆಗೆ ನಮ್ಮ ಬಳಿಗೆ ಬಂದು ಸಮ್ಮಿಶ್ರ ಸರ್ಕಾದ ರಚಿಸುವಂತೆ ನಮ್ಮ ಮನೆಯ ಬಾಗಿಲಿಗೆ ಬಂದಿದ್ದರು. ಅಧಿಕಾರಕ್ಕಾಗಿ ನಾನು ಅವರ ಮನೆ ಬಾಗಿಲಿಗೆ ಹೋಗಿಲ್ಲ. ಮುಸಲ್ಮಾನ ಬಂದುಗಳಿಗೆ ದೇವೇಗೌಡರು ಕೊಟ್ಟಷ್ಟು ಯೋಜನೆಗಳು ಕಾಂಗ್ರೆಸ್ ನವರು ಕೊಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ;ಕಳೆದ ವಿಧಾನಸಭೆ ಚುನಾವಣೆ ವೇಳೆ ನಾನು ರೈತರ ಸಾಲ ಮನ್ನಾ ಮಾಡುವ ಯೋಜನೆಯನ್ನು ರೈತರ ಮುಂದೆ ಇಟ್ಟಿದ್ದೆ. ಆದರೆ ನಮ್ಮ ಪಕ್ಷಕ್ಕೆ ಚುನಾವಣೆ ನಂತರ ಬಹುಮತದಿಂದ ಅಧಿಕಾರ ಸಿಗಲಿಲ್ಲ. ಆದರೂ ರೈತರ ಸಾಲಮನ್ನಾ ಮಾಡುವ ಉದ್ದೇಶದಿಂದಲೇ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದು, ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಇರಲಿಲ್ಲ.
ಇದನ್ನೂ ಓದಿ : ತಿಳುವಳಿಕೆ ಕೊರತೆ, ಎನ್ಆರ್ಸಿ ಸೆಂಟರ್ಗೆ ದಾಖಲಾಗದ ಮಕ್ಕಳು: ಮಹತ್ವಾಕಾಂಕ್ಷಿ ಯೋಜನೆಗೆ ಬೀದರ್ನಲ್ಲಿ ಹಿನ್ನಡೆ
ಒಬ್ಬ ಅಧಿಕಾರಿಯನ್ನ ನೇಮಿಸಲು ಕಾಂಗ್ರೆಸ್ ಸೂಚನೆ ಬೇಕಿತ್ತು. ಅಧಿಕಾರ ಇದ್ದಾಗ ಜೆಡಿಎಸ್ ಮುಖಂಡರಿಗೆ ನಾನು ಏನು ಮಾಡಿಲ್ಲ. ಯಾವುದೇ ಒಂದು ಬೋರ್ಡ್ ಚೇರ್ಮೆನ್ ಮಾಡಲು ಆಗಲಿಲ್ಲ ಎಂದು ಕಾರ್ಯಕರ್ತರ ಎದುರು ಬೇಸರ ವ್ಯಕ್ತಪಡಿಸಿದರು.
ಮುಂದೆ ರಾಜ್ಯದ ವಿಧಾನ ಚುನಾವಣೆಯಲ್ಲಿ 120 ಸ್ಥಾನಗಳನ್ನ ಜೆಡಿಎಸ್ ಗೆಲ್ಲಬೇಕು ಎನ್ನುವ ಕೊನೆ ಆಸೆ ನನಗಿದೆ. ಜೆಡಿಎಸ್ ಗೆ ಈ ಅವಕಾಶ ಸಿಕ್ಕಲ್ಲಿ , ಜನರ ಸಂಕಷ್ಟಗಳನ್ನ ಪರಿಹಾರ ಮಾಡಬಹುದು. ಹಾಗಾದಲ್ಲಿ ರಾಮರಾಜ್ಯ ಸ್ಥಾಪಿಸಲು ಸಹಕಾರಿಯಾಗುತ್ತೆ, ಸ್ಪಷ್ಟ ಬಹುಮತ ಪಡೆದು ಸರ್ಕಾರ ನಡೆಸಬೇಕು. ಅದಕ್ಕಾಗಿ ರಾಜ್ಯ ಉದ್ದಕ್ಕು ಹೋರಾಟ ನಡೆಸುವ ಒಂದು ಆಸೆಯಿದೆ ಎಂದರು.
Published by:
MAshok Kumar
First published:
December 10, 2020, 7:20 AM IST